ಮಧ್ಯಪ್ರದೇಶ : ಬಕ್ರೀದ್ (Bakrid) ದಿನ ಪ್ರಾಣಿಹಿಂಸೆ ಮಾಡಲಾಗುತ್ತದೆ ಎಂದು ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರ ಆಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ(Khandwa ) ಎಂಬಲ್ಲಿ ನಡೆದಿದೆ. ಮತಾಂತರಗೊಂಡ ಯುವಕನನ್ನು ಬಿಲಾಲ್ ಎಂದು ಗುರುತಿಸಿದ್ದು, ಮತಾಂತರದ ನಂತರ ತನ್ನ ಹೆಸರನ್ನ ‘ವಿಶಾಲ್’ಎಂದು ಬದಲಾಯಿಸಿಕೊಂಡಿದ್ದಾನೆ.
ಬಿಲಾಲ್ ಹಿನ್ನಲೆ..!
ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮತ್ತು ಸನಾತನ ಧರ್ಮದ ತತ್ವಗಳಿಗೆ ಆಕರ್ಷಿತನಾದ ಬಿಲಾಲ್ ಎಂಬ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಬಿಲಾಲ್ ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ, ರಾಜೇಶ್ ಅವರು ಕೂಡ ಬಿಲಾಲ್ನನ್ನು ಕುಟುಂಬದ ಸ್ವಂತ ಸದಸ್ಯನಂತೆ ನೋಡಿಕೊಳ್ಳುತ್ತಿದ್ದರು. ಈ ವಾತವರಣದಲ್ಲಿ ಬೆಳೆದ ಬಿಲಾಲ್, ನಿಧಾನವಾಗಿ ಹಿಂದೂ ಧರ್ಮದ ಕಡೆಗೆ ಆಕರ್ಷಿತನಾಗಿದ್ದನು,
ಬಕ್ರೀದ್ನಲ್ಲಿ ಪ್ರಾಣಿ ಬಲಿ ಕಂಡು ಹಿಂದೂ ಧರ್ಮಕ್ಕೆ ಮತಾಂತರ...!
ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದ ಪ್ರಾಣಿ ಬಲಿಯನ್ನು ಕಂಡು ನೊಂದ ಬಿಲಾಲ್, ಎಲ್ಲಾ ಜೀವಿಗಳ ಮೇಲಿನ ದಯೆಯನ್ನು ಸಾರುವ ಸರ್ವೇ ಭವಂತು ಸುಖಿನಃ ಎಂಬ ಹಿಂದೂ ಧರ್ಮದ ತತ್ವಕ್ಕೆ ಮಾರುಹೋಗಿ ಧರ್ಮ ಬದಲಿಸುವ ನಿರ್ಧಾರ ಕೈಗೊಂಡಿದ್ದಾನೆ.
ಖಾಂಡ್ವಾದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ‘ಘರ್ ವಾಪಸಿ’ ಆಚರಣೆಯ ಭಾಗವಾಗಿ ಆತನಿಗೆ ಪಂಚಗವ್ಯ, ಗಂಗಾಜಲ ಮತ್ತು ಪವಿತ್ರ ದ್ರವ್ಯಗಳಿಂದ ಹತ್ತು ವಿಧದ ಸ್ನಾನ ಮಾಡಿಸಲಾಯಿತು. ಬಳಿಕ ಆತ ತಲೆ ಬೋಳಿಸಿಕೊಂಡು ಯಜ್ಞ ಮತ್ತು ಶಿವಪೂಜೆಯಲ್ಲಿ ಪಾಲ್ಗೊಂಡಿದ್ದಾನೆ. ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ಪ್ರಮಾಣ ಮಾಡಿದ ವಿಶಾಲ್, ಅತ್ಯಂತ ಭಕ್ತಿಯಿಂದ ರಾಮಚರಿತಮಾನಸ ಗ್ರಂಥವನ್ನು ತನ್ನ ಹಣೆಯ ಮೇಲಿಟ್ಟುಕೊಂಡು ಇನ್ಮುಂದೆ ದಿನವೂ ಅದನ್ನು ಪಠಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.
ನನಗೆ ಸನಾತನ ಧರ್ಮ ತುಂಬಾ ಇಷ್ಟ, ನಾನು ಅದಕ್ಕೆ ಸೇರಲೇಬೇಕಿತ್ತು, ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ಬಕ್ರೀದ್ ದಿನದಂದು, ಮುಗ್ಧ ಪ್ರಾಣಿಗಳಿಗೆ ಪರಿಸ್ಥಿತಿಯನ್ನು ನನ್ನಿಂದ ನೋಡಲಾಗಲಿಲ್ಲ ಎಂದು ಅವರು ಹೇಳಿದರು. ಬಾಲ್ಯದಿಂದಲೂ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇತ್ತು ಎಂದು ವಿಶಾಲ್ ಹೇಳಿದರು.