Search


ಮೋದಿ ಪ್ರಧಾನಿಯಾಗಿ 4399 ದಿನಗಳು ಸಂಪೂರ್ಣ ಸಾಧನೆಗಳ ಪಟ್ಟಿ ನೀಡಿದ ಬಿಜೆಪಿ!

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ 4,399 ದಿನಗಳು ಅಂದರೆ 12 ವರ್ಷ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಸಂದರ್ಭವನ್ನು ಬಿಜೆಪಿ ಸಂಭ್ರಮದಿಂದ ದೇಶಾದ್ಯಂತ ಆಚರಿಸುತ್ತಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 4, 399 ದಿನಗಳಲ್ಲಿ ಅವರು ಮಾಡಿರುವ ಸಾಧನೆಗಳನ್ನು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದೆ.

ಮೂಲಸೌಕರ್ಯ, ಸ್ಟಾರ್ಟ್‌ಅಪ್‌ ಸೇರಿದಂತೆ ಹೂಡಿಕೆಯವರೆಗೆ ಭಾರತವಿಂದು ಮಹತ್ವದ ದಾಖಲೆಗಳನ್ನು ನಿರ್ಮಿಸಿದೆ. ಸಮರ್ಥ ನಾಯಕತ್ವ, ದೂರದೃಷ್ಟಿ ಮತ್ತು ದೃಢ ಸಂಕಲ್ಪದೊಂದಿಗೆ ನವ ಭಾರತ ಆತ್ಮನಿರ್ಭರವಾಗುತ್ತಿದೆ ಎಂದು ಹೇಳಿದೆ.

2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74. ಈಗ ಅದು 164ಕ್ಕೆ ಏರಿಕೆಯಾಗಿದೆ. 51, 348 ಎಂಬಿಬಿಎಸ್ ಸೀಟುಗಳು ಈಗ 1.28 ಲಕ್ಷ ಆಗಿದೆ. 13 IIM ಗಳು ಈಗ 21ಕ್ಕೆ ಏರಿಕೆಯಾಗಿವೆ. 304 ಶತಕೋಟಿ ಡಾಲರ್ ನಷ್ಟಿದ್ದ ವಿದೇಶಿ ವಿನಿಮಯ 680 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

By thebigbulletin.com - 10-06-2026


Ads in Post