Search


ನೆಗೆಟಿವ್ ರಿವ್ಯೂ ನಡುವೆ ರೇಟಿಂಗ್ ತೆಗೆದುಹಾಕಿದ ಬುಕ್ ಮೈ ಶೋ

ರಾಕಿಂಗ್‌ ಸ್ಟಾರ್‌ ಯಶ್ ಅವರು ನಟಿಸಿರುವ, ಗೀತು ಮೋಹನ್‌ ದಾಸ್‌ ಅವರು ನಿರ್ದೇಶಿಸಿರುವ ಟಾಕ್ಸಿಕ್‌: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale For Grown Ups) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರು ಕೂಡ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ಅಷ್ಟೇನೂ ಉತ್ತಮವಾಗಿಲ್ಲ. ಇದರ ನಡುವೆ ಚಿತ್ರದ ಬಗ್ಗೆ ಋಣಾತ್ಮಕ ವಿಮರ್ಶೆಗಳು ಹೆಚ್ಚಾಗುತ್ತಿದ್ದು, ಇದೀಗ BookMyShowನಲ್ಲಿ ಸಿನಿಮಾದ ರೇಟಿಂಗ್‌ ಅನ್ನೇ ತೆಗೆದು ಹಾಕಲಾಗಿದೆ.

ಸಿನಿಮಾ ಟಿಕೆಟ್‌ ಬುಕ್ಕಿಂಗ್‌ ಆಪ್‌ ಬುಕ್‌ ಮೈ ಶೋನಲ್ಲಿ ಟಾಕ್ಸಿಕ್‌ ಚಿತ್ರದ ರೇಟಿಂಗ್‌ ತೆಗೆದು ಹಾಕಲಾಗಿದೆ, ರೇಟಿಂಗ್ ಮಾಯವಾಗುವ ಮೊದಲು, BookMyShow ನಲ್ಲಿ 'ಟಾಕ್ಸಿಕ್' ಚಿತ್ರವು ಸುಮಾರು 5.6/10 ರಷ್ಟು ಸ್ಕೋರ್ ಹೊಂದಿತ್ತು. ಚಿತ್ರದ ಬಲವಾದ ಬಾಕ್ಸ್ ಆಫೀಸ್ ಪ್ರದರ್ಶನ ಮತ್ತು ಯಶ್ ಅವರ ಜನಪ್ರಿಯತೆಯ ಹೊರತಾಗಿಯೂ ಈ ರೇಟಿಂಗ್ ಕಡಿಮೆಯೇ ಇತ್ತು. ಇದೀಗ ಸಿನಿಮಾ ರೇಟಿಂಗ್‌ ತೆಗೆದುಹಾಕಿದ ವಿಚಾರ ತಿಳಿದ ನೆಟ್ಟಿಗರು, ಯಾಕೆ ಹೀಗೆ ಮಾಡಲಾಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಟಾಕ್ಸಿಕ್‌ ಸಿನಿಮಾದ ಬಗ್ಗೆ  ಋಣಾತ್ಮಕ ವಿಮರ್ಶೆ ಮಾಡದಂತೆ, ಸುಳ್ಳು ಪ್ರಚಾರ ಮಾಡದಂತೆ ಚಿತ್ರತಂಡ ನ್ಯಾಯಾಲಯದಿಂದ ತಡೆಯಾಜ್ಞೆಯನ್ನ ತಂದಿತ್ತು, ಇದರಿಂದಾಗಿ ಸಿನಿಮಾದ ಬಗ್ಗೆ ಅನೇಕರು ವಿಮರ್ಶೆ ಮಾಡಲು ಹಿಂದೇಟು ಹಾಕಿದ್ದರು, ಇದೀಗ BookMyShowನಲ್ಲೂ ಸಿನಿಮಾದ ರೇಟಿಂಗ್‌ ಮಾಯವಾಗಿದ್ದು, ಇದಕ್ಕೆ ಕಾರಣವೇನು ಎಂಬ ಪ್ರಶ್ನೆಯನ್ನ ಪ್ರೇಕ್ಷಕ ವರ್ಗ ಮಾಡುತ್ತಿದೆ. ತಮ್ಮ ಅಮೂಲ್ಯವಾದ ಹಣ ಮತ್ತು ಸಮಯವನ್ನ ಸಿನಿಮಾಗಾಗಿ ವ್ಯಯಿಸುವ ಪ್ರೇಕ್ಷಕರಿಗೆ ಸಿನಿಮಾದ ವಿಮರ್ಶೆ ಮಾಡುವ ಅಧಿಕಾರವೂ ಇದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರಲಾರಂಭಿಸಿವೆ.

By Ravikumar - 27-08-2026


Ads in Post