ಕೋಲ್ಕತ್ತಾ: ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮೇಲೆ ಹಲ್ಲೆ ನಡೆದ ಮರುದಿನವೇ, ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಮೇಲೂ ದಾಳಿ ನಡೆದಿರುವ ಆರೋಪ ಕೇಳಿಬಂದಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಂಡಿತಾಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ ಎಂದು ಟಿಎಂಸಿ ಆರೋಪಿಸಿದೆ.
ಬಂಗಾಳದಲ್ಲಿ ಚುನಾವಣೆ ಮುಗಿದ ನಂತರ ಟಿಎಂಸಿ ಕಾರ್ಯಕರ್ತರ ಬಂಧನವನ್ನ ಖಂಡಿಸಿ ಕಲ್ಯಾಣ್ ಬ್ಯಾನರ್ಜಿ ಮನವಿ ಸಲ್ಲಿಸಲು ಚಂಡಿತಾಲ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಕೆಲ ಪ್ರತಿಭಟನಾಕಾರರು ಕಪ್ಪು ಧ್ವಜ ತೋರಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ವೇಳೆ "ಕಳ್ಳರು" ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ತನ್ನ ಮೇಲೆ ಹಲ್ಲೆ ನಡೆಸಿದ್ದು, ತಲೆಗೆ ಗಾಯವಾಗಿದೆ ಎಂದು ಕಲ್ಯಾಣ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಜೊತೆಗೆ ಪೊಲೀಸರ ವಿರುದ್ದ ಗಂಭೀರ ಆರೋಪ ನಡೆಸಿರುವ ಕಲ್ಯಾಣ ಬ್ಯಾನರ್ಜಿ “ಇದೆಲ್ಲವೂ ಪೊಲೀಸರ ಎದುರಲ್ಲೇ ನಡೆಯಿತು. ನನ್ನ ತಲೆಗೆ ಹೊಡೆದಿದ್ದಾರೆ, ರಕ್ತಸ್ರಾವವಾಗುತ್ತಿದೆ,” ಆದರು ಪೊಲೀಸರ ಏನು ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಲ್ಯಾಣ್ ಬ್ಯಾನರ್ಜಿ ತಲೆಯ ಹಿಂಭಾಗಕ್ಕೆ ಬಟ್ಟೆ ಹಿಡಿಕೊಂಡಿರವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಬಿಜೆಪಿ ಪ್ರಾಯೋಜಿತ ದಾಳಿಗಳ ವಿರುದ್ಧ ಟಿಎಂಸಿ ಪ್ರತಿಭಟನೆ ಮುಂದುವರಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಕಲ್ಯಾಣ್ ಬ್ಯಾನರ್ಜಿ... ನಿನ್ನೆ ಅಭಿಷೇಕ್ ಬ್ಯಾನರ್ಜಿ....!
ಈ ಘಟನೆಗೂ ಒಂದು ದಿನ ಮೊದಲು, ದಕ್ಷಿಣ 24 ಪರಗಣ ಜಿಲ್ಲೆಯ ಸೋನಾರ್ಪುರ ಪ್ರದೇಶದಲ್ಲಿ ಚುನಾವಣೋತ್ತರ ಹಿಂಸಾಚಾರದಿಂದ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸ್ಥಳೀಯರು ದುರ್ವರ್ತನೆ ತೋರಿದ್ದರು. ಅಭೀಷೇಕ್ ಬ್ಯಾನರ್ಜಿಯನ್ನ ಹಿಡಿದು ಎಡೆದಾಡಿದ್ದ ಗುಂಪೊಂದು, ಅವರ ಮೇಲೆ ಕಲ್ಲು ಮತ್ತು ಮೊಟ್ಟೆಗಳಿಂದ ದಾಳಿ ನಡೆಸಿದ್ದರು.
ಇನ್ನು ಈ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಿದ್ದು.ನ ಕಲ್ಯಾಣ್ ಬ್ಯಾನರ್ಜಿ ಮಾಡಿರುವ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಜೊತೆಗೆ ಟಿಎಂಸಿ ದುರಾಡಳಿತದಿಂದ ನೊಂದಿದ್ದ ಜನರು ಈಗ ಅವರ ಆಕ್ರೋಶ ತೋರ್ಪಡಿಸುತ್ತಿದ್ದಾರೆ ಎಂದು ಪ್ರತಿವಾದ ಮಾಡಿದ್ದಾರೆ.