ನವದೆಹಲಿ : ಮಧ್ಯಪ್ರಾಚ್ಯದ ಯುದ್ದದ ಬಿಸಿ ನಿಧಾನವಾಗಿ ಭಾರತಕ್ಕೆ ತಟ್ಟಲು ಆರಂಭಿಸಿದೆ. ದೇಶದಲ್ಲಿ ಇಂಧನ ಕೊರತೆಯನ್ನ ಸರಿದೂಗಿಸಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನ ಅರ್ಧದಷ್ಟು ಕಡಿತಗೊಳಿಸಿದ್ದು. ಈ ಮೂಲಕ ದೇಶದ ಜನರಿಗೂ ಇಂಧನ ಉಳಿಸುವಂತೆ ಕರೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಆಂದ್ರಪ್ರದೇಶದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಆರ್ಥಿಕತೆ ರಕ್ಷಣೆಗಾಗಿ ಜನರಿಗೆ 7 ಸಲಹೆಗಳನ್ನ ನೀಡಿದ್ದರು. ಅದರಲ್ಲಿ ಇಂಧನ ಉಳಿತಾಯಕ್ಕೆ ಮಹತ್ವ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅದರನ್ವಯ ಇದೀಗ ಪ್ರಧಾನಿ ಮೋದಿ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅವರ ಭದ್ರತಾ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ
ಜೊತೆಗೆ ಭದ್ರತಾ ಪಡೆಗಳು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು. ಇದಕ್ಕಾಗಿ ಹೊಸ ಸಂಪನ್ಮೂಲಗಳನ್ನು ಖರೀದಿಸದಂತೆ ಗೃಹ ಸಚಿವಾಲಯ ಸೂಚನೆ ಹೊರಡಿಸಿದೆ. ಬಟರ್ ಫ್ಲೈ ಎಫೆಕ್ಟ್ ರೀತಿಯಲ್ಲಿ ಎಲೋ ನಡೆಯುತ್ತಿರುವ ಯುದ್ದ ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತಿದ್ದು. ಈ ಜಾಗತಿಕ ಅಸ್ಥಿರತೆಯಿಂದ ಹೊರಬರಲು ದೇಶದ ಜನರು ಕೂಡ ಸಹಕರಿಸುವಂತೆ ಸರ್ಕಾರ ಮನವಿ ಮಾಡಿದೆ.
ರವಿಕುಮಾರ್ ನ್ಯೂಸ್ ಡೆಸ್ಕ್