Search


ʻಯಾವ್‌ ಟ್ರಬಲ್‌ ಶೂಟರ್‌ ರೀʼ; ಡಿಕೆ ಬಗ್ಗೆ ವ್ಯಂಗ್ಯವಾಡಿದ ರಾಜಣ್ಣ..!

ತುಮಕೂರು: ಸಚಿವ ಸ್ಥಾನಕ್ಕೆ ರಾಮಲಿಂಗ ರೆಡ್ಡಿ ರಾಜೀನಾಮೆ ಕುರಿತು ಮಾಜಿ ಸಚಿವ ಕೆ.ಎನ್‌ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಡಿ.ಕೆ ಶಿವಕುಮಾರ್‌ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್‌ ಅವರಿಗೆ ಇರುವ ಟ್ರಬಲ್‌ ಶೂಟರ್‌ ಎಂಬ ಬಿರುದಿಗೂ ರಾಜಣ್ಣ ವ್ಯಂಗ್ಯವಾಡಿದ್ದು, ಖಾತೆ ಹಂಚಿಕೆ ಯಾರಪ್ಪನ್ನ ಸ್ವತ್ತು ಅಲ್ಲ ಎಂದು ಡಿಕೆ ವಿರುದ್ದ ಹೇಳಿಕೆ ನೀಡಿದ್ದಾರೆ.

ಟ್ರಬಲ್‌ ಶೂಟರ್‌ ಅಸ್ಸಾಂನಲ್ಲಿ ಸೋತಿದ್ಯಾಕೆ..!

ಮಧುಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಮಲಿಂಗಾ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಹೌದಾ.. ಹೊಸ ಸುದ್ದಿ ಹೇಳ್ತಿರಾ ಅಂದಕೊಂಡರೆ ಹಳೆ ಸುದ್ದಿ ಹೇಳ್ತಿರಲ್ಲ. ಇದು ಯಾವುದೇ ಪತನ ಅಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ. ರಾಮಲಿಂಗಾ ರೆಡ್ಡಿಯವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಕೆ ಎನ್‌ ರಾಜಣ್ಣ ಸ್ಪಷ್ಟಪಡಿಸಿದರು.

ಟ್ರಬಲ್‌ ಶೂಟರ್‌ ಅಸ್ಸಾಂನಲ್ಲಿ ಸೋತಿದ್ಯಾಕೆ..!

"ಯಾವ್ ಟ್ರಬಲ್ ಶೂಟರ್ ರೀ… ನೀವೇ ಟ್ರಬಲ್ ಶೂಟರ್ ಮಾಡಿರೋದು. ಹಾಗಿದ್ದ ಮೇಲೆ ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು. ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವ ವಿಚಾರ ಹಾಗೂ ಖಾತೆ ಹಂಚಿಕೆ ಕುರಿತು ಕೆ.ಎನ್. ರಾಜಣ್ಣ ಅವರು ಪ್ರತಿಕ್ರಿಯಿಸಿದರು.

ಇದೇ ವೇಳೆ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವನ್ನೂ ಪ್ರಸ್ತಾಪಿಸಿದ ರಾಜಣ್ಣ, ಈಶ್ವರ ಖಂಡ್ರೆ ಅವರಿಗೆ ಅದೇ ಖಾತೆ ಯಾಕೆ ಕೊಡಲಿಲ್ಲ? ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಬೇಕಿತ್ತು. ಯಾಕೆ ಕಂದಾಯ ಖಾತೆ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು. ಯಾರ ಆಸ್ತಿ ಯಾರಪ್ಪನ ಸ್ವತ್ತು ಅಲ್ಲ, ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಅವಕಾಶಗಳು ಸಿಗುತ್ತವೆ. ಅಂತಹ ಅವಕಾಶಗಳನ್ನು ಬಳಸಿಕೊಂಡು ಜನಪರ ಕೆಲಸ ಮಾಡಬೇಕು ಎಂದು ಹೇಳಿದರು. 

By Ravikumar - 05-06-2026


Ads in Post