"ಈ ಸಲನೂ ಕಪ್ RCB" ಪಾಲಾಗಿದೆ, ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆದ ಕೊನೆಯ ಕಾದಾಟದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಕಳೆದ ವರ್ಷ ಮೊದಲ ಕಪ್ ಗೆದ್ದು 18 ವರ್ಷಗಳ ಕನಸನ್ನ ನನಸಾಗಿಸಿಕೊಂಡಿದ್ದ ಆರ್‌ಸಿಬಿ, ಈ ಬಾರಿಯೂ ಅಧ್ಬುತ ಪ್ರದರ್ಶನ ನೀಡುವ ಮೂಲಕ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ. ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದ ತಂಡಗಳ ಸಾಲಿಗೆ ಆರ್‌ಸಿಬಿ ಕೂಡ ಸೇರ್ಪಡೆಯಾಗಿದೆ.
ಗುಜರಾತ್ ವಿರುದ್ದದ ಫೈನಲ್ ಪಂದ್ಯದಲ್ಲಿ ಸಂಘಟಿತ ಹೋರಾಟ ನಡೆಸಿದ ಆರ್‌ಸಿಬಿ ತಂಡ 6 ವಿಕೆಟ್‌ಗಳಿಂದ ಗೆದ್ದು ಬೀಗಿದ್ದು, ಕಿಂಗ್ ಕೊಹ್ಲಿ ಅಧ್ಬುತ ಬ್ಯಾಟಿಂಗ್ ಫಲವಾಗಿ ಮತ್ತೊಮ್ಮೆ ಕಪ್ ಎತ್ತಿ ಹಿಡಿದಿದೆ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಜತ್ ಪಾಟೀದಾರ್ ಪಡೆ ಗುಜರಾತ್ ತಂಡವನ್ನ 154ರನ್‌ಗಳಿಗೆ ಕಟ್ಟಿ ಹಾಕಿತು. ಬೆಂಗಳೂರಿನ ಪರ ರಸಿಕ್ ಸಲಾಂದಾರ್ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಹೇಜಲ್‌ವುಡ್ ತಲಾ 2 ವಿಕೆಟ್ ಪಡೆದು ಮಿಂಚಿದರು.
155 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ದೊರೆಯಿತು, ಆರಂಭಿಕ ಆಟಗಾರರಾಗಿ ಬಂದ ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ, ಗುಜರಾತ್ ಬೌಲರ್‌ಗಳ ಬೆವರಿಳಿಸಿದರು, ಬೌಡರಿ, ಸಿಕ್ಸರ್‌ಗಳ ಮೂಲಕವೇ ರನ್ ಪೇರಿಸುತ್ತಿದ್ದ ವೆಂಕಟೇಶ್ ಅಯ್ಯರ್ 32 ರನ್ ಗಳಿಸಿದ್ದ ವೇಳೆ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.

ಇದಾದ ನಂತರ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗ ಕೊಂಚ ಕಾಲ ಅಸ್ಥಿರವಾಯಿತು, ದೇವದತ್ ಪಡಿಕಲ್ ಕೇವಲ 1 ರನ್ ಗಳಿಸಿ ರಬಾಡ ಎಸೆತದಲ್ಲಿ ಕ್ಯಾಚ್ ಒಪ್ಪಿಸಿದರು, 9ನೇ ಓವರ್‌ನಲ್ಲಿ ಬೌಲಿಂಗ್ ಇಳಿದ ರಷೀದ್ ಖಾನ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು, ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ರಜತ್ ಪಾಟಿದಾರ್ ಕೇವಲ 15 ರನ್‌ಗಳಿಸಿ ಔಟ ಆದರೆ, ಕೃನಾಲ್ ಪಾಂಡ್ಯ 1 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಆದರೆ ಕೊನೆವರೆಗೂ ಸ್ಕ್ರೀಸ್‌ನಲ್ಲಿ ನಿಂತು ಹೋರಾಡಿದ ವಿರಾಟ್ ಕೊಹ್ಲಿ (75) ಅದ್ಬುತ್ ಬ್ಯಾಟಿಂಗ್ ಪ್ರದರ್ಶನ ನೀಡಿ, ತಂಡದ ಗೆಲುವಿನ ರುವಾರಿಯಾದರು, ಇವರ ಜೊತೆ ಟೀಮ್ ಡೇವಿಡ್ ಕೂಡ ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಸಹಾಯ ಮಾಡಿದರು.