Search


ದಿವ್ಯ ಕಾಲೇಜು ಅಂದ ಮೇಲೆ ಪ್ರಫೋಸ್ ಮಾಡೋರು ಇದ್ದೆ ಇರ್ತಾರೆ. ಇಲ್ಲಿ ನಿಮಗೆ ಹುಡುಗರ ಕಾಟ ಯಾಕೆ ಆಗುತ್ತಿದೆ ಅಂದ್ರೆ

ಹೆಸರು ದಿವ್ಯ ನನಗೆ ನನ್ನ ಅಂದವೀಗ ಮುಳುವಾಗಿದೆ ಯಾರು ನೋಡಿದ್ರು ನನ್ನನ್ನ ಪ್ರೀತಿಸುತ್ತಿಯಾ ಎಂದು ಪ್ರಫೋಸ್ ಮಾಡುತ್ತಾರೆ. ಮೊದಲೆ ನಮ್ಮ ಮನೆಯಲ್ಲಿ ಸಾಕಷ್ಟು ಸ್ಟ್ರಿಕ್ಟ್ ಜನ. ನಡುವೆ, ಕಾಲೇಜಿನಲ್ಲಿ ನನ್ನ ಸಹಪಾಠಿಗಳು, ಪಡ್ಡೆ ಹುಡುಗರು ನನಗೆ ಲವ್ ಲೆಟರ್ ಕೊಡುತ್ತಾರೆ. ಎಷ್ಟೋ ಲೆಟರ್ ಗಳನ್ನ ಆ ಹುಡುಗರ ಸಮ್ಮುಖದಲ್ಲೆ ಎಸೆದು ಬಂದಿದ್ದೇನೆ. ಆದ್ರೆ ಕಾಲೇಜಿನ್ನಲಿ ಒಂದು ಸಮಸ್ಯೆ ಆದ್ರೆ ನಮ್ಮ ಏರಿಯಾದಲ್ಲಿ ಒಂದು ಸಮಸ್ಯೆ, ಮನೆ ಬಿಟ್ಟು ಹೊರ ಬರುವ ಹಾಗಿಲ್ಲ, ಬಂದ್ರೆ ಸಂಜೆ ವೇಳೆ ಕುಂಟು ನೆಪಹೇಳಿಕೊಂಡು ನನ್ನನ್ನ ಮಾತನಾಡಿಸಲು ಪಡ್ಡೆಗಳು ಬರುತ್ತಾರೆ. ಮನೆ ಬಳಿ ಬಂದು ನಿಮ್ಮ ತಂದೆ ಇದ್ದಾರಾ, ಸ್ವಲ್ಪ ಮಾತನಾಡಬೇಕಿತ್ತು, ಬರ ಹೇಳಿದ್ರು ಹಾಗಾಗಿ ಬಂದಿದ್ದೇವೆ ಹೀಗೆ ನೂರೊಂದು ಸುಳ್ಳು ಹೇಳುತ್ತ ನನಗೆ ಲವ್ ಲೆಟರ್ ಕೊಡಲು ಬರುತ್ತಾರೆ. ಇತ್ತೀಚೆಗಂತು ನನಗೆ ಈ ಹುಡಗರ ಕಾಟದಿಂದ ಓದಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ, ಕಾಲೇಜಿನಲ್ಲಿ ಎಲ್ಲರಿಗಿಂತಲೂ ಪಸ್ಟ್ ಇದ್ದ ನಾನು  ಈಗ  ಸೊಂಬೇರಿ ಆಗುತ್ತಿದ್ದೇನೆ. ನನ್ನ ಉಪನ್ಯಾಸಕರು ಯಾಕೆ ಹೀಗೆಲ್ಲ ಅಂತ ಕೇಳುತ್ತಾರೆ. ಆದ್ರೆ ಅವರಿಗೆ ನನ್ನ ಸಮಸ್ಯೆ ಮಾತ್ರ ಅರ್ಥವಾಗುತ್ತಿಲ್ಲ ಗುರುಗಳೆ..

