ಕೊಪ್ಪಳ: ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ಗಳ ಲೋಕಾರ್ಪಣೆಗಾಗಿ ಕೊಪ್ಪಳಕ್ಕೆ ಬಂದಿದ್ದ ಆಂದ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿಯವರ ನದಿ ಜೋಡಣೆ ಕೊಂಡಾಡಿದ್ದಾರೆ. ಈ ವೇಳೆ ವೇದಿಕೆ ಮೇಲೆ ಕರ್ನಾಟಕ ಸಿಎಂ ಡಿಕೆ. ಶಿವಕುಮಾರ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಉಪಸ್ಥಿತರಿದ್ದರು.
ಕೊಪ್ಪಳ (Koppala) ತಾಲೂಕಿನ ಮುನಿರಾಬಾದ್ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu), ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಮತ್ತು ರೇವಂತ್ ರೆಡ್ಡಿ ಎದುರೇ ಪ್ರಧಾನಿ ಮೋದಿ (Modi) ಗುಣಗಾನ ಮಾಡಿದ್ದಾರೆ. ನದಿಗಳ ಜೋಡಣೆಯಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇದು ನಡೆಯುವ ವಿಶ್ವಾಸ ತನಗಿದೆ ಎಂದವರು ಹೇಳಿದ್ದಾರೆ.
ತುಂಗಾ ಪಾನಃ, ಗಂಗಾ ಸ್ನಾನಃ..!
ನನಗೆ ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ ಎಂದ ನಾಯ್ಡು, ತುಂಗಭದ್ರಾ ತಾಯಿಗೆ ಶಿರಭಾಗಿ ನಮಸ್ಕಾರ ಮಾಡ್ತೀನಿ. ತುಂಗಾ ಪಾನಃ ಗಂಗಾ ಸ್ನಾನಃ ಎಂಬ ಮಾತಿದೆ. ತುಂಗಾ ನೀರು ಕುಡಿಯಲು ಶುದ್ಧ ಎಂದೇ ಪ್ರಸಿದ್ದಿ ಪಡೆದಿದೆ. ಕೊಚ್ಚಿ ಹೋಗಿದ್ದರಿಂದ ನೂತನ ಕ್ರಸ್ಟ್ ಗೇಟ್ ಲೋಕಾರ್ಪಣೆ ಆಗಿದೆ. ಕೊಚ್ಚಿ ಹೋಗಿದ್ದ ಒಂದು ಗೇಟ್‌ನ್ನು ಮಾತ್ರ ಹೊಸದಾಗಿ ಅಳವಡಿಸಿಲ್ಲ. ಬದಲಾಗಿ ಜಲಾಶಯದ ಎಲ್ಲಾ 33 ಗೇಟ್ ಹೊಸದಾಗಿ ಅಳವಡಿಸಲಾಗಿದೆ. ಕೇವಲ ಆರು ತಿಂಗಳಲ್ಲಿ ಈ ಕೆಲಸ ಮುಗಿದಿದ್ದಕ್ಕೆ ಹೆಮ್ಮೆ ಇದೆ. ಮೂವರು ಸಿಎಂಗಳು ಒಂದೇ ವೇದಿಕೆಯಲ್ಲಿ ಸೇರಿದ್ದು ಒಂದು ಇತಿಹಾಸ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ನಾಯ್ಡು "ಹೊಸ ಕ್ರಸ್ಟ್ ಗೇಟ್ ಅಳವಡಿಕೆ ವಿಳಂಬವಾಗಿದ್ದರೆ ಭಾರಿ ಅಪಾಯ ಆಗುತ್ತಿತ್ತು. ಇದೀಗ ಆ ಅಪಾಯ ದೂರವಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಬಹಳ ವೇಗವಾಗಿ ಮುನ್ನಡೆಯುತ್ತಿದೆ. ಸರಿಯಾದ ವ್ಯಕ್ತಿ, ಸರಿಯಾದ ಸ್ಥಳ ಮತ್ತು ಸರಿಯಾದ ಸಮಯ ಇದ್ದರೆ ಎಲ್ಲ ಸಾಧ್ಯವೆಂದು ಪ್ರತಿದಾರಿ ಬಾರಿ ನಾನು ಹೇಳುತ್ತೇನೆ. ಅದು ನರೇಂದ್ರ ಮೋದಿ ಎಂದವರು ಹೇಳಿದ್ದಾರೆ.