Search


ದೇಶದಲ್ಲಿ ಜಿರಳೆ ಪಾರ್ಟಿ ಅಬ್ಬರ ಸುಪ್ರೀಂಕೋರ್ಟ್‌ನಿಂದ ಹುಟ್ಟಿದ ಪಕ್ಷದ ಹಿನ್ನಲೆಯೇನು ಗೊತ್ತಾ..?

ನವದೆಹಲಿ: ದೇಶದಲ್ಲಿ ಜೆನ್‌-ಜೀಗಳಿಂದ ಹೊಸ ಡಿಜಿಟಲ್‌ ರಾಜಕೀಯ ಪಕ್ಷವೊಂದರ ಉದಯವಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಧೀಶರ ಬಾಯಿಂದ ಬಂದ ಅಣಿ ಮುತ್ತುಗಳನ್ನೇ ಆಯುಧ ಮಾಡಿಕೊಂಡಿರುವ, ಯುವ ಜನತೆ "ಜಿರಳೆ ಜನತಾ ಪಾರ್ಟಿ" ಎಂಬ ಶೀರ್ಷಿಕೆಯಡಿ ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹಾಗಾದರೆ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಈ ಪಕ್ಷದ ಉದಯವಾಗಲು ಕಾರಣವೇನು, ಇದರ ಸುತ್ತ ಪ್ರಸ್ತುತ ನಡೆಯುತ್ತಿರುವ ರಾಜಕೀಯವಾದರು ಏನು ಎಂಬುದನ್ನ ತಿಳಿಯೋಣ ಬನ್ನಿ.

ದೇಶದ ಯುವಕರನ್ನ ಜಿರಳೆಗೆ ಹೋಲಿಸಿದ ಸಿಜೆಐ..!

ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವೊಂದರ ವಿಚಾರಣೆ ನಡೆಸುವ ವೇಳೆ, ಸಿಜೆಐ ಸೂರ್ಯಕಾಂತ್‌ ಅವರು ನೀಡಿದ ಹೇಳಿಕೆ, ದೇಶದಲ್ಲಿ ಹೊಸ ಚಂಡಮಾರುತ ಎಬ್ಬಿಸಿದೆ. ವಿಚಾರಣೆ ಸಂದರ್ಭದಲ್ಲಿ ಸೂರ್ಯಕಾಂತ್‌ ಅವರು " ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಪರವಾಲಂಬಿಗಳಾಗಿದ್ದಾರೆ. ಉದ್ಯೋಗ, ಸ್ಥಾನಮಾನ ಸಿಗದಿದ್ದಾಗ, ಅವರು RTI ಕಾರ್ಯಕರ್ತರು, ಸೋಷಿಯಲ್‌ ಮೀಡಿಯಾ ಬಳಕೆದಾರರ ಸೋಗಿನಲ್ಲಿ ಇಡೀ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ಹೇಳಿಕೆ ಈಗ ಕಾಕ್ರೋಚ್‌ ಜನತಾ ಪಾರ್ಟಿಯಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿದೆ.

 ಕಾಕ್ರೋಚ್‌ ಪಾರ್ಟಿಗೆ ಆಮ್‌ ಆದ್ಮಿ ಪಕ್ಷದ ಅಭಿಜೀತ್ ದೀಪ್ಕೆ ಪಿತಾಮಹ..!

ಕಾಕ್ರೋಚ್‌ ಪಾರ್ಟಿಯನ್ನ ಡಿಜಿಟಲ್‌ ಕಂಟೆಂಟ್‌ ಕ್ರಿಯೇಟರ್‌ ಅಭಿಜಿತ್‌ ದೀಪ್ಕೆ ಎಂಬ ಯುವಕ ಸ್ಥಾಪಿಸಿದ್ದು. ಈ ಯುವಕ ಕೆಲ ಕಾಲ ಆಮ್‌ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದನು, ಅಭಿಜೀತ್‌ ಹಿನ್ನಲೆಯ ಬಗ್ಗೆ ನೋಡುವುದಾದರೆ ಈತ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿದ್ಯಾರ್ಥಿಯಾಗಿದ್ದು, ಈ ಹಿಂದೆ 2020 ಮತ್ತು 2023 ರ ನಡುವೆ ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧಿಸಿದ ರಾಜಕೀಯ ಪ್ರಚಾರಗಳು ಮತ್ತು ಸಾಮಾಜಿಕ ಮಾಧ್ಯಮ ಸ್ಥಳಗಳಲ್ಲಿ ಕೆಲಸ ಮಾಡಿದ್ದನು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಮತ್ತು ರಾಜಕೀಯ ವಿಡಂಬನಾಕಾರನಾಗಿ ಸಕ್ರಿಯನಾಗಿದ್ದನು ಎಂದು ತಿಳಿದು ಬಂದಿದೆ. ಇದೀಗ ಈತ ಸ್ಥಾಪಿಸಿರುವ ಕಾಕ್ರೋಚ್‌ ಪಾರ್ಟಿಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 1 ಕೋಟಿ ಹಿಂಬಾಲಕರಿದ್ದು. ಈತ ದೇಶದ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಲೇವಡಿ ಮಾಡುತ್ತಾ ಪೋಸ್ಟ್‌ಗಳನ್ನು ಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ.


