Search


ನೈಸ್‌ ಯೋಜನೆ ಕುರಿತು ಪತ್ರ ಬರೆದ ದೇವೇಗೌಡರಿಗೆ ಸಿಎಂ ಕೌಂಟರ್‌; ಉಪವಾಸ ಮಾಡಲಿ ಎಂದ ಡಿಕೆಶಿ

ಬೆಂಗಳೂರು: ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆಶಿ ʻ ನೈಸ್‌ ಯೋಜನೆಯನ್ನ ಕಾನೂನಿನ ಚೌಕಟ್ಟಿನಲ್ಲೇ ಮಾಡಲಾಗಿದೆ. ಈ ವಿಚಾರದಲ್ಲಿ ಕಾನೂನು ಅಭಿಪ್ರಾಯವನ್ನೂ ಪಡೆದುಕೊಂಡಿದ್ದೇವೆ. ಬೇಕಾದ್ರೆ ದೇವೇಗೌಡರು ಕೊರ್ಟ್‌ಗೆ ಹೋಲಿ, ಉಪವಾಸ ಆದ್ರೂ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ʻನಾವು ಏನೆ ಮಾಡಿದರು ಕಾನೂನು ಚೌಕಟ್ಟಿನಲ್ಲಿ ಕಾನೂನು ಅಭಿಪ್ರಾಯ ತೆಗೆದುಕೊಂಡಿದ್ದೇವೆ. ಕಾನೂನು ಬಿಟ್ಟು ಏನು ಮಾಡಲ್ಲ ಯಾರು ತಲೆಕೆಡಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದ್ರೆ ಕೋರ್ಟ್ ಇದೆ ಕಾನೂನು ಇದೆ ಉಪವಾಸ ಬೇಕಾದರೆ ಮಾಡಲಿ. ನನಗೂ ಪ್ರಜ್ನೆ ಇದೆ ಬೇಸಿಕ್ ಕಾಮನಸೆನ್ಸ್ ಇದೆ ಎಂದಿದ್ದಾರೆ.

ಕಾನೂನು ಬಿಟ್ಟು ಯಾವುದೇ ಕೆಲಸ ಮಾಡುವುದಿಲ್ಲ. ಹೀಗಾಗಿ ಯಾರೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬೇಕಾದ್ರೆ ಕಾನೂನು ಇದೆ, ಕೋರ್ಟ್ ಇದೆ. ಉಪವಾಸ ಮಾಡಬೇಕಾದ್ರೆ ಮಾಡಲಿ. ನನಗೂ ಪ್ರಜ್ಞೆ ಇದೆ, ಬೇಸಿಕ್ ಕಾಮನ್ ಸೆನ್ಸ್ ಇದೆ. ನಿಮ್ಮ ವೈಯಕ್ತಿಕ ಅಭಿಪ್ರಾಯಗಳು ಹಾಗೂ ಚರ್ಚೆಗಳನ್ನ ನಾನು ಮೊದಲಿನಿಂದಲೂ ನೋಡಿದ್ದೇನೆ. ಯಾವ ಅಗ್ರಿಮೆಂಟ್‌ಗೆ ಸಹಿ ಹಾಕಲಾಗಿದೆಯೋ, ಅದೇ ಹಾದಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾರು ಆಸ್ತಿ ಕಳೆದುಕೊಂಡಿದ್ದಾರೋ ಅವರನ್ನು ರಕ್ಷಣೆ ಮಾಡಬೇಕು ಅಲ್ಲವೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರಗಳು ಮಾಡಿಕೊಂಡಿರುವ ಅಗ್ರಿಮೆಂಟ್‌ಗಳನ್ನೆಲ್ಲ ತಾನು ಪರಿಶೀಲಿಸಿದ್ದೇನೆ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ಮುಂದುವರಿಸಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು. ಈ ಮೂಲಕ ದೇವೇಗೌಡರ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.

By Ravikumar - 07-09-2026


Ads in Post