Search


ಶೂಟಿಂಗ್‌ ಚಾಂಪಿಯನಶಿಪ್‌ನಲ್ಲಿ 4 ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ ಸಿದ್ದರಾಮಯ್ಯರಿಂದ ಅಭಿನಂದನೆ

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಸೇಂಟ್ ಜೋಸೆಫ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪಿ. ಅಭಯಸೂರ್ಯ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. 

ಹತ್ತು ಮೀಟರ್‌ನ ಓಪನ್ ಏರ್ ಸೈಟ್ ರೈಫಲ್ ಇವೆಂಟ್ ವಿಭಾಗದಲ್ಲಿ ಅಭಯ್‌ಸೂರ್ಯ ಈ ಸಾಧನೆ ಮಾಡಿದ್ದು. ಪುರುಷರ ವಿಭಾಗ, ಪುರುಷರ ಜೂನಿಯರ್ ವಿಭಾಗ, ಯುವ ಮತ್ತು ಪುರುಷರ ಉಪ ಯುವ ವಿಭಾಗದಲ್ಲಿ ಅಭಯ್ ಚಿನ್ನದ ಪದಕ ಗಳಿಸಿದ್ದಾರೆ. 

ಇನ್ನು ಪದಕ ವಿಜೇತ ಅಭಯ್ ಸೂರ್ಯ ಅವರನ್ನು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು. ಅಭಯ್ ಸೂರ್ಯ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ‌ ಸಲಹೆಗಾರ ಕೆ.ವಿ.‌ಪ್ರಭಾಕರ್ ಮತ್ತು ಮೀರಾ ದಂಪತಿಯ ಪುತ್ರ.

By Ravikumar - 30-06-2026


Ads in Post