Search


ಆಸ್ತಿ ಸಮನಾಗಿ ಹಂಚುವಂತೆ ತಹಶೀಲ್ದಾರ್‌ ಕಚೇರಿ ಮುಂದೆ ತಂದೆ ಶವವಿಟ್ಟು ಪ್ರತಿಭಟಿಸಿದ ಮಕ್ಕಳು

ಬಾಗಲಕೋಟೆ : ಮನುಷ್ಯ ಎಷ್ಟು ಕ್ರೂರವಾಗುತ್ತಿದ್ದಾನೆ ಎಂಬುದಕ್ಕೆ ಈ ಸುದ್ದಿ ಉದಾಹರಣೆ ಎಂದರೆ ತಪ್ಪಾಗಲಾರದು. ಆಸ್ತಿಯನ್ನ ಸಮನಾಗಿ ಹಂಚುವಂತೆ ಮೃತ ವ್ಯಕ್ತಿಯ ಮಕ್ಕಳು ಮತ್ತು ಪತ್ನಿಯರು, ಶವದ ಸಮೇತ ತಹಶೀಲ್ದಾರ್‌ ಕಚೇರಿಗೆ ತೆರಳಿ ಪ್ರತಿಭಟಿಸಿರುವ ಘಟನೆ, ಬಾಗಲಕೋಟೆಯ ಜಮಖಂಡಿ ತಹಶೀಲ್ದಾರ್‌ ಕಚೇರಿ ಮುಂದೆ ನಡೆದಿದೆ.  

ಜಮಖಂಡಿಯ ಅವಟಿ ಗಲ್ಲಿ ನಿವಾಸಿ ಯಲ್ಲಪ್ಪ ವಾಗೆಣ್ಣವರ(76) ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಮೊದಲ ಪತ್ನಿಗೆ ಓರ್ವ ಮಗನಿದ್ದು, 2ನೇ ಪತ್ನಿಗೆ ಐವರು ಗಂಡು ಮಕ್ಕಳು, ಒಬ್ಬಳು ಹೆಣ್ಣುಮಗಳು ಇದ್ದಾರೆ. ಈ ಪೈಕಿ 2ನೇ ಪತ್ನಿಯ ಇಬ್ಬರು ಮಕ್ಕಳು 2 ಎಕರೆ 15 ಗುಂಟೆ ಭೂಮಿ ಯಾರಿಗೂ ತಿಳಿಯದಂತೆ ಮಾರಿದ್ದು, ಈಗಾಗಲೇ ಜಮೀನು ಮಾರಿರೋದನ್ನು ತಡೆಹಿಡಿಯಬೇಕು. ನಮ್ಮ ಪಾಲಿಗೆ ಬರುವ ಆಸ್ತಿಯನ್ನು ಸಮಾನವಾಗಿ ಹಂಚಬೇಕು ಎಂದು ಮೊದಲ ಪತ್ನಿ, ಮಗ ಹಾಗೂ 2ನೇ ಪತ್ನಿ ಸೇರಿ ಮೂವರು ಮಕ್ಕಳು ಪಟ್ಟು ಹಿಡಿದ ಪ್ರಸಂಗ ನಡೆದಿದೆ.

By Ravikumar - 07-09-2026


Ads in Post