Search


ಚಿಕನ್‌, ಮಟನ್‌ ಜೊತೆ ಗೋಮಾಂಸವೂ ಬೇಕು: ತಮಿಳುನಾಡು ಹಾಸ್ಟೆಲ್‌ ವಿದ್ಯಾರ್ಥಿಗಳ ಬೇಡಿಕೆ

ಚೆನ್ನೈ: ತಮಿಳುನಾಡಿನ ಸರ್ಕಾರಿ ವಸತಿನಿಲಯಗಳ ಆಹಾರ ಮೆನುವಿನಲ್ಲಿ ಚಿಕನ್‌ ಮತ್ತು ಮಟನ್‌ ಜೊತೆಗೆ ಗೋಮಾಂಸವನ್ನೂ ಸೇರಿಸುವಂತೆ ಕೆಲ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಈ ವಿಚಾರ ಇದೀಗ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಪ್ರತಿಕ್ರಿಯಿಸಿದ್ದಾರೆ.

ಚೆನ್ನೈನ ಸೈದಾಪೇಟೆಯಲ್ಲಿರುವ ಎಂಸಿ ರಾಜಾ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಸಚಿವರು, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು. ಈ ವೇಳೆ ಗ್ರಾಮೀಣ ಹಿನ್ನೆಲೆಯ ಕೆಲ ವಿದ್ಯಾರ್ಥಿಗಳು ಪ್ರಸ್ತುತ ಮಾಂಸಾಹಾರಿ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸುವಂತೆ ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಬೇಡಿಕೆ ನಿಜ ಎಂದು ಸಚಿವ ವನ್ನಿ ಅರಸು ತಿಳಿಸಿದ್ದಾರೆ.

ಸದ್ಯ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಚಿಕನ್‌ ಮತ್ತು ಮಟನ್‌ ನೀಡಲಾಗುತ್ತಿದ್ದು, ಪ್ರತಿ ಸೋಮವಾರ ಬಿರಿಯಾನಿಯನ್ನೂ ಪೂರೈಸಲಾಗುತ್ತಿದೆ. ಮಟನ್‌ ದುಬಾರಿಯಾಗಿರುವುದರಿಂದ ಅದನ್ನು ನಿಯಮಿತವಾಗಿ ಸೇವಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ವೆಚ್ಚದಲ್ಲಿ ದೊರೆಯುವ ಗೋಮಾಂಸವನ್ನು ಮೆನುವಿನಲ್ಲಿ ಸೇರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

By Ravikumar - 23-09-2026


Ads in Post