Search


ಮಠದ ಮಗನಾಗಿ ಬೆಳೆದ ಡಿಕೆಶಿ, ಮುಂದೆ ಉನ್ನತ ಸ್ಥಾನಕ್ಕೇರುತ್ತಾರೆ: ಶ್ರೀಗಳ ಭವಿಷ್ಯವಾಣಿ

ತುಮಕೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯ ಮಾತ್ರ ಮೃದು ಸ್ವಭಾವದಿಂದ ಕೂಡಿದೆ ಎಂದು ನೂಣನವಿನಕೆರೆಯ ಶಿವಯೋಗಿಶ್ವರ ಶ್ರೀಗಳು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಮಠದ ಆಶೀರ್ವಾದದಿಂದ ಬೆಳೆದಿದ್ದು, ಕಷ್ಟದ ಸಂದರ್ಭಗಳಲ್ಲಿಯೂ ಮಠದ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರು ಮಠದ ಮಗನಂತೆ ಬಂದಿದ್ದಾರೆ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರು ತಮ್ಮ ಹಿಂದಿನ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಂಡು ಸರ್ವ ಜನರ ಆತ್ಮೀಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಪ್ರಜೆಗಳು ಹಾಗೂ ಸೈನಿಕರನ್ನು ಉತ್ತಮ ಉದ್ದೇಶದೊಂದಿಗೆ ಮುನ್ನಡೆಸುತ್ತಿದ್ದಾರೆ. ತಾಯಿ ವಾತ್ಸಲ್ಯದಂತೆ ರಾಜ್ಯದ ಎಲ್ಲ ಜನರನ್ನು ಪ್ರೀತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಶ್ರೀಗಳು ಭವಿಷ್ಯ ನುಡಿದರು.

ಮಠ ಎಂದಿಗೂ ರಾಜಕೀಯ ವಿಚಾರದಲ್ಲಿ ಯಾರಿಗೂ ಸಲಹೆ ನೀಡುವುದಿಲ್ಲ. ರಾಜಕೀಯದಲ್ಲಿ ಧರ್ಮವನ್ನು ಬೆರೆಸುವ ಪ್ರಶ್ನೆಯೇ ಇಲ್ಲ. ಮಾನವ ಸೇವೆ ಮಾಡುವಂತೆ ಮಾತ್ರ ಸಲಹೆ ನೀಡುತ್ತೇವೆ. ಡಿ.ಕೆ. ಶಿವಕುಮಾರ್ ಅವರು ಸರಳ, ಸಜ್ಜನಿಕೆ ಹಾಗೂ ಮಾತೃ ಹೃದಯ ಹೊಂದಿರುವ ವ್ಯಕ್ತಿಯಾಗಿದ್ದಾರೆ ಎಂದು ನೂಣನವಿನಕೆರೆಯ ಶಿವಯೋಗಿಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

By Ravikumar - 26-09-2026


Ads in Post