ಕ್ವಾಲಿಫೈಯರ್ 2ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಎಂಟ್ರಿ ಕೊಟ್ಟಿದೆ, ಆದರೆ ಈ ಪಂದ್ಯದಲ್ಲಿ ಬ್ಯಾಟರ್ ಸಾಯಿ ಸುದರ್ಶನ್ ಮತ್ತೊಮ್ಮೆ ಹಿಟ್ ವಿಕೆಟ್ ಆಗಿ ಔಟ್ ಆಗಿದ್ದು. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಹಿಟ್ ವಿಕೆಟ್ ಆಗಿ ಔಟಾದ ಏಕೈಕ ಬ್ಯಾಟರ್ ಎಂದು ದಾಖಲೆ ನಿರ್ಮಿಸಿದ್ದಾರೆ. ಹೀಗಾಗಿಯೇ ಫೈನಲ್ ಪಂದ್ಯದಲ್ಲಿ ಕೈಗೆ ಗ್ಲೂ (ಗಮ್) ಹಾಕಿ ಬ್ಯಾಟಿಂಗ್ ಮಾಡ್ತೀರಾ? ಎಂಬ ಪ್ರಶ್ನೆ ಮುಂದಿಡಲಾಗಿದೆ.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಹಿಟ್ ವಿಕೆಟ್ ಆಗಿದ್ದ ಸಾಯಿ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಿಟ್ ವಿಕೆಟ್ ಆಗಿ ವಿಕೆಟ್ ಕೈಚೆಲ್ಲಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಾಯಿ ಸುದರ್ಶನ್ಗೆ, ಅಹಮದಾಬಾದ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನೀವು ಕೈಗೆ ಗಮ್ ಹಾಕಿ ಬ್ಯಾಟಿಂಗ್ ಮಾಡ್ತೀರಾ? ಎಂದು ನಿರೂಪಕರು ಕೇಳಿದ್ದಾರೆ.
ಇದಕ್ಕೆ ನಗುತ್ತಾ ಉತ್ತರಿಸಿದ ಸಾಯಿ, ನಾನು ಹೊಸದಾಗಿ ಏನನ್ನಾದರೂ ಮಾಡಬೇಕಿದೆ. ಈ ಸಮಸ್ಯೆಗೆ ಪರಿಹಾರವಾಗಿ ಹೊಸದಾಗಿ ‘ಗ್ರಿಪ್ ಟೆಕ್’ ಬಳಸಿ ನೆಟ್ಸ್ನಲ್ಲಿ ಕೆಲವು ಎಸೆತಗಳನ್ನು ಎದುರಿಸಿ ಪರೀಕ್ಷಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.ಇದೇ ವೇಳೆ ಎರಡು ಬಾರಿ ಹಿಟ್ ವಿಕೆಟ್ ಆದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಾಯಿ ಸುದರ್ಶನ್, ಕಳೆದ ಪಂದ್ಯದಲ್ಲಿ ಚೆಂಡು ಬೌನ್ಸ್ ಆಗಿದ್ದ ಪರಿಣಾಮ ಬ್ಯಾಟ್ ಜಾರಿ ಸ್ಟಂಪ್ಗೆ ಬಡಿಯಿತು. ಈ ಬಾರಿ ನಾನು ನೇರವಾಗಿ ಶಾಟ್ ಬಾರಿಸಲು ಬಯಸ್ಸಿದ್ದೆ. ದುರಾದೃಷ್ಟವಶಾತ್ ಹಿಟ್ ವಿಕೆಟ್ ಆದ ಎಂದರು.
ಇನ್ನು ರಾಜಸ್ಥಾನ ವಿರುದ್ದ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೆ ಎಂಟ್ರಿ ಕೊಟ್ಟಿರುವ ಗುಜರಾತ್, ನಾಳೆ (ಭಾನುವಾರ) ಫೈನಲ್ನಲ್ಲಿ ಆರ್ಸಿಬಿಯನ್ನ ಎದುರಿಸಲಿದ್ದು, ಈ ಪಂದ್ಯಕ್ಕಾಗಿ ಅಹಮದ್ಬಾದ್ನಲ್ಲಿ ಭರ್ಜರಿ ಸಿದ್ದತೆಗಳು ಆರಂಭಗೊಂಡಿವೆ.