Search


IPL ಟ್ರೋಫಿ ಗೆದ್ದ RCBಗೆ ಸಿಗುತ್ತೇ ಭಾರಿ ಬಹುಮಾನ ; ಬೇರೆ ತಂಡಗಳಿಗೆ ಸಿಕ್ಕ ಬಹುಮಾನವೆಷ್ಟು ಗೊತ್ತಾ...!

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್‌ (IPL 2026) ಟೂರ್ನಿ ಫೈನಲ್‌ನಲ್ಲಿ ಆರ್‌ಸಿಬಿ (RCB) ತಂಡ ಗೆಲುವು ಸಾಧಿಸಿದ್ದು, ಇದೀಗ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸಿಗುವ ಬಹುಮಾನವೆಷ್ಟು, ರನರ್‌ ಅಪ್‌ ಆದವರಿಗೆ ಸಿಕ್ಕುವ ಮೊತ್ತವೆಷ್ಟು ಎಂಬ ಕುರಿತು ಚರ್ಚೆಯಾಗುತ್ತಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಾಂಪಿಯನ್ ತಂಡಕ್ಕೆ 20 ರೂ. ಕೋಟಿ..!

ಐಪಿಎಲ್‌ನಲ್ಲಿ ಪ್ಲೇಆಪ್‌ ಹಂತಕ್ಕೆ ಬರುವ ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಬಹುಮಾನ ನೀಡಲಿದ್ದು, ಬಹುಮಾನ ನೀಡಲಿಕ್ಕಾಗಿಯೇ 46.5ಕೋಟಿಯಷ್ಟು ಹಣವನ್ನ ಬಿಸಿಸಿಐ ಮೀಸಲಿಟ್ಟಿದೆ. ಆ ಪ್ರಕಾರ ಚಾಂಪಿಯನ್‌ ಆಗಿರುವ ಆರ್‌ಸಿಬಿ ತಂಡಕ್ಕೆ 20 ಕೋಟಿ ರೂ. ಬಹುಮಾನ ದೊರೆಯಲಿದೆ. ಇನ್ನು ಫೈನಲ್‌ನಲ್ಲಿ ಸೋಲುಂಡ ಗುಜರಾತ್‌ ತಂಡಕ್ಕೂ ದೊಡ್ಡ ಮೊತ್ತದ ಬಹುಮಾನವೇ ಸಿಕ್ಕಿದ್ದು, ರನ್ನರ್‌ ಅಪ್‌ ತಂಡಕ್ಕೆ 13 ಕೋಟಿ ಬಹುಮಾನ ದೊರೆಯಲಿದೆ. 

ಇನ್ನು ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿರುವ ರಾಜಸ್ಥಾನ ರಾಯಲ್ಸ್‌ (RR) ತಂಡಕ್ಕೆ 7 ಕೋಟಿ ರೂ., 4ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡಕ್ಕೆ 6.5 ಕೋಟಿ ರೂ ದೊರೆಯುತ್ತದೆ, ಐದನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗೆ ಇರುವ ತಂಡಗಳಿಗೆ ಅಧಿಕೃತ ಬಹುಮಾನ ಹಣ ನೀಡುವುದಿಲ್ಲ. ಆದರೆ ಪ್ರಾಯೋಜಕತ್ವ, ಟಿಕೆಟ್ ಮಾರಾಟ ಮತ್ತು ಪ್ರಸಾರ ಹಕ್ಕುಗಳ ಮೂಲಕ ಆದಾಯ ಗಳಿಸುತ್ತವೆ.

ಯಾವ ರೀತಿ ಹಂಚಿಕೆಯಾಗುತ್ತೆ ಬಹುಮಾನದ ಹಣ...!

ಬಿಸಿಸಿಐ ನಿಯಮಗಳ ಪ್ರಕಾರ ತಂಡಗಳಿಗೆ ಸಿಗುವ ಹಣದಲ್ಲಿ ಶೇಕಡಾ 50%ರಷ್ಟು ಹಣ ಫ್ರಾಂಚೈಸಿಗಳಿಗೆ ದೊರೆಯಲಿದ್ದು, ಉಳಿದ ಹಣವನ್ನ ಆಟಗಾರರಿಗೆ ನೀಡಲಾಗುತ್ತದೆ. ಜೊತೆಗೆ ಆರೆಂಜ್‌ ಕ್ಯಾಪ್‌, ಪರ್ಪಲ್‌ ಕ್ಯಾಪ್‌ ಸೇರಿದಂತೆ ವೈಯಕ್ತಿಕ ಸಾಧನೆ ಮಾಡಿದ ಆಟಗಾರರಿಗೆ 1 ಕೋಟಿಯವರೆಗೆ ಬಹುಮಾನ ದೊರೆಯುತ್ತದೆ. 

By Ravikumar - 01-06-2026


Ads in Post