Search


ದೀಪಾವಳಿಗೂ ಮುನ್ನವೇ ತೆರೆ ಮೇಲೆ ಬರಲಿದೆ "ರಾಮಾಯಣ ಪಾರ್ಟ್‌ 1" ಚತ್ರ

ಸಿನಿ ದುನಿಯಾದಲ್ಲಿ ಸಾಕಷ್ಟು ನಿರೀಕ್ಷೆ ಉಂಟುಮಾಡಿರುವ ಸಿನಿಮಾಗಳ ಪೈಕಿ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ, ಯಶ್‌ ಅಭಿನಯದ  ‘ರಾಮಾಯಣ: ಪಾರ್ಟ್ 1’ಚಿತ್ರವೂ ಕೂಡ ಒಂದು. ಚಿತ್ರ ತಂಡ ನೀಡಿದ ಮಾಹಿತಿ ಪ್ರಕಾರ ಈ ಸಿನಿಮಾದ ಮೊದಲ ಭಾಗ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಬೇಕಿತ್ತು, ಆದರೆ ಈಗ ಸಿಗುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಅಂದುಕೊಂಡಿದ್ದಕ್ಕಿಂತ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30, 2026ರಂದೇ ಸಿನಿಮಾ ಥಿಯೇಟರ್‌ಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.

ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್, ಸಾಯಿ ಪಲ್ಲವಿ ಮತ್ತು ಸನ್ನಿ ಡಿಯೋಲ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ರಾಮಾಯಣ: ಪಾರ್ಟ್ 1’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಪೌರಾಣಿಕ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾಗೆ ನಿತೇಶ್‌ ತಿವಾರಿ ಅಕ್ಷನ್‌ ಕಟ್‌ ಹೇಳುತ್ತಿದ್ದಾರೆ,  ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ದೀಪಾವಳಿ ಹಬ್ಬದ ರಜೆಯ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಆದರೆ, ಹಬ್ಬದ ವಾರದಲ್ಲೇ ರಿಲೀಸ್ ಮಾಡುವ ಬದಲು, ಒಂದು ವಾರ ಮೊದಲೇ ಸಿನಿಮಾ ರಿಲೀಸ್ ಮಾಡಿ ಸಿನಿಮಾಗೆ ಬಾಯ್ಮಾತಿನ ಪ್ರಚಾರ ನೀಡಲು ತಂಡ ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ.

ಮೊದಲ ವಾರವೇ ಸಿನಿಮಾ ಭದ್ರವಾಗಿ ನೆಲೆಯೂರಿದರೆ, ಎರಡನೇ ವಾರದಲ್ಲಿ ಬರುವ ದೀಪಾವಳಿ ರಜೆಗಳ ಸರಣಿಯಲ್ಲಿ ಚಿತ್ರದ ಕಲೆಕ್ಷನ್ ಮೊದಲ ವಾರಕ್ಕಿಂತ ದುಪ್ಪಟ್ಟಾಗಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಸದ್ಯ ವಿತರಕರೊಂದಿಗೆ ಬರೋಬ್ಬರಿ 450 ಕೋಟಿ ಬಿಸಿನೆಸ್ ಮಾತುಕತೆ ನಡೆಯುತ್ತಿದ್ದು, ಡೀಲ್ ಕ್ಲೋಸ್ ಆದ ತಕ್ಷಣವೇ ಅಕ್ಟೋಬರ್ 30ರ ಹೊಸ ರಿಲೀಸ್ ಡೇಟ್ ಅಧಿಕೃತವಾಗಿ ಹೊರಬೀಳಲಿದೆ.

By thebigbulletin.com - 23-05-2026


Ads in Post