Search


ಬೆನ್ನ ಹಿಂದೆ ಚೂರಿ ಹಾಕಿದ ಆಪ್ತರಿಗೆ ಶಾಕ್‌ ಕೊಡ್ತಾರಾ ಸಿದ್ದರಾಮಯ್ಯ..!

ಬೆಂಗಳೂರು : ರಾಜಕೀಯದಲ್ಲಿ ಯಾರೂ ಶತೃಗಳಲ್ಲ, ಯಾರು ಮಿತ್ರರಲ್ಲ ಎಂಬ ಮಾತಿದೆ, ಆ ಶತೃಗಳು ಬೇರೆ ಪಕ್ಷದವರೆ ಆಗಬೇಕಿಲ್ಲ, ಸ್ವಪಕ್ಷೀಯರೆ ಕೆಲವೊಮ್ಮೆ ಬೆನ್ನ ಹಿಂದೆ ಚೂರಿ ಹಾಕಿದ ಅನೇಕ ಘಟನೆಗಳು ಇತಿಹಾಸ ಪುಟದಲ್ಲಿವೆ, ಅದೇ ರೀತಿ ಇದೀಗ ನಿರ್ಗಮಿತ ಸಿಎಂ ಸಿದ್ದರಾಮಯ್ಯನವರು "ಜೊತೆಯಲ್ಲಿದ್ದುಕೊಂಡೆ ಕತ್ತಿ ಮಸೆದ ಕೆಲವು ಸಚಿವರಿಗೆ" ಶಾಕ್‌ ಕೊಟ್ಟಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡಲಾರಂಭಿಸಿದೆ.

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ಶಿವಕುಮಾರ್‌ ಸಿದ್ದತೆ ನಡೆಸುತ್ತಿದ್ದಾರೆ. ಇದರ ನಡುವೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅನೇಕ ಶಾಸಕರು ಪ್ರಯತ್ನಿಸುತ್ತಿದ್ದು, ಹಿಂದಿನ ಸಚಿವ ಸಂಪುಟದಲ್ಲಿದ್ದ ಸಚಿವರು ಹೇಗಾದರು ಮಾಡಿ ತಮ್ಮ ಸ್ಥಾನವನ್ನ ಭದ್ರ ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅದರಲ್ಲೂ ಸಿದ್ದರಾಮಯ್ಯರಿಗೆ ಆಪ್ತರಾಗಿದ್ದ ಸಚಿವರು, ಹೈಕಮಾಂಡ್‌ ಮುಂದೆ ತಮ್ಮ ಪರವಾಗಿ ಸಿಎಂ ಬ್ಯಾಟಿಂಗ್‌ ಮಾಡಿ ತಮ್ಮ ಸ್ಥಾನಕ್ಕೆ ಕುತ್ತು ಬರದಂತೆ ನೋಡಿಕೊಳ್ಳುತ್ತಾರೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ. ಆದರೆ ಮೂಲಗಳ ಮಾಹಿತಿ ಪ್ರಕಾರ ಸಿದ್ದರಾಮಯ್ಯನವರು ಈ ವಿಶಯದಲ್ಲಿ ಮೌನ ವಹಿಸಿದ್ದಾರೆ ಎನ್ನುತ್ತವೆ.

Why the Vokkaligas are angry with Siddaramaiah

ಸಿದ್ದರಾಮಯ್ಯರಿಗೆ ಆಪ್ತರಾಗಿದ್ದ ಕೆಲ ಸಚಿವರು, ಅಧಿಕಾರ ಹಂಚಿಕೆ ಚರ್ಚೆ ಆರಂಭವಾದ ನಂತರ, ಸಿದ್ದು ಜೊತೆ ಅಂತರ ಕಾಯ್ದುಕೊಂಡಿದ್ದರು, ಅಷ್ಟೇ ಅಲ್ಲದೇ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಗುಪ್ತ ಸಭೆಗಳನ್ನ ಮಾಡಿದ್ದರು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇನ್ನು ಇತ್ತೀಚೆಗೆ ಕೆಲ ಸಚಿವರು ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ ಎಂದು ಪರೋಕ್ಷವಾಗಿ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಇದೆಲ್ಲದರ ಬಗ್ಗೆ ಅರಿವಿರಿವು ಸಿದ್ದರಾಮಯ್ಯ ಹೈಕಮಾಂಡ್‌ ಮುಂದೆ ಆಪ್ತರಿಗಾಗಿ ಲಾಭಿ ಮಾಡುವುದನ್ನ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಮುಡಾ ವೇಳೆ ಕೈಬಿಟ್ಟವರಿಗೆ ಕಾದಿದೆ ಶಾಕ್‌...!

ಸಿದ್ದರಾಮಯ್ಯರ ರಾಜಕೀಯ ಜೀವನಕ್ಕೆ ಕಪ್ಪು ಮಸಿ ಬಳಿದಿದ್ದು ಮೂಡಾ ಪ್ರಕರಣ, ಈ ಪ್ರಕರಣದ ತನಿಖೆ ವೇಳೆ ಸಿದ್ದರಾಮಯ್ಯರಿಂದ ಅಂತರ ಕಾಯ್ದುಕೊಂಡ ಕೆಲ ಸಚಿವರಿಗೂ ಹೈಕಮಾಂಡ್‌ ಶಾಕ್‌ ಕೊಡುವ ಸಾಧ್ಯತೆ ಇದೆ.

ಅತ್ತ ಸಚಿವ ಕೆ.ಜೆ ಜಾರ್ಜ್‌, ಡಿಕೆ ಶಿವಕುಮಾರ್‌ ಅವರ ನೇತೃತ್ವದ ಸಚಿವ ಸಂಪುಟಕ್ಕೆ ಸೇರಲು ನಿರಾಕರಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅವರಿಗೆ ರಾಜ್ಯಸಭೆಯ ಟಿಕೆಟ್‌ ಕೊಡಿಸಲು ಸಿದ್ದರಾಮಯ್ಯ ಪ್ರಯತ್ನಿಸಿದ್ದಾರೆ. 

ಸಂಭಾವ್ಯ ಸಚಿವರ ಪಟ್ಟಿ..!

ಜೂನ್‌ 3ರಂದು ಡಿಕೆ ಶಿವಕುಮಾರ್‌ ಅವರ ಜೊತೆ 14 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭಿಸಿದ್ದು. ಪ್ರಿಯಾಂಕ್ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ. ಪಾಟೀಲ್, ರೂಪಾ ಶಶಿಧರ್, ಸತೀಶ್ ಜಾರಕಿಹೋಳಿ, ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ಆರ್. ಚಲುವರಾಯಸ್ವಾಮಿ, ಬೈರತಿ ಸುರೇಶ್, ಯು.ಟಿ. ಖಾದರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡು ರಾವ್ ಮತ್ತು ಎನ್.ಎ. ಹ್ಯಾರಿಸ್ ಈ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. 

By Ravikumar - 30-05-2026


Ads in Post