ಹೌದು.. ಹುಡುಗ ಆ ದಿನ ಹದ್ದು ಮೀರಿದ್ದ.. ಕಾರಣ ಏನೇ ಇರಲಿ.. ಕೆಣಕಿದರೆಂದು ಕೈ ಎತ್ತುವುದು ಜಂಟಲ್’ಮ್ಯಾನ್ ಗೇಮ್ ಕ್ರಿಕೆಟ್’ಗೆ ಶೋಭೆಯಲ್ಲ..ವೈಭವ್ ಸೂರ್ಯವಂಶಿ ಮಾಡಿದ್ದು ತಪ್ಪೇ.. ತಪ್ಪನ್ನೇ ಮಾಡಿಲ್ಲವೆಂದು ಸಮರ್ಥಿಸಿಕೊಳ್ಳುವುದು ಶುದ್ಧ ಅವಿವೇಕತನ..
ಆದರೆ ಆ ಪ್ರಮಾದಕ್ಕೆ 15 ವರ್ಷದ ಹುಡುಗನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಟ್ಟರೆ..?
‘’ಸಚಿನ್ ತೆಂಡೂಲ್ಕರ್ ಹೀಗಿರಲಿಲ್ಲ.. 16ನೇ ವಯಸ್ಸಿಗೆ ಭಾರತ ತಂಡಕ್ಕೆ ಕಾಲಿಟ್ಟಾಗ ಸಚಿನ್’ರಲ್ಲಿದ್ದ ತಾಳ್ಮೆ ಈ ಹುಡುಗನಲ್ಲಿಲ್ಲ. ಹಾಗಿಲ್ಲ, ಹೀಗಿಲ್ಲ.. ಇವನು ಹೆಚ್ಚು ದಿನ ಆಡಲಾರ.. ಇವನದ್ದೇನಿದ್ದರೂ ಮೂರು ದಿನಗಳ ಪೌರುಷವಷ್ಟೇ..’’ ಅಬ್ಬಾ.. 15 ವರ್ಷದ ಹುಡುಗನ ಮೇಲೆ ಅದೆಷ್ಟು ನಂಜು..? ಅದೆಷ್ಟು ಟೀಕೆ..?
ಆದರೆ ಇವನು ಹೊರಗಿನ ನಿಷ್ಪ್ರಯೋಜಕ ಸದ್ದುಗಳಿಗೆ ತಲೆ ಕೆಡಿಸಿಕೊಳ್ಳುವವನಲ್ಲ.. ಕಳೆದುಕೊಂಡದ್ದನ್ನು ಅದೇ ಜಾಗದಲ್ಲಿ ಪಡೆದುಕೊಳ್ಳುವ ಛಲಗಾರ ಅವನು..
ಶ್ರೀಲಂಕಾ ಆಟಗಾರನ ಮೇಲೆ ಕೈ ಮಾಡಿದ ನಂತರ ವೈಭವ್ ಸೂರ್ಯವಂಶಿ ಮೇಲೆ ಅದೆಂಥಾ ಒತ್ತಡವಿತ್ತು, ಸುಮ್ಮನೆ ಊಹಿಸಿಕೊಳ್ಳಿ.. ಅವನನ್ನು ಖಳನಾಯಕನಂತೆ ನೋಡಿದ್ದರು.. ಅವನಲ್ಲೊಬ್ಬ ದುರಹಂಕಾರದ ಹುಡುಗನನ್ನು ಕಂಡಿದ್ದರು.. ಕೋಪದ ಮೇಲೆ ನಿಯಂತ್ರಣವಿಲ್ಲದ ಭಂಡ ಬಾಲಕನನ್ನು ಕಂಡಿದ್ದರು.. ‘’ಫೈನಲ್’ನಲ್ಲಿ ಅದೇನು ಮಾಡುತ್ತಾನೆ ನೋಡಿಯೇ ಬಿಡೋಣ’’ ಎಂದು ಅವನೆಡೆಗೆ ನೋಡುತ್ತಿದ್ದರು.. ತಪ್ಪೇನಿಲ್ಲ.. ಎಲ್ಲವೂ ಅವರವರ ಭಾವಕ್ಕೆ, ಅವರವರ ಭಕುತಿಗೆ.. ಆದರೆ ನೆನಪಿರಲಿ.. ಅವನ ವಯಸ್ಸು 15.. ಇಂಥಾ ಸಣ್ಣ ವಯಸ್ಸಲ್ಲೇ ದೊಡ್ಡ ಒತ್ತಡವನ್ನು ಮೆಟ್ಟಿ ನಿಂತು ಇಡೀ ಕ್ರಿಕೆಟ್ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂಥಾ ಇನ್ನಿಂಗ್ಸ್ ಆಡಿದ್ದಾನೆ ಸೂರ್ಯವಂಶಿ.
