Search


ಇರುವೆಗಳ ‘ಸೂಪರ್ ಸಿಟಿ’ ಕಂಡು ಬೆಚ್ಚಿಬಿದ್ದ ವಿಜ್ಞಾನಿಗಳು; ಇದು ಇರುವೆಗಳ ಮಹಾನಗರ..!

ಭೂಮಿ ಮೇಲಿರುವ ಅತಿ ಬುದ್ದಿವಂತ ಪ್ರಾಣಿಗಳಲ್ಲಿ ಮನುಷ್ಯ ಮೊದಲ ಸ್ಥಾನದಲ್ಲಿದ್ದಾನೆ. ನಾಗರಿಕ ಸಮಾಜದಲ್ಲಿ ಬದುಕುವ ಮನುಷ್ಯ ಸಂವಹನಕ್ಕಾಗಿ ಭಾಷೆ ಕಲಿತಿದ್ದಾನೆ, ಗಾಳಿ-ಮಳೆಯಿಂದ ರಕ್ಷಸಿಕೊಳ್ಳಲು ಉಡುಪು ಧರಿಸಿದ್ದಾನೆ, ನೆಮ್ಮದಿಯಾಗಿ ಮಲಗಲು ಐಷರಾಮಿ ಮನೆಗಳನ್ನ ಕಟ್ಟಿಕೊಂಡಿದ್ದಾನೆ. ತನ್ನ ಕೆಲಸವನ್ನ ಸುಲಭಗೊಳಿಸಲು ಬೇಕಾಗುವ ವಸ್ತುಗಳನ್ನ ಆವಿಷ್ಕರಿಸಿಕೊಂಡಿದ್ದಾನೆ.

ಆದರೆ ಮನುಷ್ಯನ ಹೊರತಾಗಿಯು ಪ್ರಕೃತಿ ಅನೇಕ ಪ್ರಾಣಿ, ಪಕ್ಷಿಗಳನ್ನ, ಜೀವ-ಜಂತುಗಳನ್ನ ಭೂಮಿ ಮೇಲೆ ಸೃಷ್ಟಿಸಿದೆ. ಈ ಜೀವಿಗಳ ಪೈಕಿ ಬ್ರೆಜಿಲ್‌ನ ಇರುವೆ ಪ್ರಭೇದವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು. ಈ ಇರುವೆಗಳು ಭೂಮಿಯಾಳದೊಳಗೆ ಒಂದು ಭೂಗತ ನಗರವನ್ನೇ ಸೃಷ್ಟಿ ಮಾಡಿಕೊಂಡಿದ್ದು. ಈ ಭೂಗತ ನಗರದಲ್ಲಿ ಆಹಾರ ಸಂಗ್ರಹಣೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನ ನಿರ್ಮಿಸಿಕೊಂಡಿರುವುದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ.

ಬ್ರೆಜಿಲ್‌ನ ವಿಶಾಲವಾದ ಸೆರಾಡೋ (Cerrado) ಪ್ರದೇಶದಲ್ಲಿ ವಿಜ್ಞಾನಿಗಳು ಅಚ್ಚರಿಯ ಭೂಗತ ಲೋಕವೊಂದನ್ನು ಪತ್ತೆಹಚ್ಚಿದ್ದಾರೆ. ಅತಿ ಸಣ್ಣ ಲೀಫ್-ಕಟ್ಟರ್ ಇರುವೆಗಳು ನಿರ್ಮಿಸಿದ ಈ ಬೃಹತ್ ಸುರಂಗ ಜಾಲವನ್ನು ಸಂಶೋಧಕರು “ಮಾನವರು ನಿರ್ಮಿಸಿದ ನಗರದಂತಿರುವ ವ್ಯವಸ್ಥೆ” ಎಂದು ವರ್ಣಿಸಿದ್ದಾರೆ. ಈ ಅನ್ವೇಷಣೆಯನ್ನು ಪ್ರೊಫೆಸರ್ ಲೂಯಿಸ್ ಕಾರ್ಲೋಸ್ ಫೋರ್ಟಿ ಅವರ ನೇತೃತ್ವದ ತಂಡ ನಡೆಸಿದ್ದು. ಈ ರಚನೆಯನ್ನ ತಿಳಿಯಲು  ವಿಜ್ಞಾನಿಗಳು ಪ್ರಯೋಗವೊಂದನ್ನು ನಡೆಸಿದರು. ದೊಡ್ಡ ಇರುವೆ ಗೂಡಿನೊಳಗೆ  ವಿಜ್ಞಾನಿಗಳು ಸುಮಾರು 10 ಟನ್‌ ದ್ರವ ರೂಪದ ಸಿಮೆಂಟ್‌ ಸುರಿದು, ಇರುವೆ ಗೂಡಿನ ಪ್ರತಿ ಜಾಗವೂ ಸಿಮೆಂಟ್‌ನಿಂದ ಆವೃತ್ತವಾಗುವಂತೆ ನೋಡಿಕೊಂಡರು. ಆ ಸಿಮೆಂಟ್ ಗಟ್ಟಿಯಾದ ಬಳಿಕ ವಿಜ್ಞಾನಿಗಳು ಜಾಗವನ್ನು ಎಚ್ಚರಿಕೆಯಿಂದ ಅಗೆದಾಗ ಕಂಡ ದೃಶ್ಯ ಬೆಚ್ಚಿಬೀಳಿಸಿದೆ.

