Search


ಸಿಎಂ ಅದ ಡಿಕೆಶಿ ; ಚಾಮುಂಡೇಶ್ವರಿಗೆ ಸೀರೆ ಸಮರ್ಪಿಸ ಹರಕೆ ತೀರಿಸಿದ ಪತ್ನಿ ಉಷಾ ಶಿವಕುಮಾರ್

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾದರೆ ದೇವಿಗೆ ರೇಷ್ಮೆ ಸೀರೆ ಸಮರ್ಪಿಸುವುದಾಗಿ ಉಷಾ ಶಿವಕುಮಾರ್ ಈ ಹಿಂದೆ ಹರಕೆ ಹೊತ್ತಿದ್ದರೆಂದು ತಿಳಿದುಬಂದಿದೆ. ಅದರಂತೆ, ಶುಭ ದಿನವಾದ ಮೊದಲ ಆಷಾಢ ಶುಕ್ರವಾರದಂದು ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿದ ಅವರು, ಕಾಣಿಕೆಯಾಗಿ ತಂದಿದ್ದ ರೇಷ್ಮೆ ಸೀರೆಯನ್ನು ಮೂಲ ವಿಗ್ರಹಕ್ಕೆ ಸಮರ್ಪಿಸಿ ಹರಕೆ ತೀರಿಸಿದರು. ಉಷಾ ಶಿವಕುಮಾರ್ ಸಮರ್ಪಿಸಿದ ಸೀರೆಯನ್ನು ದೇವಾಲಯದ ಆಡಳಿತ ಮಂಡಳಿ ಮತ್ತು ಪ್ರಧಾನ ಅರ್ಚಕರು ದೇವಿಗೆ ಉಡಿಸಿ, ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು. ಸಿಎಂ ಕುಟುಂಬದ ಈ ವಿಶೇಷ ಸೇವೆ ಭಕ್ತರ ಗಮನ ಸೆಳೆಯಿತು.

ಚಾಮುಂಡೇಶ್ವರಿ ದರ್ಶನ ಪಡೆದ ವಿಜಯಲಕ್ಷ್ಮಿ ದರ್ಶನ್ 

ಇದೇ ವೇಳೆ, ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಕೂಡ ತಮ್ಮ ಸ್ನೇಹಿತೆಯರೊಂದಿಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ವಿವಿಐಪಿ ದರ್ಶನದ ಮೂಲಕ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡೇಶ್ವರಿ ದೇವಿಯ ಮೇಲಿನ ಭಕ್ತಿಯಿಂದ ದರ್ಶನ್ ಕುಟುಂಬವು ಆಗಾಗ ದೇವಾಲಯಕ್ಕೆ ಭೇಟಿ ನೀಡುವುದು ತಿಳಿದ ಸಂಗತಿಯಾಗಿದೆ.

By Ravikumar - 17-07-2026


Ads in Post