Search


ಕಾಂಗ್ರೆಸ್‌ ವಿಷವರ್ತುಲದಿಂದ ದೇಶವನ್ನ ಮುಕ್ತಗೊಳಿಸಿದ್ದೆ ನಮ್ಮ ದೊಡ್ಡ ಸಾಧನೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: NDA ಮೈತ್ರಿಕೂಟವೂ ಯಶಸ್ವಿಯಾಗಿ 12 ವರ್ಷ ಅಧಿಕಾರ ಪೂರೈಸಿದ ಹಿನ್ನಲೆಯಲ್ಲಿ ದೆಹಲಿಯ ಭಾರತ ಮಂಟಪಂನಲ್ಲಿ ಸಭೆ ನಡೆಸಿದ್ದು. ಈ  ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನ ದಶಕಗಳ ಕಾಲದ ದುರಾಡಳಿತವು ಭಾರತವನ್ನು ತೀವ್ರ ಹತಾಶೆ ಮತ್ತು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿತ್ತು. ದೇಶವನ್ನು ಕೋಟ್ಯಂತರ ರೂಪಾಯಿಗಳ ಹಗರಣಗಳಲ್ಲಿ ಮುಳುಗಿಸಿತ್ತು. ಆದರೆ, 2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಹಣೆಬರಹವೇ ಬದಲಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ದೇಶ ಮುಕ್ತಗೊಳಿಸಿದ್ದೇವೆ..!

NDA ಮೈತ್ರಿಕೂಟದ ಸದಸ್ಯರನ್ನ ಉದ್ದೇಶಿಸಿ ಮಾತನಾಡಿದ ಮೋದಿ ʻನಮ್ಮ ಸರ್ಕಾರದ 12 ವರ್ಷಗಳ ಆಡಳಿತದ ಪ್ರಮುಖ ಯಶಸ್ಸೆಂದರೆ, ದೇಶವನ್ನು ಕಾಂಗ್ರೆಸ್‌ನ ವಿಷವರ್ತುಲದಿಂದ ಮುಕ್ತಗೊಳಿಸಿರುವುದು. ಭಾರತದಲ್ಲಿ ಅಭಿವೃದ್ಧಿ ಎಂಬುದು ಅತ್ಯಂತ ನಿಧಾನವಾಗಿ ಮಾತ್ರ ಸಾಧ್ಯ. ಇಲ್ಲಿ ವೇಗದ ಅಭಿವೃದ್ಧಿ ಅಸಾಧ್ಯ ಎಂದೇ ದೇಶದ ಜನ ಭಾವಿಸುವಂತೆ ಮಾಡಲಾಗಿತ್ತು. ಈ ನಿಧಾನಗತಿಯ ಬೆಳವಣಿಗೆಗೆ ಅಂದಿನ ಸರ್ಕಾರ ʻಹಿಂದೂ ಗ್ರೋತ್‌ ರೇಟ್‌ʼ ಎಂದು ಹೆಸರಿಟ್ಟು, ದೇಶದ ಅಭಿವೃದ್ದಿಗೆ ಬಹುಸಂಖ್ಯಾತ ಹಿಂದೂಗಳು ಹೊಣೆ ಎಂದು ಕಳಂಕ ಹೊರಿಸಿ ತಮ್ಮ ಜವಬ್ದಾರಿಯಿಂದ ನುಣುಚಿಕೊಂಡಿದ್ದರು.

ಹಳೆಯ ‘ಕಾಂಗ್ರೆಸ್ ಗ್ರೋತ್ ರೇಟ್’ ಮತ್ತು ಸಮಕಾಲೀನ ‘ಎನ್‌ಡಿಎ ಗ್ರೋತ್ ರೇಟ್’ ನಡುವಿನ ಸ್ಪಷ್ಟವಾದ, ಅಂಕಿ-ಅಂಶಗಳ ಆಧಾರಿತ ವ್ಯತ್ಯಾಸವನ್ನು ಇಂದು ಜಾಗತಿಕ ಸಮುದಾಯ ಮತ್ತು ದೇಶದ ಮತದಾರರು ಕಣ್ಣಾರೆ ಕಂಡಿದ್ದಾರೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಹಿಂದಿನ ಹಣಕಾಸು ನೀತಿಗಳು ದೇಶದ ಅತ್ಯಂತ ನಿಧಾನಗತಿಯ ಪ್ರಗತಿಯನ್ನೇ ರಾಷ್ಟ್ರೀಯ ಮಾನದಂಡ ಎಂದು ಒಪ್ಪಿಕೊಳ್ಳುವಂತೆ ಜನರನ್ನು ಪ್ರೇರೇಪಿಸಿದ್ದವು. 

ಆದರೆ ಪ್ರಸ್ತುತ ಆಧುನಿಕ ಯುಗದಲ್ಲಿ ಬೃಹತ್ ಮೂಲಸೌಕರ್ಯಗಳ ವಿಸ್ತರಣೆ, ಡಿಜಿಟಲ್ ರೂಪಾಂತರ ಮತ್ತು ಬಂಡವಾಳ ವೆಚ್ಚಕ್ಕೆ ಗರಿಷ್ಠ ಆದ್ಯತೆ ನೀಡಲಾಗಿದೆ. ಈ ಕಾರ್ಯಾಚರಣೆಯ ಬದಲಾವಣೆಯು ಭಾರತವನ್ನು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದನ್ನಾಗಿ ನಿರಂತರವಾಗಿ ಮುಂಚೂಣಿಯಲ್ಲಿಟ್ಟಿದೆ, ಇದು ಸ್ವಾತಂತ್ರ್ಯೋತ್ತರ ಯುಗದ ಹಳೆಯ ಆರ್ಥಿಕ ಗ್ರಹಿಕೆಗಳಿಗೆ ನೇರ ಸವಾಲಾಗಿದೆ ಎಂದರು.

By Ravikumar - 11-06-2026


Ads in Post