ಲಕ್ನೋ: ರಾಮ ಮಂದಿರ ಹುಂಡಿ ಹಣ ಕಳ್ಳತನ ಪ್ರಕರಣದ ನಂತರ ಇದೀಗ, ರಾಮ ಮಂದಿರದ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನ ನೇಮಕ ಮಾಡಿದ್ದಾರೆ, ಜೀತೇಂದ್ರ ಮಿಶ್ರಾ ಅವರು ಆಪರೇಷನ್ ಸಿಂಧೂರದ ಸಮಯದಲ್ಲಿ ಪಶ್ಚಿಮ ವಾಯು ಕಮಾಂಡ್ ಮುಖ್ಯಸ್ಥರಾಗಿದ್ದರು. ಜೊತೆಗೆ ಅನುಭವಿ ಯುದ್ಧ ವಿಮಾನ ಪೈಲಟ್ ಆಗಿದ್ದರು.
ಕಳೆದ ಕೆಲ ತಿಂಗಳಿಂದ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಅಯೋಧ್ಯೆ ರಾಮ ಮಂದಿರ ಹುಂಡಿ ಕಳ್ಳತನದ ಪ್ರಕರಣ ನಂತರ ಇದೀಗ, ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ (Ayodhya Ram Temple Trust) ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ನಿವೃತ್ತ ಹಿರಿಯ ಅಧಿಕಾರಿಯಾಗಿದ್ದು, ವಾಯುಪಡೆಯ ಪಶ್ಚಿಮ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಸುಮಾರು 38 ವರ್ಷಗಳಿಂದ ಜಿತೇಂದ್ರ ಮಿಶ್ರಾ ಅವರು ವಾಯುಪಡೆಯಿಂದ ಪ್ರಮುಖ ಆಡಳಿತ ಮತ್ತು ಕಮಾಂಡ್ ಹುದ್ದೆಗಳನ್ನು ಅಲಂಕಡಿಸಿದ್ದಾರೆ. ಇವುಗಳಲ್ಲಿ ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಏರ್‌ಕ್ರಾಫ್ಟ್ & ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್‌ನ (ASTE) ಮುಖ್ಯ ಪರೀಕ್ಷಾ ಪೈಲಟ್ (Chief Test Pilot), ಎರಡು ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್, ವಾಯುನೆಲೆ ಕಚೇರಿಯ ನಿರ್ದೇಶಕ, ಪ್ರಿನ್ಸಿಪಾಲ್ ಡೈರೆಕ್ಟರ್ (ASR) ಹಾಗೂ ಸಹಾಯಕ ವಾಯುಪಡೆ ಮುಖ್ಯಸ್ಥ (ಯೋಜನೆಗಳು), ASTE ಕಮಾಂಡೆಂಟ್ ಮತ್ತು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಉಪಮುಖ್ಯಸ್ಥ ಮುಂತಾದ ಜವಾಬ್ದಾರಿಗಳನ್ನು ನಿರ್ವಹಸಿದ್ದಾರೆ.
ಈಗಾಗಲೇ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂವರು ಹೊಸ ಟ್ರಸ್ಟಿಗಳ ನೇಮಕ ಮಾಡಿದೆ. ದೆಹಲಿ ಮೂಲದ ಮಹೇಶ್ ಭಾಗ್ಚಂದ್ಕ, ಅಯೋಧ್ಯೆಯ ನಿವಾಸಿ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಕ ಮಾಡಲಾಗಿದೆ. ಮಹೇಶ್ ಭಾಗ್‌ಚಂದ್ಕಾ ಅವರು ದಿವಂಗತ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಇನ್ನೂ ಮದನ್ ಮೋಹನ್ ಪಾಂಡೆ ಮತ್ತು ನಿರ್ಮಲಾ ಯಾದವ್ ಅವರ ಹೆಸರನ್ನು ನೇಮಕಾತಿಯ ಕುರಿತು ರಾಮಮಂದಿರ ಟ್ರಸ್ಟ್‌ನ ಪ್ರಮುಖ ಸಭೆಯಲ್ಲಿ ನಿರ್ಧರಿಸಲಾಗಿದೆ. ಇ