ಸೀಕ್ರೆಟ್ ಗುರು

ದಿವ್ಯ ಕಾಲೇಜು ಅಂದ ಮೇಲೆ ಪ್ರಫೋಸ್ ಮಾಡೋರು ಇದ್ದೆ ಇರ್ತಾರೆ. ಇಲ್ಲಿ ನಿಮಗೆ ಹುಡುಗರ ಕಾಟ ಯಾಕೆ ಆಗುತ್ತಿದೆ ಅಂದ್ರೆ ನಿಮ್ಮ ನಡೆಯಿಂದ ಅನಿಸುತ್ತೆ. ಎಲ್ಲರ ಜೊತೆ ನೀವು ಸಲುಗೆಯಿಂದ ಬೋಲ್ಡ್ ಆಗಿ ಮಾತನಾಡುವುದರಿಂದಲೇ ನಿಮಗೆ ಈ ಸಮಸ್ಯೆ ಉಂಟಾಗುತ್ತಿರಬಹುದು, ಕೊಂಚ ನೀವು ಕಠಿಣವಾದ್ರೆ ಖಂಡಿತ ನಿಮಗೆ ಈ ಪರಿಸ್ಥಿತಿ ಬರಲ್ಲ. ಅದಕ್ಕೆ ಹೇಳೋದು ಹೆಣ್ಣುಮಕ್ಕಳು ಸಾಕಷ್ಟು ಗಂಭೀರವಾಗಿರಬೇಕು, ಸೌಂದರ್ಯವೊಂದೆ ಹುಡುಗರು ನಿಮ್ಮ ಹಿಂದೆ ಬೀಳುವಂತೆ ಮಾಡಲ್ಲ,ಬದಲಿಗೆ ನೀವು ಹೇಗೆ ಯಾವರೀತಿ ಟ್ರೀಟ್ ಮಾಡುತ್ತಿರೋ ಅದರ ಆಧಾರದ ಮೇಲೆ ಹುಡುಗರಿಗೆ ನಿಮ್ಮ ಮೇಲೆ ಇಲ್ಲ ಸಲ್ಲದ ಭಾವನೆಗಳು ಹುಟ್ಟಲು ಕಾರಣ ವಾಗುತ್ತವೆ. ಅಂದ್ರೆ ಯಾರಾದ್ರೂ ಯುವಕರು ಸಿಕ್ಕಿದ್ರೆ ಗಂಟೆ ಗಟ್ಟಲೆ ಅವರ ಬಳಿ  ಮಾತನಾಡುತ್ತಾ ಕೂರೋದು ಆಗ ಆತನ ಬೋಲ್ಡ್ ಆಗಿ ನಿಮ್ಮ ಭಾವನೆಗಳನ್ನ ವ್ಯಕ್ತ ಪಡಿಸೋದು ಇವೆಲ್ಲ ನಿಮ್ಮ  ಸಮಸ್ಯೆಗೆ ಕಾರಣವಾಗಿವೆ ಅನ್ನಬಹುದು. ಹಾಗಾಗಿ ಹೆಣ್ಣು ಮಕ್ಕಳು ಯಾರ ಜೊತೆಯಾದ್ರೂ ಮಾತನಾಡುವ ಮುನ್ನ ಸೂಕ್ಷ್ಮವಾಗಿ ವರ್ತಿಸಬೇಕು, ಇಲ್ಲದಿದ್ರೆ ಇಂದಿನ ಯುವಕರು ಅದನ್ನೆ ಬಂಡವಾಳ ಮಾಡಿಕೊಂಡು ಆಕೆ ನನ್ನನ್ನ ಬಹಳ ಪ್ರೀತಿಸುತ್ತಿದ್ದಾಳೆ, ಆಕೆ ನನ್ನ ಬಳಿ ಹಲವು ಭಾವನೆಗಳನ್ನ ವ್ಯಕ್ತ ಪಡಿಸಿದ್ದಾಳೆ, ಆಕೆಯ ಭಾವನೆಗಳನ್ನ ನೋಡಿದ್ರೆ, ಎಲ್ಲೋ ಆಕೆ ನನ್ನನ್ನ ಪ್ರೀತಿಸುತ್ತಿರಬೇಕು ಅನ್ನೋ ಹುಚ್ಚು ಭಾವನೆಯಿಂದ ನಿಮಗೆ ಕಾಲೇಜಿನಲ್ಲೂ ಪ್ರಫೋಸ್ ಮಾಡ್ತಾರೆ, ನಿಮ್ಮ ಮನೆ ಬಳಿ ಬಂದು ಕುಮಟು ನೆಪ ಹೇಳಿಕೊಂಡ್ಉ ಪ್ರಫೋಸ್ ಮಾಡ್ತಾರೆ. ಹೀಗಾಗಿ ಕೂಡಲೇ ನೀವು ಗಂಭೀರ ಸ್ವಭಾವವನ್ನ ಬೆಳಸಿಕೊಂಡ್ರೆ ಖಂಡಿತವಾಗಿಯೂ ಈ ಎಲ್ಲ ಸಮಸ್ಯೆಯಿಂದ ಹೊರ ಬರಬಹುದು..   

By News Desk - 02-06-2026


Ads in Post