ಅವರು ಕೆರಳಿಸಿದ್ದರು, ಇವನು ಕೆರಳಿ ನಿಂತ.. ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟ.
ಐಪಿಎಲ್’ನಲ್ಲೂ ಪ್ರಫುಲ್ ಹಿಂಗೆ ಎಂಬ ಬೌಲರ್ ಸೂರ್ಯವಂಶಿಯನ್ನು ಮೊದಲ ಎಸೆತದಲ್ಲೇ ಔಟ್ ಮಾಡಿ ಬೀಗಿದ್ದ, ಹುಡುಗ ಕೆರಳುವಂಥಾ ಮಾತುಗಳನ್ನಾಡಿದ್ದ.. ಅದೇ ತಂಡದ ವಿರುದ್ಧದ ಮುಂದಿನ ಪಂದ್ಯದಲ್ಲಿ ಸೂರ್ಯವಂಶಿ ಸುಂಟರಗಾಳಿಯಂಥಾ ಶತಕ ಬಾರಿಸಿ ಬಿಟ್ಟ. ಈಗ ಶ್ರೀಲಂಕಾ ‘ಎ’ ತಂಡದ ಆಟಗಾರರ ಸರದಿ.
ಸೂರ್ಯವಂಶಿಗೆ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಮರೆಯಲೇಬಾರದ ಎರಡು ನಿಯಮಗಳು:
Rule 1: ಅವನು ಕೋಪಗೊಳ್ಳುವಂತೆ ಮಾಡದಿರಿ. ಹಾಗೆ ಮಾಡಿದರೆ ಮುಂದಿನ ಇನ್ನಿಂಗ್ಸ್’ನಲ್ಲೇ ನಿಮ್ಮ ತಂಡವನ್ನು ಧ್ವಂಸ ಮಾಡಿ ಬಿಡುತ್ತಾನೆ.
Rule 2: ಮೊದಲ ನಿಯಮವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು
ಇನ್ನು ವೈಭವ್ ಸೂರ್ಯವಂಶಿ ಪ್ರತಾಪ ಐಪಿಎಲ್’ನಲ್ಲಷ್ಟೇ ಎನ್ನುವವರ ಗಮನಕ್ಕೆ… ಈ ವರ್ಷದ ಐಪಿಎಲ್ ಪ್ಲೇ ಆಫ್ ಪಂದ್ಯಗಳೂ ಸೇರಿದಂತೆ ಆಡಿರುವ ನಾಲ್ಕು ದೊಡ್ಡ ನಾಕೌಟ್ ಪಂದ್ಯಗಳಲ್ಲಿ ಹೊಡೆದಿರುವ ರನ್:
• 175 (80): U-19 ವಿಶ್ವಕಪ್ ಫೈನಲ್ Vs ಇಂಗ್ಲೆಂಡ್
• 97 (29): ಐಪಿಎಲ್ ಎಲಿಮಿನೇಟರ್ Vs ಹೈದರಾಬಾದ್
• 96 (47): ಐಪಿಎಲ್ ಕ್ವಾಲಿಫೈಯರ್ 2 Vs ಗುಜರಾತ್8
• 94 (29): ತ್ರಿಕೋನ ಸರಣಿ ಫೈನಲ್ Vs ಶ್ರೀಲಂಕಾ A
ಸುದರ್ಶನ್ sports jo
urnalist ಅವರ Facebook ನಲ್ಲಿ ಬರೆದಿದ್ದು .