Search


ನೆಹರು ದಾಖಲೆ ಸರಿಗಟ್ಟಿದ ಪ್ರಧಾನಿ ಮೋದಿಗೆ ದೇವೇಗೌಡರಿಂದ ಶ್ಲಾಘನೆ..!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೊಸ ಇತಿಹಾಸ ನಿರ್ಮಿಸಿದ್ದು, ಸುದೀರ್ಘ ಅವಧಿಗೆ ಆಯ್ಕೆಯಾದ ಪ್ರಧಾನಿ ಎಂಬ ಐತಿಹಾಸಿಕ ಮೈಲುಗಲ್ಲನ್ನ ಸ್ಥಾಪಿಸಿದ್ದಾರೆ. ಈ ಸಾಧನೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದು, ಈ ಕುರಿತಾಗಿ ವಿಶೇಷ ಲೇಖನಗಳನ್ನ ಬರೆದು ಮೋದಿಗೆ ಗೌರವ ಸಲ್ಲಿಸಿದ್ದಾರೆ.

ದೇವೇಗೌಡರಿಂದ ಮೋದಿ ಬಣ್ಣನೆ...!

ನೆಹರು ಅವರ ನಂತರ ದೇಶದಲ್ಲಿ ಸತತವಾಗಿ ಅತಿ ಹೆಚ್ಚು ಅವಧಿಗೆ ಚುನಾಯಿತರಾದ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿರುವುದು ಅವರ ಮೇಲಿರುವ ಜನರ ಅಚಲವಾದ ವಿಶ್ವಾಸ ಮತ್ತು ಆಶೀರ್ವಾದಕ್ಕೆ ಸಾಕ್ಷಿಯಾಗಿದೆ. ಯಾವುದೇ ರಾಜಕೀಯ ಸವಾಲುಗಳಿದ್ದರೂ ರಾಷ್ಟ್ರದ ಭದ್ರತೆ, ಗಡಿ ರಕ್ಷಣೆ ಮತ್ತು ಕಡೇಯ ಸಾಲಿನಲ್ಲಿರುವ ಬಡವರ ಕಲ್ಯಾಣಕ್ಕೆ ಮೋದಿ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ಮಾಜಿ ಪ್ರಧಾನಿಗಳು ಮುಕ್ತವಾಗಿ ಶ್ಲಾಘಿಸಿದ್ದಾರೆ.

ಅವರು ಕೇವಲ ಯೋಜನೆಗಳನ್ನು ಘೋಷಿಸುವುದಿಲ್ಲ, ಬದಲಿಗೆ ತಮ್ಮ ನಿರ್ಧಾರಗಳ ಸಾಧಕ-ಬಾಧಕಗಳನ್ನು ತಾವೇ ನಿರಂತರವಾಗಿ ವಿಮರ್ಶಿಸಿಕೊಳ್ಳುತ್ತಾರೆ. ಯಾವುದೇ ಸವಾಲು ಎದುರಾದರೂ ಅದನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಕಾಲಕ್ಕೆ ತಕ್ಕಂತೆ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳುವ ಅದ್ಭುತ ಚಾಣಾಕ್ಷತನ ಅವರಲ್ಲಿದೆ. ಜಾಗತಿಕವಾಗಿ ಕಠಿಣ ಪರಿಸ್ಥಿತಿಗಳು ಎದುರಾಗಿದ್ದಾಗಲೂ ಭಾರತಕ್ಕೆ ಸ್ಥಿರವಾದ, ಬಲಿಷ್ಠವಾದ ಆಡಳಿತವನ್ನು ನೀಡುವ ಮೂಲಕ ಜಗತ್ತಿನಾದ್ಯಂತ ಭಾರತದ ಘನತೆಯನ್ನು ಮೋದಿ ಹೆಚ್ಚಿಸಿದ್ದಾರೆ ಎಂದು ದೇವೇಗೌಡ ಅವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಈ ರೀತಿಯಾಗಿ ಹೆಚ್.ಡಿ. ದೇವೇಗೌಡ ಅವರು, ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ ಸತತವಾಗಿ ಸುದೀರ್ಘ ಅವಧಿಗೆ ದೇಶವನ್ನು ಮುನ್ನಡೆಸುತ್ತಿರುವುದರ ಐತಿಹಾಸಿಕ ಮಹತ್ವವನ್ನು ಕೊಂಡಾಡಿದ್ದಾರೆ. ನರೇಂದ್ರ ಮೋದಿಯವರು ಕೇವಲ ಅಧಿಕಾರ ರಾಜಕಾರಣದ ಕಾರಣಕ್ಕಾಗಿ ಇಷ್ಟು ಯಶಸ್ವಿಯಾಗಿಲ್ಲ, ಬದಲಿಗೆ ಅವರಲ್ಲಿರುವ ಕಲಿಯುವ ಮತ್ತು ಬದಲಾಗುವ ವಿಶಿಷ್ಟ ಗುಣ ಅವರನ್ನು ಈ ಮಟ್ಟಕ್ಕೆ ತಂದಿದೆ ಎಂದು ಬಣ್ಣಿಸಿದ್ದಾರೆ.

By Ravikumar - 09-06-2026


Ads in Post