ರಾಮನಗರ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ಕೊಟ್ಟ ಸಿಎಂ ಡಿಕೆ ಶಿವಕುಮಾರ್ (DK Shivakumar),ಕ್ಷೇತ್ರದ ಜನರಿಗೆ 5 ಗ್ಯಾರಂಟಿಗಳನ್ನ ಕೊಟ್ಟಿದ್ದಾರೆ. ಜೊತೆಗೆ ಪಕ್ಷಭೇಧ ಬಿಟ್ಟು ರಾಜಕೀಯ ಆರಂಭದ ದಿನದಿಂದಲೂ ಗೆಲ್ಲಿಸಿಕೊಂಡು ಬಂದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೊದಲ ಬಾರಿಗೆ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭಾನುವಾರ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಿಕೆಶಿ, ಕ್ಷೇತ್ರ ಅಭಿವೃದ್ಧಿ ಜೊತೆಗೆ ಜನರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಕ್ಷೇತ್ರದ ಬಡವರಿಗೆ ತಲೆ ಮೇಲೆ ಸೂರು, ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕಡ್ಡಾಯ. ಮೆಡಿಕಲ್ ಕಾಲೇಜು ಶೀಘ್ರ ಪ್ರಾರಂಭ. ಸಮಸ್ಯೆಗಳನ್ನು ಆಲಿಸಲು ಅಧಿಕಾರಿ ನೇಮಕ” ಹೀಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಸ್ವಕ್ಷೇತ್ರ ಕನಕನಪುರ (Kanakapura) ಕ್ಷೇತ್ರದ ಜನರಿಗೆ ಪಂಚ ವಚನಗಳನ್ನು ನೀಡಿದರು.
ಇದೇ ವೇಳೆ “ನನ್ನ ಕ್ಷೇತ್ರದ ಜನರಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ನಿಮ್ಮ ಸೇವೆಗೆ ಇರುವವನು. ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇನೆ. ನನ್ನ ಕ್ಷೇತ್ರಕ್ಕೆ ಕಾಲಿಟ್ಟ ಕ್ಷಣದಿಂದ ನಾನು ಜನರ ಸೇವಕ. ಜಿಲ್ಲಾ ಪಂಚಾಯತಿ, ಟಿಎಪಿಸಿಎಂಎಸ್ ಮೂಲಕ ನನ್ನ ರಾಜಕೀಯ ಪ್ರಾರಂಭ ಮಾಡಿದೆ. ಪಕ್ಷಬೇಧ ಮರೆತು ನನ್ನನ್ನು ಬೆಳೆಸಿದ್ದೀರಿ” ಎಂದರು.
ಹುಟ್ಟೂರಿನ ಜನರಿಗೆ ಡಿಕೆಶಿ ಧನ್ಯವಾದ..!
ಹುಟ್ಟೂರಾದ ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಇದೊಂದು ಇತಿಹಾಸಕ ದಿನ. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಪ್ರಮಾಣ ವಚನ ಮಾಡಿದ್ದೇನೆ.ಇದು ನಿಮ್ಮ ಗ್ರಾಮಕ್ಕೆ ಗೌರವ ಸಲ್ಲಬೇಕು. ನಾನು 1985ರಿಂದ ಚುನಾವಣೆ ನಿಂತಾಗಲಿಂದಲೂ ನನ್ನ ಜೊತೆ ಇದ್ದೀರಿ. ಸಾಕಷ್ಟು ಹಿರಿಯರು ಬೆನ್ನಾಲಬಾಗಿ ನಿಂತು ಆರ್ಶಿವಾದ ಮಾಡಿದ್ದಾರೆ.
ನಾನು ಸಿಎಂ ಅಂತಾ ಹೇಳಿಕೊಳ್ಳಲು ಬಂದಿಲ್ಲ.ನಾನು ಎಂದಿಗೂ ಊರಿನ ಮಗ. ನನ್ನನ್ನ ಬಿಜೆಪಿಯವರು ಜೈಲಿಗೆ ಕಳುಹಿಸಿದರು. ನಾನು ಎಂದಿಗೂ ಅಗೌರವ ತಂದಿಲ್ಲ. ರಾಜಕೀಯವಾಗಿ ಷ್ಯಡ್ಯಂತ್ರ ನಡೆಯಿತು. ಆದರೂ ನೀವು ನನಗೆ ದೊಡ್ಡ ಶಕ್ತಿ ನೀಡಿದ್ರಿ. ಆದರೂ ಕೊನೆಗೂ ಅಧಿಕಾರ ನನಗೆ ಕೊಟ್ಟಿದ್ದಾರೆ. ಅಧಿಕಾರ ಹಂಚಿಕೆ ಪ್ರಕಾರ ನೀಡಿದ್ದಾರೆ. ನಿಮ್ಮ ಪಾದಗಳಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.