Search


ನೀಟ್‌ ಮರು ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿ ಆತ್ಮಹತ್ಯೆ ಸಾವಿನ ಸಂಖ್ಯೆ 14ಕ್ಕೆ ಏರಿಕೆ..!

ಡೆಹ್ರಾಡೂನ್: ನೀಟ್ (NEET) ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 23 ವರ್ಷದ ಯುವತಿ (student suicide) ಡೆತ್‌ನೋಟ್‌ (Death note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. ಈ ಮೂಲಕ ನೀಟ್‌ ವಿದ್ಯಾರ್ಥಿಗಳ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಮೃತ ಯುವತಿಯನ್ನು ರಿಯಾ ಕುಮಾರಿ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿನಿ ಕಳೆದ ಮೇನಲ್ಲಿ ನಡೆದ ನೀಟ್‌ ಪರೀಕ್ಷೆಯನ್ನ ಬರೆದಿದ್ದರು, ಉತ್ತಮ ಅಂಕದ ನಿರೀಕ್ಷೆಯಲ್ಲಿಯೂ ಕೂಡ ಇದ್ದರು, ಅಷ್ಟೇ ಅಲ್ಲದೇ ರಿಯಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಪಿಯುಸಿಯಲ್ಲಿ ಶೇ.96.7 ಅಂಕ ಗಳಿಸಿ ಕಾಲೇಜ್‌ ಟಾಪರ್‌ ಕೂಡ ಆಗಿದ್ದರು. ಆದರೆ  ನೀಟ್‌ ಮರುಪರೀಕ್ಷೆ ಕುರಿತು ಒತ್ತಡದಲ್ಲಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. 

ಘಟನೆ ನಡೆದ ದಿನ ತಾಯಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ರಿಯಾ ಮೃತಪಟ್ಟಿರುವುದು ಕಂಡುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ಕೋಣೆಯಲ್ಲಿ ಡೆತ್‌ನೋಟ್‌ ಕೂಡ ಸಿಕ್ಕಿದೆ.

ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿರುವ ರಿಯಾ, ʻಅಮ್ಮ ಅಪ್ಪ ಐ ಲವ್‌ ಯೂ.. ನಿಮಗೆ ಭಾರವಾಗಿದ್ದಕ್ಕೆ ಕ್ಷಮಿಸಿ. ಇದು ಯಾರ ತಪ್ಪೂ ಅಲ್ಲ, ಇದು ನನ್ನದೇ ಆದ ಅಸಮರ್ಥತೆ. ಇದನ್ನು ಕೊನೆಗೊಳಿಸುವುದೇ ಉತ್ತಮ ಆಯ್ಕೆ. ನಾನು ನಿನ್ನನ್ನು ಪ್ರೀತಿಸುತ್ತೇನೆ.. ಕ್ಷಮಿಸಿ. ಎಂದು ಬರೆದಿದ್ದಾಳೆ. 

By Ravikumar - 19-06-2026


Ads in Post