Search


ಬೆಂಗಳೂರಿಗೆ ಕಾಲಿಡ್ತಾ ಎಬೋಲಾ ಸೋಂಕು... ಆಫ್ರೀಕಾ ಮಹಿಳೆಯಲ್ಲಿ ರೋಗ ಲಕ್ಷಣ..!

ಬೆಂಗಳೂರು : ಇಡೀ ವಿಶ್ವದಲ್ಲಿ ಆತಂಕಕ್ಕೆ ಕಾರಣವಾಗಿರುವ ಶಂಕಿತ ಎಬೋಲಾ ಪ್ರಕರಣವೊಂದು ರಾಜಧಾನಿಯಲ್ಲಿ ಪತ್ತೆಯಾಗಿದೆ. ಉಗಾಂಡ ದೇಶದಲ್ಲಿ ಬಂದಿರುವ 28 ವರ್ಷದ ಮಹಿಳೆಯಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು. ಸದ್ಯ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಆಫ್ರೀಕಾದ ಕಾಂಗೋ ಮತ್ತು ಉಗಾಂಡದಲ್ಲಿ ಎಬೋಲಾ ಸೋಂಕು ಹೆಚ್ಚಾಗುತ್ತಿದ್ದು.ಈಗಾಗಲೇ 200ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಡುವೆ ಉಗಾಂಡಾ ದೇಶದಿಂದ ರಾಜ್ಯಕ್ಕೆ ಆಗಮಿಸಿದ್ದ ಮಹಿಳೆಯಲ್ಲಿ ಈ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಉಗಾಂಡಾದ, ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ ಎಂಬ 28 ವರ್ಷದ ಮಹಿಳೆಯು ಮೇ.23ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಮಹಿಳೆಯು ಅಲ್ಲಿಯೇ ಇದ್ದ ‘ರಾಯಲ್ ಏಸ್ ಬೂಟಿಕ್’ ಹೋಟೆಲ್‌ನಲ್ಲಿ ತಂಗಿದ್ದರು. ಆದರೆ ಮಹಿಳೆಯಲ್ಲಿ ಎಬೋಲಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ತಕ್ಷಣವೇ ಆಕೆಯನ್ನ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನು ಶಂಕಿತ ಮಹಿಳೆಯ ರಕ್ತ ಸೇರಿದಂತೆ ಇತರ ಮಾದರಿಗಳನ್ನ ಸಂಗ್ರಹಿಸಲಾಗಿದ್ದು. ಈ ಸ್ಯಾಂಪಲ್‌ಗಳನ್ನ ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ವೈದ್ಯಕೀಯ ವರದಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ವರದಿ ಬಂದ ಬಳಿಕವಷ್ಟೇ ಮಹಿಳೆಗೆ ಎಬೋಲಾ ಸೋಂಕು ತಗುಲಿದೆಯೇ ಇಲ್ಲವೇ ಎಂಬುದು ಅಧಿಕೃತವಾಗಿ ದೃಢವಾಗಲಿದೆ. ನಾಳೆಯೊಳಗೆ ವರದಿ ಕೈಸೇರಲಿದೆ ಎಂದು ಆರೋಗ್ಯ ಇಲಾಖೆಯಿಂದ ಟಿವಿ9ಗೆ ಮಾಹಿತಿ ನೀಡಲಾಗಿದೆ. ವರದಿ ಬಳಿಕ ಸೂಕ್ತ ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಲಿದೆ.

By thebigbulletin.com - 27-05-2026


Ads in Post