"ಕಾಕ್ರೋಚ್‌" ಸುತ್ತ ರಾಜಕೀಯ ಕೆಸರೆರಚಾಟ..!

ಜಿರಳೆ ಜನತಾ ಪಾರ್ಟಿಯ ಸುತ್ತ ರಾಜಕಾರಣವೂ ಜೋರಾಗಿ ನಡೆಯುತ್ತಿದೆ, ವಿಪಕ್ಷಗಳು ಅಧಿಕೃತವಾಗಿ ನಿಲ್ಲದಿದ್ದರು ಈ ಪಾರ್ಟಿಯ ಧ್ವನಿ ಎತ್ತಿದ್ದಾರೆ, ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ಸೃಷ್ಠಿಸುವಲ್ಲಿ ವಿಫಲವಾಗಿದೆ. ಆದ್ದರಿಂದ ಯುವಕರ ಆಕ್ರೋಶ ಈ ರೀತಿ ಕಟ್ಟೆಯೊಡೆಯುತ್ತಿದೆ. ಆಡಳಿತ ಪಕ್ಷವು ತನಿಖಾ ಸಂಸ್ಥೆಗಳ ಭಯ ಹುಟ್ಟಿಸಿ ಇತರ ಪಕ್ಷಗಳ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಹೀಗೆ ಪಕ್ಷಾಂತರ ಮಾಡಿ ಬರುವ ನಾಯಕರಿಂದಲೇ ಆಡಳಿತ ಪಕ್ಷವು ‘ಕಾಕ್ರೋಚ್ ಪಾರ್ಟಿ’ಯಾಗಿ ಬದಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವು ಟಾಂಗ್‌ ನೀಡುತ್ತಿದ್ದು "ಸಿದ್ಧಾಂತಗಳಿಲ್ಲದ, ಕೇವಲ ಅಧಿಕಾರ ಹಿಡಿಯಲು ಮಾತ್ರ ಒಂದಾಗಿರುವ ವಿರೋಧ ಪಕ್ಷಗಳ ಮಹಾಘಟಬಂಧನ್ (ಮಹಾ ಮೈತ್ರಿ) ನಿಜವಾದ ‘ಕಾಕ್ರೋಚ್ ಪಾರ್ಟಿ’ ಎಂದು ಆಡಳಿತಾರೂಢ ನಾಯಕರು ಪ್ರತಿ ವಾದ ಮಾಡುತ್ತಿದ್ದಾರೆ.

ಸ್ಪಷ್ಟನೆ ಕೊಟ್ಟ ಸಿಜೆಐ ಸೂರ್ಯಕಾಂತ್‌...!

ಇನ್ನು ಈ ಎಲ್ಲಾ ಪ್ರಹಸಕ್ಕೆ ಕಾರಣವಾಗಿರುವ ಸಿಜೆಐ ಸೂರ್ಯಕಾಂತ್‌ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ, "ಭಾರತೀಯ ಯುವಕರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಇದಕ್ಕೆ ಪುಲ್‌ಸ್ಟಾಪ್‌ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ಇದ್ಯಾವುದಕ್ಕು ಕ್ಯಾರೆ ಎನ್ನದ ಕಾಕ್ರೋಚ್‌ ಪಾರ್ಟಿ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚಿಸಿಕೊಂಡು ಬೃಹದಾಕಾರವಾಗಿ ಬೆಳೆಯುತ್ತಿದೆ. 

By News Desk - 21-05-2026


Ads in Post