ಭೂಮಿಯಾಳದಲ್ಲಿ ಇರುವೆಗಳು ನಿರ್ಮಿಸಿದ್ದ ನಗರವನ್ನ ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸಿದರು. ಈ ವೇಳೆ ಬೃಹತ್‌ ಸುರಂಗ ಜಾಲ, ಸಂಪರ್ಕ ಮಾರ್ಗಗಳು, ಗಾಳಿ ಹರಿವಿನ ವ್ಯವಸ್ಥೆಗಳು ಮತ್ತು ಆಹಾರ ಉತ್ಪಾದನೆಗಾಗಿ ನಿರ್ಮಿಸಿದ ವಿಶೇಷ ಕೊಠಡಿಗಳು ಪತ್ತೆಯಾದವು. ಅಷ್ಟೇ ಅಲ್ಲದೆ ಗೂಡಿನ ಕೆಲವು ಭಾಗಗಳಲ್ಲಿ ಶಿಲೀಂದ್ರ ಬೆಳೆಸಲಾಗುತ್ತಿದ್ದು. ಇದು ಇರುವೆಗಳ ಮುಖ್ಯ ಆಹಾರವಾಗಿದೆ. ಜೊತೆಗೆ ಗೂಡಿನ ಕೆಲವು ಕೊಠಡಿಗಳನ್ನು ತ್ಯಾಜ್ಯ ವಿಲೇವಾರಿ ಕೇಂದ್ರಗಳಾಗಿ ಬಳಸಲಾಗುತ್ತಿತ್ತು ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.  ಈ ಭಾರಿ ರಚನೆಯನ್ನ ನಿರ್ಮಿಸಲು ಸುಮಾರು  ಇರುವೆಗಳು ಒಟ್ಟಾಗಿ  ಸುಮಾರು 40 ಟನ್‌ ಮಣ್ಣನ್ನ ಗೂಡಿನಿಂದ ಹೊರಗೆ ಹಾಕಿದ್ದು. ಇದು ಇರುವೆಗಳ ಸಮೂಹ ಬುದ್ದಿವಂತಿಕೆ ಮತ್ತು ಸಹಕಾರದ ಅಸಾಧಾರಣ ಮಟ್ಟ ಬೆಳಕಿಗೆ ಬಂದಿದೆ.

ಈ ಅನ್ವೇಷಣೆ ವಿಜ್ಞಾನಿಗಳನಷ್ಟೇ ಅಲ್ಲದೆ, ಸಾರ್ವಜನಿಕರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅತಿ ಸಣ್ಣ ಕೀಟಗಳು ಒಟ್ಟಾಗಿ ಕಾರ್ಯನಿರ್ವಹಿಸಿ, ಅತ್ಯಂತ ಜಟಿಲ ಮತ್ತು ಪರಿಣಾಮಕಾರಿ ರಚನೆಗಳನ್ನು ನಿರ್ಮಿಸಬಲ್ಲವು ಎಂಬುದಕ್ಕೆ ಇದು ಜೀವಂತ ಉದಾಹರಣೆ ಎಂದು ಸಂಶೋಧಕರು ಹೇಳಿದ್ದಾರೆ. ತಜ್ಞರ ಅಭಿಪ್ರಾಯದಲ್ಲಿ, ಈ “ಭೂಗತ ಇರುವೆಗಳ ನಗರ”ವು ಸಾಮಾಜಿಕ ಕೀಟಗಳ ಸಾಮೂಹಿಕ ಬುದ್ಧಿಮತ್ತೆ ಮತ್ತು ಇಂಜಿನಿಯರಿಂಗ್ ಸಾಮರ್ಥ್ಯವು ಮಾನವ ನಿರ್ಮಾಣ ವ್ಯವಸ್ಥೆಗಳಷ್ಟೇ ಸಂಘಟಿತ ಮತ್ತು ಪರಿಣಾಮಕಾರಿಯಾಗಿರಬಹುದು ಎಂಬುದನ್ನು ತೋರಿಸುಸಿದೆ. 

By thebigbulletin.com - 20-05-2026


Ads in Post