ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೆಸ್ಟ್‌ಬ್ಯಾಂಕ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತವನ್ನ ಕೊಂಡಾಡಿದ್ದಾರೆ, " ಇಡೀ ಪ್ರಪಂಚವೇ ನಮ್ಮ ಕೈಬಿಟ್ಟರು, ಭಾರತ ನಮ್ಮ ಜೊತೆಯಲ್ಲಿದೆ. ಭಾರತದ ಜನರು ನಮ್ಮನ್ನು ಹುಚ್ಚರಂತೆ ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಟೀಕೆಗಳು, ಪ್ರತಿಭಟನೆಗಳು ಮತ್ತು ರಾಜತಾಂತ್ರಿಕ ಒತ್ತಡಗಳು ಹೆಚ್ಚುತ್ತಿರುವ ನಡುವೆಯೂ ಭಾರತ ಮಾತ್ರ ತಮ್ಮ ದೇಶದ ಪರವಾಗಿ ನಿಂತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಹೇಳಿದ್ದಾರೆ. ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು,"ವಿಶ್ವದಾದ್ಯಂತ ಇಸ್ರೇಲ್ ಅನ್ನು ಪ್ರತ್ಯೇಕಿಸುವ ಯತ್ನಗಳು ನಡೆಯುತ್ತಿದ್ದರೂ, ಭಾರತದಲ್ಲಿ ಮಾತ್ರ ನಮ್ಮ ಮೇಲೆ 'ಹುಚ್ಚರಂತೆ ಪ್ರೀತಿ' ಇದೆ" ಎಂದು ಹೇಳಿದ್ದಾರೆ.
ನಾನು ಈ ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಇಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ನಾವು ಪ್ರತ್ಯೇಕತೆಯನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಅಲ್ಲಿ ಇಸ್ರೇಲ್ ಕುರಿತು ಸಂಪೂರ್ಣವಾಗಿ ಹುಚ್ಚರಂತೆ ಪ್ರೀತಿಸುವ ಜನರಿದ್ದಾರೆ, ಅದು ನಿಜಕ್ಕೂ ಅದ್ಭುತ" ಎಂದಿದ್ದಾರೆ. ಜೊತೆಗೆ ವಿಶ್ವದ ಬೇರೆ ಯಾವುದೇ ದೇಶಕ್ಕಿಂತಲೂ ನನಗೆ ಭಾರತದಿಂದಲೇ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಫಾಲೋವರ್ಸ್ ಇದ್ದಾರೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.