Search


ಶನಿವಾರದೊಳಗೆ ರಾಜೀನಾಮೆ ಕೊಡಬೇಕು; ಶಿಕ್ಷಣ ಸಚಿವರಿಗೆ ಅಭಿಜೀತ್‌ ದೀಪ್ಕೆ ಎಚ್ಚರಿಕೆ..!

ನವದೆಹಲಿ : ಕಾಕ್ರೋಚ್‌ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ, ಕೇಂದ್ರ ಶಿಕ್ಷಣ ಸಚಿವರಿಗೆ ಎಚ್ಚರಿಕೆ ರವಾನಿಸಿದ್ದು, "ಮುಂದಿನ ಏಳು ದಿನಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ವತಃ ರಾಜೀನಾಮೆ ನೀಡದಿದ್ದರೆ ಅಥವಾ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು, ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಂದು ಕಾಕ್ರೋಚ್ ಜನತಾ ಪಾರ್ಟಿ ಘೋಷಿಸಿದೆ.

ನೀಟ್‌ ಪೇಪರ್‌ ಲೀಕ್‌ ವಿರುದ್ದ ಶನಿವಾರ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದ ಸಿಜೆಪಿ, ಇದೀಗ ಈ ಪ್ರತಿಭಟನೆಯನ್ನ ದೇಶವ್ಯಾಪ್ತಿ ವಿಸ್ತರಿಸಲು ಯೋಜನೆ ರೂಪಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಅವ್ಯವಹಾರಗಳನ್ನ ವಿರೋಧಿಸಿ ದೊಡ್ಡ ಆಂಧೋಲನ ಕೈಗೊಳ್ಳುವ ಎಚ್ಚರಿಕೆ ರವಾನಿಸಿದೆ. 

ಮಾಧ್ಯಮದವರ ಜೊತೆ ಮಾತನಾಡಿರುವ ಅಭಿಜೀತ್‌ ದೀಪ್ಕೆ " ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಸಿದ ಬೃಹತ್‌ ಪ್ರತಿಭಟನೆ ಯಶಸ್ವಿಯಾಗಿದೆ, ಸುಮಾರು 7 ಸಾವಿರಕ್ಕೂ ಹೆಚ್ಚು ಯುವಕರು ಬಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ, ಆದರೆ ಈ ಪ್ರತಿಭಟನೆ ಇಲ್ಲಿಗೆ ನಿಲ್ಲಲ್ಲ ಇದನ್ನ ಇಡೀ ದೇಶವ್ಯಾಪಿ ವಿಸ್ತರಿಸುತ್ತೇವೆ ಎಂದು ಹೇಳಿದ್ದಾರೆ.

ಜೊತೆಗೆ ನೀಟ್‌, ಸಿಬಿಎಸ್‌ಸಿ, ಎಸ್‌ಎಸ್‌ಸಿ ಸೇರಿದಂತೆ ಹಲವಾರು ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಕ್ಕೆ ಹೊಣೆಗಾರರಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡುವವರೆಗೂ ಈ ಹೋರಾಟ ನಿಲ್ಲುವುದಿಲ್ಲ, ಇಡೀ ದೇಶವ್ಯಾಪಿ ಈ ಹೋರಾಟವನ್ನ ವಿಸ್ತರಿಸುತ್ತೇವೆ ಎಂದು ಘೋಷಿಸಿದ್ದಾರೆ.

By Ravikumar - 08-06-2026


Ads in Post