Search


ಈ ಪ್ರೀತಿ ನನಗೆ ಮುಳುವಾಗುತ್ತಿದೆ. ಯಾಕೆಂದ್ರೆ ಆಕೆ ಈಗ ನನಗೆ ಎಲ್ಲೆಂದರಲ್ಲಿ ಕರೆಎದುಕೊಂಡು ಹೋಗುತ್ತಿದ್ದಾಳೆ.

ಹೆಸರು ಸುಜೇಶ್ ಊರು ಶೃಂಗೇರಿ.. ಗುರುಗಳೆ ನಾನು ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನ್ನ ಕಾಲೇಜಿನಲ್ಲಿ ನನ್ನ ತರಗತಿಯಲ್ಲಿ ಓದುತ್ತಿರುವ ನನ್ನ ಸಹಪಾಠಿಯನ್ನ ಪ್ರೀತಿ ಮಾಡುತ್ತಿದ್ದೇನೆ. ಆದ್ರೆ ಈ ಪ್ರೀತಿ ನನಗೆ ಮುಳುವಾಗುತ್ತಿದೆ. ಯಾಕೆಂದ್ರೆ ಆಕೆ ಈಗ ನನಗೆ ಎಲ್ಲೆಂದರಲ್ಲಿ ಕರೆಎದುಕೊಂಡು ಹೋಗುತ್ತಿದ್ದಾಳೆ. ಅದರಲ್ಲೂ ನಾನು ಇತ್ತೀಚೆಗೆ ಈಕೆಯಿಂದಾಗಿ ಕಾಲೇಜಿಗೆ ಹೋಗಿ ಕಲಿಯೋದನ್ನ ಮರೆಯುತ್ತಿದ್ದೇನೆ ಅನಿಸುತ್ತಿದೆ. ಅದರಲ್ಲೂ ಇತ್ತೀಚೆಗೆ ನಮ್ಮ ರೂಂ ಪಕ್ಕದ ಮನೆಯವರು ಊರಿಗೆ ಹೋಗಿದ್ದು, ನನ್ನ ಪ್ರೇಯಸಿಗೆ  ಆ ಮನೆಯವರನ್ನ ಪರಿಚಯ ಮಾಡಿಕೊಟ್ಟಿದ್ದೆ. ಈಗ ಆಕೆ ಆ ಮನೆಯ ಕೀ ತನ್ನ ಬಳಿ ಇರಿಸಿಕೊಂಡು ನಿತ್ಯ  ಮನೆಗೆ ಕರೆದುಕೊಂದು ಹೋಗುತ್ತಾಳೆ.  ಆ ಮನೆಯಲ್ಲೇ ನಿತ್ಯ ಕಳೆಯುವಂತಾಗಿದೆ. ಆಕೆ ಹೇಳಿದ ರೀತಿಯಲ್ಲೇ ಮಾಡಬೇಕಾಗಿದೆ. ಹೆಚ್ಚು ಚುಂಬಿಸಬೇಕು, ಹೀಗೆ ಏನೆಲ್ಲ ನಡೆದು ಅಂತಿಮವಾಗಿ ಆಕೆ ನನ್ನ ಜೊತೆ ಲೈಂಗಿಕ ಸಂಪರ್ಕವನ್ನು ಪಡೆದಳು. ನನಗೆ ಏನೂ ತಿಳಿಯದೆ, ಆಕೆ ಬಳಿ ನಾನು ಸೆಕ್ಸ್ ಗೆ ಸಮ್ಮತಿಸಿದೆ. ಆದ್ರೆ ಯಾವುದೇ ಸುರಕ್ಷ ಕ್ರಮ ಅನುಸರಿಸದೆ ಅವಳ ಜೊತೆ ನಾನು ಲೈಂಗಿಕ ಕ್ರಿಯೆ ನಡೆಸಿದ್ದರಿಂದ ಈಗ ನನಗೆ ಭಯ ಕಾಡುತ್ತಿದೆ. ಎಲ್ಲಿ ಆಕೆ ಗರ್ಭಿಣಿ ಆಗಿದ್ದಾಳೋ ಅನ್ನೋ ಭಯ ಕಾಡುತ್ತಿದೆ. ಹೀಗೆ ಭಯ ಪಟ್ಟಿರುವಾಗಲೇ ನನ್ನ ಹುಡುಗಿ ನಾನೀಗ ಗರ್ಭಿಣಿ ಎಂದು ನನಗೆ ಹೇಳುತ್ತಿದ್ದಾಳೆ .ನನಗುಂತೂ ಏಮು ತಳಿಯದಾಗಿದೆ. ಗುರುಗಳೆ ಏನಾದ್ರೂ ಪರಿಹಾರ ಕೊಡಿ..

