ಭೋಪಾಲ್: ರಾಮ ಮಂದಿರಕ್ಕೆ (Ram Mandir Donation) ನೀಡಿದ್ದ ದೇಣಿಗೆ ಹಣ ದುರುಪಯೋಗವಾಗಿದೆ, ಆ ಹಣವನ್ನ ವಾಪಸ್ ಕೊಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಜಯ್ ಸಿಂಗ್ (Digvijaya Singh) ಒತ್ತಾಯಿಸಿದ್ದಾರೆ. ಈ ಕುರಿತು ಅವರು ಅಯೋಧ್ಯೆಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ಆಗಿರುವ ಅಕ್ರಮದ ಕುರಿತು ದೇಶದೆಲ್ಲಡೆ ಚರ್ಚೆಯಾಗುತ್ತಿದ್ದು, ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಎಸ್ಐಟಿಯನ್ನ ರಚಿಸಿದೆ. ಈಗಾಗಲೇ ಹಣವನ್ನ ಕದ್ದಿದ್ದಾರೆ ಎಂದು ಆರೋಪಿಸಿ 8 ಜನರನ್ನ ಬಂಧಿಸಿದಲಾಗಿದೆ. ಈ ವಿವಾದದ ಸುತ್ತ ರಾಜಕೀಯ ಕೆಸರೆರಚಾಟವು ಜೋರಾಗಿ ನಡೆಯುತ್ತಿದ್ದು. ಇದೀಗ ದಿಗ್ವಿಜಯ್ ಸಿಂಗ್ ಅವರು ರಾಮ ಮಂದಿರಕ್ಕೆ ನೀಡಿದ್ದ ದೇಣಿಗೆ ಹಣವನ್ನ ವಾಪಾಸ್ ಕೊಡುವಂತೆ ಕೇಳಿದ್ದಾರೆ.
ಈ ಕುರಿತು ಹೇಳಿಕೆ ಕೊಟ್ಟಿರುವ ದಿಗ್ವಿಜಯ್ ಸಿಂಗ್ "ನಾನು ನೀಡಿದ ದೇಣಿಗೆಯನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದರ ವಿರುದ್ಧ ಅಯೋಧ್ಯೆ ಕೋರ್ಟ್ನಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ದೇಣಿಗೆ ನೀಡಿದ್ದ ಹಣವನ್ನ ಅವರು ಲೂಟಿ ಮಾಡಿದ್ದಾರೆ, ಆದ್ದರಿಂದ ಅದನ್ನ ನನಗೆ ಹಿಂದಿರುಗಿಸಬೇಕು. ನಂತರ ನಾನು ಅದನ್ನ ‘ರಾಮಾಲಯ ಟ್ರಸ್ಟ್’ಗೆ ಜಮೆ ಮಾಡಬಹುದು ಎಂದಿದ್ದಾರೆ. ಜೊತೆಗೆ ಪೊಲೀಸ್ ಠಾಣೆಯಲ್ಲಿ ನನಗೆ ನಂಬಿಕೆಯಿಲ್ಲ, ಏಕೆಂದ್ರೆ ಪೊಲೀಸರನ್ನ ಬಿಜೆಪಿ ನಿಯಂತ್ರಿಸುತ್ತದೆ. ಆದ್ದರಿಂದ ನಾನು ಅಯೋಧ್ಯೆಯ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕಾಗಿ ಎರಡು ಬಾರಿ ದೇಣಿಗೆ
ದಿಗ್ವಿಜಯ್ ಸಿಂಗ್, ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನವನ್ನ ಎರಡು ಬಾರಿ ನಡೆಸಲಾಯಿತು. ಎಲ್.ಕೆ. ಅಡ್ವಾಣಿ ಅವರ ರಥಯಾತ್ರೆಯ ಸಮಯದಲ್ಲಿ ನಾನು ಮೊದಲ ಬಾರಿಗೆ ದೇಣಿಗೆ ನೀಡಿದ್ದೆ. ನಮಗೆ ರಾಮ ಮಂದಿರ ಮತ್ತು ಶ್ರೀರಾಮನ ಮೇಲೆ ನಂಬಿಕೆ ಇದೆ. ಆದರೆ ಮೊದಲ ಬಾರಿಗೆ ಸಂಗ್ರಹಿಸಿದ ದೇಣಿಗೆಗಳಿಗೆ ಎಂದಿಗೂ ಲೆಕ್ಕಪತ್ರ ಕೊಡಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ (ಶ್ರೀ ರಾಮ ಜನ್ಮಭೂಮಿ vs. ಬಾಬರಿ ಮಸೀದಿ ವಿವಾದ), ಮತ್ತೆ ನಿಧಿಸಂಗ್ರಹ ಅಭಿಯಾನ ಶುರು ಮಾಡಿ. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಈ ಅಭಿಯಾನ ಪ್ರಾರಂಭಿಸಿತ್ತು. ಆದ್ರೆ ನಾನು ಅವರಿಗೆ ದೇಣಿಗೆ ನೀಡಲಿಲ್ಲ, ಏಕೆಂದರೆ ನನಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ನೇರವಾಗಿ ಟ್ರಸ್ಟ್ಗೆ ದೇಣಿಗೆ ನೀಡಿದ್ದೆ ಎಂದು ಉತ್ತರಿಸಿದ್ದಾರೆ.