Search


ಒಡೆದು ಹೋಳಾಯ್ತು AIADMK ಪಕ್ಷ TVK ವಿಜಯ್‌ಗೆ ಜೈ ಎಂದ 30 ಶಾಸಕರು

ಚೆನೈ : ತಮಿಳುನಾಡಿನ ರಾಜಕಾರಣ ದಿನಕೊಂದು ಟ್ವಿಸ್ಟ್‌ ಪಡೆಯುತ್ತಿದ್ದು, ಎಂಜಿಆರ್‌ ಕಟ್ಟಿ ಬೆಳೆಸಿದ ಎಐಎಡಿಎಂಕೆ ಪಕ್ಷ ಎರಡು ಬಣಗಳಾಗಿ ಒಡೆದು ಹೋಳಾಗಿದೆ. ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಪಳನಿಸ್ವಾಮಿ 17 ಶಾಸಕರ ಬೆಂಬಲ ಹೊಂದಿದ್ದರೆ. ಷಣ್ಮುಗಂ ಅವರು 30 ಶಾಸಕರ ಬೆಂಬಲ ಹೊಂದಿದ್ದಾರೆ. ಹೀಗಾಗಿ ಪಳನಿಸ್ವಾಮಿಯನ್ನು ಪಕ್ಷದ ಶಾಸಕಾಂಗ ಸಮಿತಿ ನಾಯಕನ ಸ್ಥಾನದಿಂದ ಕೆಳಗಿಳಿಯುವಂತೆ ಪಕ್ಷದಲ್ಲೆ ಭಾರಿ ಒತ್ತಾಯ ಕೇಳಿ ಬರುತ್ತಿದೆ.
ಇತ್ತೀಚೆಗೆ ನಡೆದ ತಮಿಳುನಾಡಿನ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಕೇವಲ 47 ಸ್ಥಾನಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದರಿಂದಾಗಿ ಪಕ್ಷದಲ್ಲಿ ಆತಂರಿಕ ಕಲಹ ಆರಂಭಗೊಂಡಿದ್ದು. ಎಡಪ್ಪಾಡಿ ಪಳನಿಸ್ವಾಮಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪಕ್ಷದ 30 ಶಾಸಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ವಿಜಯ್‌ಗೆ ಬೆಂಬಲ ಘೋಷಿಸಿದ 30 ಎಐಎಡಿಎಂಕೆ ಶಾಸಕರು…!

ತಮಿಳುನಾಡಿನಲ್ಲಿ ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭಗೊಂಡಿದ್ದು. ಓ.ಎಸ್‌ ಮಣಿಯನ್‌ ನೇತೃತ್ವದಲ್ಲಿ 17 ಶಾಸಕರು ಪಳನಿಸ್ವಾಮಿಯನ್ನು ಶಾಸಕಾಂಗ ಸಮಿತಿ ಅಧ್ಯಕ್ಷರನ್ನಾಗಿ ಮಾಡಲು ಸ್ಪೀಕರ್‌ ಅವರಿಗೆ ಬೆಂಬಲ ಪತ್ರ ನೀಡಿದ್ದು. ಸಿ.ವಿ ಷಣ್ಮುಗಂ ನೇತೃತ್ವದಲ್ಲಿ 30 ಶಾಸಕರು ವೇಲುಮಣಿ ಅವರನ್ನು ಬೆಂಬಲಿಸಿ ಸ್ಪೀಕರ್‌ ಅವರಿಗೆ ಪತ್ರ ನೀಡಿದ್ದಾರೆ, 
ಇದಲ್ಲದೆ ಷಣ್ಮುಗಂ ನೇತೃತ್ವದ 30 ಶಾಸಕರು ಟಿವಿಕೆ ನಾಯಕ  ಮತ್ತು ಮುಖ್ಯಮಂತ್ರಿ ವಿಜಯ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ವಿಜಯ್‌ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಷಣ್ಮುಗಂ “ ಜನಾಭಿಪ್ರಾಯ ವಿಜಯ್‌ ಅವರ ಪರವಾಗಿದೆ. ಆದರೆ ಪಳನಿಸ್ವಾಮಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಪಕ್ಷದ ತತ್ವಗಳಿಗೆ ವಿರುದ್ದವಾಗಿದೆ, ಆದ್ದರಿಂದ ಟಿವಿಕೆಗೆ ಬೆಂಬಲ ಘೋಷಿಸುತ್ತಿದ್ದೇವೆ ಎಂದು ಷಣ್ಮುಗಂ ಪ್ರತಿಕ್ರಿಯೆ ನೀಡಿದರು.

By thebigbulletin.com - 12-05-2026


Ads in Post