Search


“ಇದು ನ್ಯಾಯಸಮ್ಮತವಲ್ಲ ಬಿಗ್ ಬಾಸ್” ತಾಂಡವ್ ಎಲಿಮಿನೇಷನ್‌ಗೆ ಕಣ್ಣೀರಿಟ್ಟ ಗಗನ್ ಚಿನ್ನಪ್ಪ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದ್ದು, ತಾಂಡವ್ ರಾಮ್ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಈ ಬಾರಿ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ತಾಂಡವ್ ಅವರ ವೋಟ್‌ಗಳನ್ನು ಕಿತ್ತುಕೊಂಡಿದ್ದರಿಂದಲೇ ಅವರು ಎಲಿಮಿನೇಟ್ ಆಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇದರಿಂದ ತಾಂಡವ್‌ಗೆ ಅನ್ಯಾಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಾಸ್ಕ್‌ನಲ್ಲಿ ಗೆದ್ದ ಕಿರಣ್, ಆಸಿಯಾ, ಧನುಷ್ ಹಾಗೂ ಕಾವ್ಯಾ ಅವರಿಗೆ ವಿಶೇಷ ಅಧಿಕಾರ ನೀಡಲಾಗಿತ್ತು. ನಾಮಿನೇಷನ್‌ನಲ್ಲಿದ್ದ ಸ್ಪರ್ಧಿಗಳ ಪೈಕಿ ತಲಾ ಒಬ್ಬರ ಶೇ.50ರಷ್ಟು ವೋಟ್‌ಗಳನ್ನು ಕಿತ್ತುಕೊಳ್ಳುವ ಅವಕಾಶ ನೀಡಲಾಗಿತ್ತು. ಅದರಂತೆ ಕಿರಣ್ ಅವರು ಸೌಂದರ್ಯಾ, ಕಾವ್ಯಾ ಅವರು ಜಗದೀಶ್, ಆಸಿಯಾ ಅವರು ಲಿಖಿತ್ ಹಾಗೂ ಧನುಷ್ ಅವರು ತಾಂಡವ್ ರಾಮ್ ಅವರ ವೋಟ್‌ಗಳನ್ನು ಕಸಿದುಕೊಂಡರು.

ನಂತರ ಈ ನಾಲ್ವರು ಸ್ಪರ್ಧಿಗಳಲ್ಲೇ ಎಲಿಮಿನೇಷನ್ ನಡೆಯಲಿದೆ ಎಂದು ಬಿಗ್ ಬಾಸ್ ಘೋಷಿಸಿದರು. ಮೊದಲು ಕಿರಣ್ ಹಾಗೂ ಜಗದೀಶ್ ಸೇಫ್ ಆದರು. ಕೊನೆಯಲ್ಲಿ ಸೌಂದರ್ಯಾ ಮತ್ತು ತಾಂಡವ್ ರಾಮ್ ನಡುವೆ ಎಲಿಮಿನೇಷನ್ ನಡೆದಿದ್ದು, ತಾಂಡವ್ ಮನೆಯಿಂದ ಹೊರಬರಬೇಕಾಯಿತು. ಆಪ್ತ ಸ್ನೇಹಿತ ತಾಂಡವ್ ಹೊರಹೋಗುತ್ತಿದ್ದಂತೆ ಗಗನ್ ಚಿನ್ನಪ್ಪ ಭಾವುಕರಾಗಿ ಕಣ್ಣೀರಿಟ್ಟರು.

“ಇದು ನ್ಯಾಯಸಮ್ಮತವಲ್ಲ ಬಿಗ್ ಬಾಸ್” ಎಂದು ಗಗನ್ ಕಣ್ಣೀರಿನೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತಾಂಡವ್ ಮತ್ತು ಗಗನ್ ಬಿಗ್ ಬಾಸ್ ಮನೆಯಲ್ಲಿ ಆಪ್ತ ಸ್ನೇಹಿತರಾಗಿದ್ದರು. ಇದೀಗ ತಾಂಡವ್ ಅವರ ಎಲಿಮಿನೇಷನ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಅವರು ಮತ್ತೆ ಬಿಗ್ ಬಾಸ್ ಮನೆಗೆ ಕಂಬ್ಯಾಕ್ ಮಾಡಲಿದ್ದಾರೆಯೇ ಎಂಬ ಕುತೂಹಲವೂ ಮೂಡಿದೆ.

By Ravikumar - 25-09-2026


Ads in Post