Search


2 ಸಾವಿರ ಬಾಡಿಗೆ ಕಟ್ಟಲಾಗದ ಮಹಿಳೆ ಮೇಲೆ ಮಾಲೀಕನಿಂದ ಅತ್ಯಾಚಾರ; ಸಿಎಂ ಸಿದ್ದು ಅಘಾತ..!

ತುಮಕೂರು : ನಿನ್ನೆ(ಮೇ,19) ಕಲ್ಪತರು ನಾಡು ತುಮಕೂರಿನಲ್ಲಿ ರಾಜ್ಯ ಸರ್ಕಾರ ಮೂರು ವರ್ಷದ ಸಾಧನ ಸಮಾವೇಶವನ್ನ ಅದ್ದೂರಿಯಾಗಿ ನಡೆಸಿದೆ. ಈ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ನಡೆಸಿದ್ದು. ಗುಜರಾತ್‌ ಮಾಡೆಲ್‌ನ್ನು ಟೀಕಿಸಿದ್ದಾರೆ. ಈ ವೇಳೆ ಕಳೆದ ಕೆಲ ದಿನಗಳ ಹಿಂದೆ ಗುಜರಾತ್‌ನಲ್ಲಿ ಮನೆ ಬಾಡಿಗೆ ಕಟ್ಟಲಾಗದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ನಡೆಸಿದ ಪ್ರಕರಣವನ್ನು ಕೂಡ ಉಲ್ಲೇಖಿಸಿದರು.

ಏನಿದು ಘಟನೆ...!

ಗುಜರಾತ್‌ನ ಸುರೇಂದ್ರನಗರದಲ್ಲಿ  ವಾಸಿಸುತ್ತಿದ್ದ ಕುಟುಂಬವೊಂದು ಸುಮಾರು ಆರು ತಿಂಗಳ ಹಿಂದೆ ಜೀವನೋಪಾಯವನ್ನು ಹುಡುಕುತ್ತಾ ಮೋರ್ಬಿಗೆ ಸ್ಥಳಾಂತರಗೊಂಡಿತು. ತಿಂಗಳಿಗೆ 2,000 ರೂ. ಬಾಡಿಗೆ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಆದರೆ, ಅವರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಇದರ ಪರಿಣಾಮವಾಗಿ ನಾಲ್ಕು ತಿಂಗಳಿನಿಂದ ಬಾಡಿಗೆ ಕಟ್ಟಿರಲಿಲ್ಲ ಎನ್ನಲಾಗಿದೆ. ಈ ವೇಳೆ ಮನೆ ಮಾಲೀಕ ಬಾಡಿಗೆ ಹಣವನ್ನು ನೀಡುವಂತೆ ಒತ್ತಡ ಹೇರಿದ್ದು. ಇದರಿಂದ ಹತಾಶನಾದ ಕುಟುಂಬದ ಮುಖ್ಯಸ್ಥ ಬಾಕಿ ಇರುವ ಬಾಡಿಗೆಗೆ ಬದಲಿಗೆ ತನ್ನ ಹೆಂಡತಿ ಮತ್ತು ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮನೆ ಮಾಲೀಕನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದೆ.

ಈ ವಿಚಾರ ಅತ್ಯಾಚಾರ ಸಂತ್ರಸ್ಥೆಯ ತಾಯಿಗೆ ತಿಳಿದು, ಅವರು ಮೋರ್ಬಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು. ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) ಸೇರಿದಂತೆ ಕಠಿಣ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮಹಿಳೆಯ ಪತಿ ಮತ್ತು ಮನೆ ಮಾಲೀಕನನ್ನು ಬಂಧಿಸಿದ್ದಾರೆ.

ಗುಜರಾತ್‌ ಮಾಡೆಲ್‌ ಇದೇ ಎಂದು ಸಿಎಂ ಅಘಾತ....!

ಇನ್ನು ಈ ಪ್ರಕರಣವನ್ನ ಸಾಧನ ಸಮಾವೇಶದ  ವೇದಿಕೆ ಮೇಲೆ ಪ್ರಸ್ತಾಪಿಸಿದ ಸಿಎಂ ಸಿದ್ದು. 2500 ಸಾವಿರ ಬಾಡಿಗೆ ಕಟ್ಟಲಾಗದ ಕುಟುಂಬದ 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ಎಸಗಿದ್ದಾನೆ. ಇದು ನಿಜವಾದ ಗುಜರಾತ್‌ ಮಾಡೆಲ್‌. ಕರ್ನಾಟಕದ ಮಾದರಿ ಮುಂದೆ, ಗುಜರಾತ್‌ ಮಾಡೆಲ್‌ ಟೊಳ್ಳಾಗಿದೆ ಎಂದು ಸಿಎಂ ಸಿದ್ದು ವೇದಿಕೆ ಮೇಲೆ ಅಬ್ಬರಿಸಿದರು. 

By News Desk - 20-05-2026


Ads in Post