Search


ಈ ಸಲ ಕೂಡ ಕಪ್‌ ನಮ್ದೆ; RCB ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಸೆಹ್ವಾಗ್‌

2026ನೇ ಸಾಲಿನ ಐಪಿಎಲ್‌ (IPL 2026) ಟೂರ್ನಿಯ ಲೀಗ್‌ ಪಂದ್ಯಗಳು ಮುಕ್ತಾಯ ಹಂತದಲ್ಲಿರುವ ಸಮಯದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಆರ್‌ಸಿಬಿಯ ಕುರಿತು ಸ್ಪೋಟಕ ಭವಿಷ್ಯ ನುಡಿದಿದ್ದು. ಈ ಬಾರಿಯೂ ಆರ್‌ಸಿಬಿ ತಂಡವೇ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ ಎಂದು ಹೇಳಿದ್ದಾರೆ. 

ಆರಂಭದಿಂದಲೂ ಅಮೋಘ ಪ್ರದರ್ಶನ ನೀಡುತ್ತ ಬಂದಿರುವ RCB, ಮೊದಲ ತಂಡವಾಗಿ ಫ್ಲೇಆಫ್‌ಗೆ ಏರಿದೆ. ಆರ್​ಸಿಬಿಯ ಸಾಂಘಿಕ ಹೋರಾಟವನ್ನು ವೀಕ್ಷಿಸಿರುವ ಹಲವಾರು ಮಾಜಿ ಕ್ರಿಕೆಟಿಗರು ಈ ಬಾರಿಯೂ ಆರ್​ಸಿಬಿಯೇ ಚಾಂಪಿಯನ್ ಎನ್ನುತ್ತಿದ್ದಾರೆ. ಈ ರೀತಿಯಾಗಿ ಭವಿಷ್ಯ ನುಡಿದವರಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು.

ಟ್ರೋಫಿ ರೇಸ್‌ನಲ್ಲಿರೋ ಆರ್‌ಸಿಬಿಗೆ ಗುಜರಾತ್‌ ಸವಾಲು

ಕ್ರಿಕ್‌ಬಜ್‌ನಲ್ಲಿ ಆರ್​ಸಿಬಿ ತಂಡದ ಪ್ರದರ್ಶನದ ಕುರಿತು ಮಾತನಾಡಿದ ವೀರೇಂದ್ರ ಸೆಹ್ವಾಗ್, "ಚಾಂಪಿಯನ್ ತಂಡವು ಅಗ್ರ ಎರಡು ಸ್ಥಾನಗಳಲ್ಲಿ ಅರ್ಹತೆ ಪಡೆಯಬೇಕು. ಅದರಂತೆ ಆರ್​ಸಿಬಿ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ವರ್ಷವೂ ಅವರೇ ಟ್ರೋಫಿಯನ್ನು ಎತ್ತಿಹಿಡಿಯುತ್ತಾರೆ ಎಂದು ತೋರುತ್ತದೆ" ಎಂದಿದ್ದಾರೆ. ಆದಾಗ್ಯೂ, ಆರ್​ಸಿಬಿ ಎದುರಿಸುತ್ತಿರುವ ದೊಡ್ಡ ಸವಾಲನ್ನು ಸಹ ಉಲ್ಲೇಖಿಸಿರುವ ಸೆಹ್ವಾಗ್. ಟ್ರೋಫಿ ಗೆಲುವಿನಲ್ಲಿ ಆರ್‌ಸಿಬಿಗೆ ಕಠಿಣ ಹೋರಾಟ ನೀಡಬಲ್ಲ ತಂಡವೆಂದರೆ ಅದು ಗುಜರಾತ್ ಟೈಟಾನ್ಸ್.

ಒಂದು ವೇಳೆ ಗುಜರಾತ್ ತಂಡ ಕೂಡ ಅಗ್ರ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆದರೆ, ಆರ್‌ಸಿಬಿಗೆ ಅದು ಕಷ್ಟಕರವಾಗಿರುತ್ತದೆ. ಏಕೆಂದರೆ ಗುಜರಾತ್ ಟೈಟಾನ್ಸ್ ಕೂಡ ಉತ್ತಮ ಬೌಲಿಂಗ್ ಘಟಕವನ್ನು ಹೊಂದಿದೆ. ಈ ಎರಡೂ ತಂಡಗಳ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಬಲಿಷ್ಠವಾಗಿರುವುದರಿಂದ ಪ್ಲೇಆಫ್‌ನಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುವುದನ್ನು ನೋಡಲು ಖುಷಿಯಾಗುತ್ತದೆ. ಉಭಯ ತಂಡಗಳ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ ಎಂದು ಸೆಹ್ವಾಗ್ ಎಚ್ಚರಿಸಿದ್ದಾರೆ.

By thebigbulletin.com - 19-05-2026


Ads in Post