ಚಾಮರಾಜನಗರ: ಕಳೆದ ಶನಿವಾರ ಹನೂರು ಬಳಿಯ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಸಿಬ್ಬಂದಿ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ್ದರು, ಈ ಕುರಿತಾಗಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದ ಸ್ಥಳೀಯರು, ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದಿರು, ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯನ್ನ ಕ್ಯಾಂಪ್ ಸ್ಪೋಟ, ಕಾಡಿಗೆ ಬೆಂಕಿ ಹಚ್ಚುವುದು ಸೇರಿದಂತೆ ಕೆಲವು ಅನುಮಾನಕರ ಘಟನೆಗಳು ಜರುಗಿದ್ದವು, ಇದರ ಬೆನ್ನಲ್ಲೆ ಧರಣಿ ನಿರತರಿಗೆ ಯುವಕನೊಬ್ಬ ಪ್ರಚೋದನೆ ನೀಡುತ್ತಿರುವ ವಿಡಿಯೋ ಹರಿದಾಡುತ್ತಿದ್ದು, ಈತನನ್ನ ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿರುವ ