Search


ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಜೆಪಿಗರು ಬೀದಿಗೆ ಬರೋಕು ಬಿಡಲ್ಲ ; ಧಮ್ಕಿ ಹಾಕಿದ ಪವನ್‌ ಖೇರಾ..!

ಒಡಿಶಾ : ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಬಿಜೆಪಿ ನಾಯಕರಿಗೆ ಧಮ್ಕಿ ಹಾಕಿದ್ದು, ʻಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಗರು ರಸ್ತೆಗೆ ಬರೋದಕ್ಕೂ ಸಾಧ್ಯವಾಗಲ್ಲ, ಅವರು ಬೀದಿಗೆ ಬರಬೇಕು ಅಂದರೂ ಭದ್ರತೆ ತೆಗೆದುಕೊಂಡು ಬರುವ ಸ್ಥಿತಿ ನಿರ್ಮಿಸುತ್ತೇವೆʼ ಎಂದು ಧಮ್ಕಿ ಹಾಕುವ ಕೆಲಸ ಮಾಡಿದ್ದಾರೆ.

ದೇಶದ ಮೇಲೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ, ತುರ್ತು ಪರಿಸ್ಥಿತಿಯ 51ನೇ ವರ್ಷದ ಕರಾಳ ನೆನಪಿನ ಬಗ್ಗೆ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಪವನ್‌ ಖೇರ ಕೆಂಡವಾಗಿದ್ದಾರೆ, ಒಡಿಶಾದ ಭುವನೇಶ್ವರದಲ್ಲಿ ಮಾತನಾಡಿದ ಖೇರ ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು. ʻನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿ, ಆಗ ಕಳೆದ 15 ವರ್ಷದಿಂದ ಬಿಜೆಪಿ ಹಾಕಿರುವ ಎಮರ್ಜನ್ಸಿಯನ್ನ ನೆನಪಿಸುತ್ತೇವೆ, ಅವರಿಗೆ ರಸ್ತೆಗೂ ಬರಲಾಗುವುದಿಲ್ಲ, ಬೀದಿಗೆ ಬರಬೇಕು ಅಂದರೂ ಭದ್ರತೆಯೊಂದಿಗೆ ಬರುವ ಹಾಗೆ ಮಾಡ್ತೀವಿʼ ಎಂದು ಪವನ್‌ ಖೇರಾ ಹೇಳಿದರು. 

ಮುಂದುವರಿದು ಮಾತನಾಡಿದ ಖೇರಾ ʻಬಿಜೆಪಿ ಆಡಳಿತದಲ್ಲಿ ಮಾಧ್ಯಮಗಳ ಉಸಿರುಗಟ್ಟಿಸಲಾಗುತ್ತಿದೆ. ಚುನಾವಣಾ ಆಯೋಗ ಸೇರಿದಂತೆ ಅನೇಕ ಸ್ವತಂತ್ರ್ಯ ಸಂಸ್ಥೆಗಳನ್ನ ಅಪಹರಿಸಲಾಗುತ್ತಿದೆ. ಅವುಗಳನ್ನ ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಇಡಿ ಮತ್ತು ಸಿಬಿಐಯನ್ನು ವಿಪಕ್ಷಗಳ ವಿರುದ್ದ ಛೂ ಬಿಡುತ್ತಿರುವುದನ್ನ ನೀವು ನೋಡಬಹುದು ಎಂದು ಪವನ್‌ ಖೇರಾ ಹೇಳಿದರು

By thebigbulletin.com - 29-06-2026


Ads in Post