ನವದೆಹಲಿ: ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆ ರಾಮಂದಿರ ದೇಣಿಕೆ ಕಳ್ಳತನ ಪ್ರಕರಣದ ಕುರಿತು ದೊಡ್ಡ ಬೆಳವಣಿಯಾಗಿದೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್‌ನ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರಿಗೆ ವಿಶೇಷ ತನಿಖಾ ತಂಡ (SIT) ಕ್ಲೀನ್ ಚಿಟ್ ನೀಡಿದೆ ಎಂದು ಎನ್ಡಿಟಿವಿ ವಾಹಿನಿ ವರದಿ ಮಾಡಿದೆ.
ಶ್ರೀ ರಾಮ ಮಂದಿರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಮೇಲಿರುವ ಆರೋಪಗಳನ್ನ ಈ ಮುಂಚೆಯೆ ನಿರಾಕರಿಸಿದ್ದರು. ವಿಚಾರಣೆ ವೇಳೆ ತಾವೇ ಸ್ವತಃ ದೂರು ದಾಖಲಿಸಿದ್ದಾಗಿ ಮತ್ತು ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡಲು ತಾವು ಬದ್ದರಾಗಿದ್ದಾಗಿ ಅವರು ತಿಳಿಸಿದರು. ದೇಣಿಗೆ ಸಂಗ್ರಹದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಾಗ, ಜೂನ್ 27ರಂದು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಇದೇ ವೇಳೆ, ಉತ್ತರ ಪ್ರದೇಶ ಗೃಹ ಇಲಾಖೆಯು SIT ಸಲ್ಲಿಸಿದ ಈ ಅಂತಿಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಿದೆ. ಉತ್ತರಪ್ರದೇಶ ಸರ್ಕಾರ ಜೂನ್ 13ರಂದು ದೇವಸ್ಥಾನ ಟ್ರಸ್ಟ್ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಿತು. ಜೂನ್ 23ರಂದು ಪ್ರಾಥಮಿಕ ವರದಿಯನ್ನು ಈ ತಂಡ ಸಲ್ಲಿಸಿತು. ಅದಾದ ಬಳಿಕ ಟ್ರಸ್ಟ್ ಸದಸ್ಯರು ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸುತ್ತಾರೆ. ಜೂನ್ 25ರಂದು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು..