Search


RSS ಸಭೆ ನಡೆಸಿದಾಗಲೆಲ್ಲ ಅನಾಹುತ ಗ್ಯಾರಂಟಿ; ಗೌರಿ ಲಂಕೇಶ್ ಹತ್ಯೆ ನೆನಪಿಸಿದ ಬಿ.ಕೆ ಹರಿಪ್ರಸಾದ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು RSS ವಿರುದ್ಧದ ವಾಗ್ದಾಳಿ ಮುಂದುವರಿಸಿದ್ದು. ಕೆಪಿಸಿಸಿ ಅಧ್ಯಕ್ಷ ಬಿ. ಕೆ ಹರಿಪ್ರಸಾದ್ ಬೆಳಗಾವಿಯಲ್ಲಿ ನಡೆಯುತ್ತಿರೋ RSS ಪ್ರಚಾಕರ ಸಭೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. RSSನವರು ಸಭೆ ನಡೆಸಿದಾಗಲೆಲ್ಲ ಏನಾದರು ಅನಾಹುತ ಆಗಿದೆ. ಹಿಂದೆ ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ನಡೆದಿದ್ದವು ಎಂದು ಹೇಳಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ನೋಂದಣಿಗೆ ಪಟ್ಟು ಹಿಡಿದಿದ್ದರೆ, ಬೆಳಗಾವಿಯಲ್ಲಿ ಆರ್ ಎಸ್ಎಸ್ ವಾರ್ಷಿಕ ಸಭೆ ನಡೆಯುತ್ತಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಟೀಕಾ ಪ್ರಹಾರ ನಡೆಸಿದ್ದಾರೆ. ಆರ್ ಎಸ್ಎಸ್ ನವರು ಬೆಳಗಾವಿಯಲ್ಲಿ ಏಕೆ ಸಭೆ ನಡೆಸುತ್ತಿದ್ದಾರೆ ಅಂತ ಗೊತ್ತಿಲ್ಲ. ಪ್ರತಿ ಬಾರಿ RSS ಸಭೆ ಮಾಡಿದ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ. ಈ ಹಿಂದೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅಂತಹವರ ಹತ್ಯೆ ಆಗಿತ್ತು. ಈ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ಹೇಳಿಕೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಹರಿಪ್ರಸಾದ್ "ದೇಣಿಗೆ ಕಳುವು ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿದದರು. ಜೊತೆಗೆ ಟ್ರಸ್ಟ್ ಸ್ಥಾಪನೆ, ಶಿಲಾನ್ಯಾಸ ಮತ್ತು ಪ್ರಾಣ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ಪ್ರಧಾನಿಗಳು ಹೊರಬೇಕು ಎಂದಿದ್ದಾರೆ.ಮಂದಿರದಲ್ಲಿದ್ದ 200 ಕೋಟಿ ರೂ ಲೂಟಿ ಮತ್ತು ಅಮೂಲ್ಯ ರಾಮಾಯಣ ಪುಸ್ತಕ ಕಳ್ಳತನವಾಗಿರುವ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

By Ravikumar - 10-07-2026


Ads in Post