Search


ಡಿಕೆಶಿ ನನ್ನ ಮಾತನ್ನ ಕೇಳ್ತಾರೆ; ಒಳ ಮೀಸಲಾತಿ ಬಾಂಬ್‌ ಸಿಡಿಸಿದ ಸಿದ್ದರಾಮಯ್ಯ

ಬೆಂಗಳೂರು: ಅಹಿಂದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಆಂತರಿಕ ಮೀಸಲಾತಿ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸದಾ ಹೋರಾಡುವುದಾಗಿ ತಿಳಿಸಿದ್ದಾರೆ. ಹಾಗೇಯೇ ನಾನು ಅಧಿಕಾರದಲ್ಲಿಲ್ಲದಿದ್ದರೂ ಕೂಡ, ಸಿಎಂ ಡಿಕೆ ಶಿವಕುಮಾರ್‌ ನನ್ನ ಮಾತನ್ನ ಕೇಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಸಾಮಾಜಿಕ ನ್ಯಾಯ ಮತ್ತು ಆಂತರಿಕ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಆಂತರಿಕ ಮೀಸಲಾತಿ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ, “ನಾನು ಈಗ ಸರ್ಕಾರದ ಮುಖ್ಯಸ್ಥನಲ್ಲ; ನನ್ನ ಕೈಯಲ್ಲಿ ಅಧಿಕಾರವಿಲ್ಲ. ಆದರೆ ನಾನು ಆಂತರಿಕ ಮೀಸಲಾತಿ, ಮೀಸಲಾತಿ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ವ್ಯಕ್ತಿ. ಈ ವಿಚಾರದಲ್ಲಿ ಈ ಹಿಂದೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ, ಮುಂದೆಯೂ ರಾಜಿ ಮಾಡಿಕೊಳ್ಳುವುದಿಲ್ಲ, ಶೋಷಿತ ಸಮುದಾಯದ ಜನರು ತಮ್ಮ ವಿರುದ್ಧ ಯಾರಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು, ನಾನು ತಿಳುವಳಿಕೆ ಬಂದಾಗಿನಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ, ಮುಂದೆಯೂ ನಡೆಸುತ್ತೇನೆ ಎಂದು ಸಿದ್ದು ಹೇಳಿದರು.

ಇನ್ನು ಆಂತರಿಕ ಮೀಸಲಾತಿ ಕುರಿತು ಮಾತನಾಡಿದ ಸಿದ್ದರಾಮಯ್ಯ ʻಸುಪ್ರೀಂ ಕೋರ್ಟ್ ಕೂಡ ಆಂತರಿಕ ಮೀಸಲಾತಿಗೆ ಒಪ್ಪಿಗೆ ಸೂಚಿಸಿದೆ. ಕಾಂಗ್ರೆಸ್ ಪಕ್ಷ ಮತ್ತು ನಮ್ಮ ಸರ್ಕಾರ ಸದಾ ಆಂತರಿಕ ಮೀಸಲಾತಿಯ ಪರವಾಗಿವೆ. ಮೀಸಲಾತಿ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇರಬಾರದು, ಅದಕ್ಕಾಗಿ ನಾಗಮೋಹನ್‌ ದಾಸ್‌ ಸಮತಿ ರಚಿಸಿ 5 ಗುಂಪುಗಳಾಗಿ ವಿಂಘಡಿಸಿ 15% ಮೀಸಲಾತಿ ಜಾರಿ ಮಾಡಿದ್ದೆವು. ಇಷ್ಟಾದರೂ ಕೂಡ ಮೀಸಲಾತಿ ಗೊಂದಲ ಮುಂದುವರಿದಿದೆ, ಆದರೂ ಒಳ ಮೀಸಲಾತಿ ಜಾರಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

‘ಡಿಕೆಶಿ ನನ್ನ ಮಾತು ಕೇಳುತ್ತಾರೆ ಎಂಬ ವಿಶ್ವಾಸವಿದೆ’

ಒಳ ಮೀಸಲಾತಿ ಜಾರಿ ಮಾಡುವ ವಿಷಯದಲ್ಲಿ ಸಿಎಂ ಡಿಕೆ ಶಿವಕುಮಾರ್‌ ನನ್ನ ಮಾತನ್ನ ಕೇಳುತ್ತಾರೆ ಎಂಬ ವಿಶ್ವಾಸವಿದೆ ಎಂದ ಸಿದ್ದರಾಮಯ್ಯ ʻಮೀಸಲಾತಿ ವಿಚಾರದಲ್ಲಿ ಅಂತಿಮ ನಿರ್ಧಾರವನ್ನ ಸಚಿವ ಸಂಪುಟವೇ ತೆಗೆದುಕೊಳ್ಳುತ್ತದೆ, ಆದರೆ ನಾನು ಅಧಿಕಾರದಲ್ಲಿ ಇಲ್ಲದಿದ್ದರು ಕೂಡ ಅವರು ನನ್ನ ಮಾತನ್ನ ಕೇಳುತ್ತಾರೆ ಎಂಬ ವಿಶ್ವಾಸ ನನಗಿದೆ, ದೇಶದಲ್ಲಿ ಅಸಮಾನತೆ ನಿವಾರಣೆಯಾಗುವವರೆಗೆ ಮೀಸಲಾತಿ ಮುಂದುವರಿಯಬೇಕು. ಜಾತಿ ವ್ಯವಸ್ಥೆಯನ್ನು ಹೆಚ್ಚು ಪಾಲಿಸುವವರು ವಿದ್ಯಾವಂತರೇ ಆಗಿದ್ದಾರೆ. ಅಂಬೇಡ್ಕರ್ ಅವರು, ‘ನಾನು ಇಲ್ಲಿಯವರೆಗೆ ಸಾಮಾಜಿಕ ನ್ಯಾಯದ ರಥವನ್ನು ಎಳೆದಿದ್ದೇನೆ. ಸಾಧ್ಯವಾದರೆ ಅದನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಂದಕ್ಕೆ ತಳ್ಳಬೇಡಿ ಎಂದು ಹೇಳಿದ್ದರು. ನಾವು ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.

 

By Ravikumar - 27-08-2026


Ads in Post