ನವದೆಹಲಿ: ಲಡಾಖ್ಗೆ ಪ್ರವಾಸಕ್ಕೆಂದು ಹೋಗಿದ್ದ ಮಹಿಳೆಯೊಬ್ಬರು ಭಾರತೀಯ ಸೇನೆಯ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಈ ವಿಡಿಯೋವನ್ನ ನೀವುಗಳು ಕೂಡ ಗಮನಿಸಿರಬಹುದು, ಆದರೆ ಇದೀಗ ಆ ಮಹಿಳೆ ಭಾರತೀಯ ಸೇನೆ ಮತ್ತು ಪೊಲೀಸರ ಬಳಿ ಕ್ಷಮೆ ಕೇಳಿದ್ದು, ಖಾಸಗಿ ವಾಹಿನಿಯೊಂದಿಗೆ ಮಾತನಾಡುವ ವೇಳೆ ಮಹಿಳೆ ಕ್ಷಮೆಯಾಚಿಸಿದ್ದಾಳೆ.
ಜುಲೈ 26ರ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ದ್ರಾಸ್ ಪ್ರದೇಶದ ಮಿನಿಮಾರ್ಗ್-ಜೋಜಿಲಾ-ಸೋನಾಮಾರ್ಗ್ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಈ ವೇಳೆ ಲಡಾಖ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಯುವತಿ ಸೇರಿದಂತೆ ಹಲವು ಪ್ರವಾಸಿಗರನ್ನು ಮಿನಿಮಾರ್ಗ್ ಚೆಕ್ಪೋಸ್ಟ್ ಬಳಿ ತಡೆಯಲಾಗಿತ್ತು. ವಿಐಪಿಗಳ ಸಂಚಾರಕ್ಕಾಗಿ ಐದಾರು ಗಂಟೆಗಳ ಕಾಲ ರಸ್ತೆ ತಡೆ ಹಿಡಿದಿದ್ದನ್ನು ಪ್ರಶ್ನಿಸಿದ್ದ ಯುವತಿ, ಮಂತ್ರಿಗಳಿಗೆ ಹೋಗಲು ಹೇಗೆ ಅವಕಾಶ ನೀಡಿದ್ದೀರಿ ? ಜೆನ್-ಝಿಗಳು ಇಂತಹ ಅಸಂಭದ್ದ ನಡವಳಿಕೆಯನ್ನ ಸಹಿಸಲ್ಲ ಎಂದು ಭದ್ರತಾ ಪಡೆಗಳ ಮುಂದೆ ಕೂಗಾಡಿದ್ದಳು. ಈ ಕುರಿತಾದ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಕ್ಷಮೆ ಕೇಳಿದ ಯುವತಿ
ಈ ವಿಡಿಯೋ ಕುರಿತು ಎನ್ಡಿಟಿವಿ ಮಾತನಾಡಿರುವ ಮಹಿಳೆ ʻನಾವು ಸುಮಾರು 6 ಗಂಟೆಗಳ ಕಾಲ ಶೌಚಾಲಯಕ್ಕೆ ಹೋಗಲು ಸಾಧ್ಯವಾಗದೆ ತೀವ್ರ ಸಂಕಷ್ಟ ಅನುಭವಿಸಿದ್ದೆ, ಆಗಾಗಲೇ ಸಾಕಷ್ಟು ಜನ ಭದ್ರತಾ ಪಡೆಗಳ ಜೊತೆ ಗಲಾಟೆ ಮಾಡ್ತಿದ್ದರು. ನಾನು ಆ ಜಾಗಕ್ಕೆ ಹೋದಾಗ ಜನರ ಪ್ರಚೋದನೆಯಿಂದ, ಹತಾಶೆಯಿಂದ ಮಾತನಾಡಿದೆ, ಈ ಕ್ಷಣದಲ್ಲಿ ಅಚಾನಕ್ಕಾಗಿ ಜೆನ್-ಝಿ ಎಂಬ ಮಾತು ಕೂಡ ಬಾಯಿಂದ ಬಂತು, ಆದರೆ ಇದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆ ಕ್ಷಣದಲ್ಲಿ, ನಾನು ಹೇಳುತ್ತಿರುವುದು ಇಷ್ಟೊಂದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ನನಗೆ ಅನ್ನಿಸಲೇ ಇಲ್ಲ. ಅದು ತಪ್ಪಾಗಿ ಬಾಯಿಂದ ಬಂದಿದ್ದಷ್ಟೇ. ಜೆನ್ ಝಿ ಉಲ್ಲೇಖಿಸಿ ಯಾವುದೇ ಹೇಳಿಕೆ ನೀಡುವ ಉದ್ದೇಶ ನನಗಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಜೊತೆಗೆ ಆ ವಿಡಿಯೋ ವೈರಲ್ ಆದ ನಂತರ ಬಂದ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ನಾನು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ನನ್ನ ಮಾತಿನಿಂದ ಸೇನಾ ಪಡೆಗಳು ಹಾಗೂ ದೇಶದ ಜನರ ಮನಸ್ಸಿಗೆ ನೋವಾಗಿದ್ದಕ್ಕೆ ನಾನು ತೀವ್ರವಾಗಿ ಪಶ್ಚಾತ್ತಾಪ ಪಡುತ್ತೇನೆ ಎಂದು ಹೇಳಿದ್ದಾಳೆ.
#NDTVExclusive | "I was provoked. I said all those things out of frustration and I'm really sorry for it": Ladakh tourist from the widely shared "We are Gen Z" video to @ShivAroor pic.twitter.com/UqdQmHP1R9
— NDTV (@ndtv) August 20, 2026