ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್.. ರಾಜ್ಯ ಕಾಂಗ್ರೆಸ್ಸಿನ ಶಕ್ತಿ.. ಸಿದ್ದರಾಮಯ್ಯ ಅಹಿಂದಾ ನಾಯಕ, ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಧಿಕಾರ ಇರಲಿ.. ಇಲ್ಲದಿರಲಿ.. ಸಿದ್ದರಾಮಯ್ಯ ನಮ್ಮ ಶಾಶ್ವತ ಮುಖ್ಯಮಂತ್ರಿ ಅನ್ನೋ ಲಕ್ಷಾಂತರ ಜನರು ಈಗಲೂ ಇದ್ದಾರೆ. ಕಾರಣ ಇಷ್ಟೆ.. ಸಿದ್ದರಾಮಯ್ಯ ನೇರವಾಗಿ ಮುಟ್ಟಿದ್ದು ಬಡವರನ್ನ.. ಹಸಿದ ಹೊಟ್ಟೆಗಳನ್ನ..
ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ, ವಿಧಾನಸೌಧದ ಸಿಬ್ಬಂದಿಯಿಂದ ಹಿಡಿದು, ಮಂತ್ರಿಮಂಡಲದ ಸಚಿವರೂ ಕಣ್ಣೀರು ಹಾಕಿ ದುಃಖಿತರಾಗಿದ್ದನ್ನ ನೋಡಿದರೆ, ಶಾಲೆಯಿಂದ ಶಿಕ್ಷಕರು ಬಿಟ್ಟಾಗ ಮಕ್ಕಳು ಅತ್ತಂತೆ ಕಾಣುತ್ತಿತ್ತು. ಅವತ್ತಿನ ದೃಶ್ಯಗಳು ನೋಡಿದರೆನೇ ಗೊತ್ತಾಗುತ್ತದೆ, ಸಿದ್ದರಾಮಯ್ಯ ಎಂದರೆ ಕೇವಲ ಹೆಸರಲ್ಲ ಅದಮ್ಯ ಶಕ್ತಿ ಅಂತ.
ಡಿಕೆಶಿ ಈಗ ಸಿಎಂ ಆಗಿದ್ದಾರೆ.. ದೇವರಾಜ್ ಅರಸು, ಸಿದ್ದರಾಮಯ್ಯ, ಅವ್ರು ಸೃಷ್ಟಿಸಿದ ಬ್ರ್ಯಾಂಡ್ಗಿಂತ, ತನ್ನದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಬೇಕು ಅನ್ನೋ ಛಲದಲ್ಲಿದ್ದಾರೆ.. ಇಡೀ ರೈತರು ತಮ್ಮನ್ನ ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವಂಥಾ ಕೆಲಸ ಮಾಡಬೇಕು ಅಂತ ಅಂದುಕೊಂಡಿದ್ದಾರೆ. ಬೆಂಗಳೂರಿನ ಸಮಸ್ಯೆಗಳನ್ನ ನಿವಾರಿಸಿ ಬ್ರ್ಯಾಂಡ್ ಬೆಂಗಳೂರು ಕಟ್ಟಬೇಕು ಅಂದುಕೊಂಡಿದ್ದಾರೆ. ಆದರೆ ಅಂದುಕೊಳ್ಳೋದಕ್ಕಿಂತ, ಅದನ್ನ ಮಾಡಿ ತೋರಿಸುವ ಜವಾಬ್ದಾರಿ ಡಿಕೆಶಿ ಹೆಗಲ ಮೇಲಿದೆ.
ದೇವರಾಜ್ ಅರಸು ಮಾದರಿಯಲ್ಲಿ.. ಸಿದ್ದರಾಮಯ್ಯ ಅವರ ಥರದಲ್ಲಿ.. ಡಿಕೆಶಿನೂ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯಬೇಕಾದರೆ, ಜನರ ನಿರೀಕ್ಷೆಗೆ ತಕ್ಕಂಥಾ ಕೆಲಸ ಮಾಡಬೇಕಿದೆ. ಆಗ ಮಾತ್ರವೇ ಕರ್ನಾಟಕದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋದಕ್ಕೆ ಸಾಧ್ಯ..
ಡಿಕೆ ಬದಲಾಗಿದ್ದಾರೆ.. ಶಿಲೆಯಾಗಿದ್ದಾರೆ.. ಮೃದುವಾಗಿದ್ದಾರೆ.. ಅದು ಮೇಲ್ನೋಟಕ್ಕೆ ಮಾತ್ರ ಆಗದಿರಲಿ.. ಜನರ ಒಳಿತಿಗಾಗಿ.. ಅಜ್ಜಯ್ಯನವರ ಆಶೀರ್ವಾದದಂತೆ, ಮನುಕುಲದ ಒಳಿತಿಗಾಗಿ ಕಾರ್ಯ ನಿರ್ವಹಿಸುವಂತಾಗಲಿ..
ಡಿಕೆಶಿ ಸಿಎಂ ಕುರ್ಚಿಯನ್ನ ಒದ್ದು ಕಿತ್ಕೊಳ್ತಾರೆ ಅಂತ ವಿಪಕ್ಷ ನಾಯಕರು ಕಿಚ್ಚು ಹಚ್ಚುತ್ತಿದ್ದರು.. ಆದರೆ ಡಿಕೆಶಿ ಕುರ್ಚಿಯನ್ನ ಒದ್ದು ಕಿತ್ಕೊಳ್ಲಿಲ್ಲ.. ಬದಲಿಗೆ ಕಾಲಿಗೆ ಬಿದ್ದು ಪಡೆದುಕೊಂಡಿದ್ದಾರೆ. ಆಶೀರ್ವಾದದ ಮೂಲಕ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪ, ಅಷ್ಟೇ ಯಾಕೆ, 40 ವರ್ಷಗಳ ಕಾಲ ದೇವೇಗೌಡರ ವಿರುದ್ಧವೇ ಹೋರಾಟ ಮಾಡ್ಕೊಂಡು ಬಂದಿದ್ದ ಡಿಕೆಶಿ.. ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಇವೆಲ್ಲಾ ನೋಡಿದರೆ ಗೊತ್ತಾಗುತ್ತೆ. ಡಿಕೆಶಿ ಬದಲಾಗಿದ್ದಾರೆ.. ಶಿಲೆಯಾಗಿದ್ದಾರೆ ಅಂತ..!