Search


ಮೊದಲ ದಿನವೇ ಅಖಾಡಕ್ಕೆ ಇಳಿದ ಖಾದರ್‌.. ಆಸ್ಪತ್ರೆಗೆ ಸರ್ಪೈಸ್‌ ವಿಸಿಟ್‌ ಕೊಟ್ಟ ಸಚಿವರು

ಬೆಂಗಳೂರು: ಸಚಿವ ಯು.ಟಿ ಖಾದರ್‌ಗೆ (UT Khader) ಖಾತೆ ಹಂಚಿಕೆ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಜವಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಸಚಿವರು ಕಾರ್ಯೋನ್ಮುಖರಾಗಿದ್ದು, ರಾತ್ರಿ ಆಸ್ಪತ್ರೆಯೊಂದಕ್ಕೆ ಸರ್ಪೈಸ್‌ ವಿಸಿಟ್‌ ಕೊಟ್ಟಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿರುವ ಮೂಲಭೂತ ಸೌಕರ್ಯ ಕೊರತೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 

ಜಯನಗರದ ಆಸ್ಪತ್ರೆಯೊಂದಕ್ಕೆ ಸಚಿವರು ಭೇಟಿ ನೀಡಿದ್ದು, ಈ ವೇಳೆ ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಈ ವೇಳೆ ಗಮನಕ್ಕೆ ಬಂದಿದೆ. ಇನ್ನೂ ಇರುವ ಸಿಬ್ಬಂದಿ ಪೈಕಿ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಿಬ್ಬಂದಿ ಮೇಲೆ ಸಚಿವರು ಗರಂ ಆಗಿದ್ದಾರೆ.

ಈ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಯುಟಿ ಖಾದರ್‌ " ಆಸ್ಪತ್ರೆಯ ನೈಜವಾದ ಪರಿಸ್ಥಿತಿ ನೋಡಲು ಬಂದೆ. ಏನೆಲ್ಲಾ ಲೋಪದೋಷವಿದೆ ಎಂದು ನೋಡಿದ್ದೇನೆ. ಎಲ್ಲಾ ಕಡೆಯೂ ವಿಸಿಟ್ ಮಾಡಿದ್ದೇನೆ. ಇವತ್ತು ಇಬ್ಬರು ವೈದ್ಯರು ಗೈರಾಗಿದ್ದರು. ಅವ್ರಿಗೆ ಇಂದು ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು, ಕೆಲಸ ಮಾಡುವಂತೆ ಸೂಚಿಸುತ್ತೇನೆ. ಬೆಳಗ್ಗೆ ಹೊತ್ತಲ್ಲಿ ಬೇರೆ ಬೇರೆ ಕೆಲಸ, ಸಭೆಗಳು ಇರುತ್ತೆ. ಹೀಗಾಗಿ ಈ ಹೊತ್ತಲ್ಲಿ ಬಂದೆ. ಸರಿಯಾದ ಪಿಕ್ಚರ್ ಈ ಹೊತ್ತಲ್ಲೇ ಸಿಗೋದು. ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚು ಬರ್ತಾರೆ. ಎಷ್ಟೇ ಜನ ಬಂದ್ರೂ ವೈದ್ಯರು ನೋಡಬೇಕು.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಂಬುಲೆನ್ಸ್‌ಗಳ ಹಾವಳಿ ವಿಚಾರವಾಗಿ ಇಂದು ಇಲಾಖೆಯ ಪರಿಶೀಲನಾ ಸಭೆಯಿದೆ. ಅಲ್ಲಿ ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಯಾವ ಸಲಹೆಗಳು ಇದ್ರೂ ಅದರ ಬಗ್ಗೆ ಚರ್ಚಿಸುತ್ತೇವೆ. ವೈದ್ಯರಿಗೂ ನಿರ್ಭಯವಾದ ವಾತಾವರಣ ಸೃಷ್ಟಿಯಾಗಬೇಕು ಎಂದರು.

By Ravikumar - 05-06-2026


Ads in Post