ಗುರು

ಸುಜೇಶ್ ಲವ್ ನಲ್ಲಿ ಏನೆಲ್ಲ ರಂಪಾಟ ಮಾಡಿಕೊಂಡಿದ್ದೀರಿ ನೋಡಿ. ಕಾಲೇಜು ಜೀವನದಲ್ಲಿ ಪ್ರೀತಿ ಪ್ರೇಮ ಪ್ರಣಯ ಅನ್ನೋದು ಸಹಜವಾಗಿರುತ್ತೆ . ಆದ್ರೆ ಅದು ಎಷ್ಟರಲ್ಲಿ ಇರಬೇಕೋ ಅಷ್ಟರಲ್ಲಿ ಇರಬೇಕು. ಆದ್ರೆ ನಿವೇಲ್ಲೂ ಎಲ್ಲೆಯನ್ನ ಮೀರಿ ಪ್ರೀತಿ ಮಾಡಿದ್ದೀರಿ ಅನಿಸುತ್ತಿದೆ. ಆಕೆ ಕರೆದಳು ನೀವು ಆಕೆ ಹೇಳಿದ್ದಕ್ಕೆಲ್ಲ ಓಕೆ ಅಂದು ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದೀರಿ. ಇತ್ತ ಓದಲು ಆಗದೆ ಅತ್ತ ಮಾಡಿರುವ ತಪ್ಪಿಗೆ ಪರಿತಪಿಸುತ್ತ ಎಡಬಿಡಂಗಿ ಕೆಲಸವನ್ನ ನೀವು ಮಾಡಿಕೊಂಡಿದ್ದೀರಿ. ಈಗ ಎಲ್ಲ ಮುಗಿದ ಮೇಲೆ ಪರಿಹಾರ ಬೇಕು, ಆಕೆ ನನಗೆ ಗರ್ಭಿಣಿ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ, ಹೀಗೆಲ್ಲ ಮನಸ್ಸಿನಲ್ಲಿ ಕೊರಗುತ್ತ ತಾವು ತಮ್ಮ ಬದುಕಿನಲ್ಲಿ ಏನು ಬೇಡದ ಸ್ಥಿತಿಗೆ ತಮ್ಮನ್ನ ತಾವೇ ತಂದುಕೊಂಡಿದ್ದೀರಿ. ಈಗ ನೀವು ನಿಮ್ಮ ಪ್ರಿಯತಮೆ ಬಳಿಯೆ ಇದಕ್ಕೆಲ್ಲ ಉತ್ತರ ಹುಡುಕಿಕೊಳ್ಳಬೇಕಾಗಿದೆ ಎಕೆಂದ್ರೆ, ಆಕೆ ನಿಮ್ಮಿಂದ ಲೈಂಗಿಕ ಸುಖ ಪಡೆದಿರುವವಳು, ಅವಳೆ ಎಲ್ಲವನ್ನ ನಿಮಗೆ ಸವಿಸ್ತಾರವಾಗಿ ಹೇಳಬೇಕಾಗಿದೆ, ನಿಜವಾಗಿಯೂ ಗರ್ಭಿಣಿಯಾ ಅಥವಾ ನಿಮ್ಮನ್ನ ಆಟವಾಡಿಸಲು ಹೇಗೆಲ್ಲ ಮಾಡುತ್ತಿದ್ದಾಳ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ. ಆಕೆಗೆ ನಿಮ್ಮೆಲ್ಲ ಸಂಕಷ್ಟಗಳನ್ನ ಹೇಳಿಕೊಳ್ಳಿ, ನಿನ್ನನ್ನ ಕೈ ಬಿಡಲ್ಲ ಅನ್ನೋದನ್ನ ಆಕೆಗೆ ವಿಶ್ಚಾಸ ತುಂಬಿ. ಆಮೂಲಕ ನಿಜ ಸ್ಥಿತಿ ತಿಳಿದುಮ ಬಳಿಕ ನೀವಿಬ್ಬರು ಓದಿನತ್ತ ಗಮನಹರಿಸೋದು ಸೂಕ್ತ.

By News Desk - 09-05-2026


Ads in Post