Search


ಸ್ನೇಹಿತನ ಮೇಲೆ ಹಲ್ಲೆ ಪ್ರಕರಣ; ವಿಜಯ್‌ ಪುತ್ರ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ಕಾರು ಓವರ್‌ ಟೇಕ್‌ ವಿಚಾರಕ್ಕೆ ಸ್ನೇಹಿತನ ಕಿಡ್ನಾಪ್‌ ಮಾಡಿ, ಹಲ್ಲೆ ಮಾಡಿರುವ ಆರೋಪದ ಮೇಲೆ ನಟ ದುನಿಯಾ ವಿಜಯ್‌ ಪುತ್ರ ಸಾಮ್ರಾಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಸಂಬಂಧ ವಿಚಾರಣೆ ನಡೆಸಿದ ಎಸಿಜೆಎಂ 6ನೇ ನ್ಯಾಯಾಲಯ ಸಾಮ್ರಾಟ್ ವಿಜಯ್ ಸೇರಿದಂತೆ ಎಲ್ಲಾ ಆರೋಪಿಗಳಿಗೂ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಾರು ಓವರ್‌ ಟೇಕ್‌ ವಿಚಾರಕ್ಕೆ ಸಾಮ್ರಾಟ್‌ ವಿಜಯ್‌ ತನ್ನ ಸ್ನೇಹಿತ ಮನೀಷ್‌ ಗೌಡ ಎಂಬಾತನನ್ನ ಅಪಹರಿಸಿ ಹಲ್ಲೆ ಮಾಡಿದ್ದ ಎಂಬ ಆರೋಪವಿದ್ದು. ಇದೀಗ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಾಮ್ರಾಟ್ ವಿಜಯ್ ಸ್ನೇಹಿತ ಮನೀಷ್ ಗೌಡ ವಿರುದ್ಧ ಪ್ರತಿದೂರು ದಾಖಲಿಸಿದ್ದು, ನನ್ನ ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ದೂರಿನನ್ವಯ ಮನೀಷ್ ಗೌಡ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಘಟನೆ ನಡೆದಿರುವ ಸ್ಥಳ ಆರ್‌ಆರ್ ನಗರ (RR Nagar) ಠಾಣಾ ವ್ಯಾಪ್ತಿಯಾಗಿರುವ ಕಾರಣದಿಂದ ಸದ್ಯ ಸಾಮ್ರಾಟ್ ವಿಜಯ್ ವಿರುದ್ಧ ಕೆಂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದೀಗ ಆರ್‌ಆರ್ ನಗರ ಠಾಣೆಗೆ ವರ್ಗಾವಣೆಯಾಗಿದೆ

By Ravikumar - 03-09-2026


Ads in Post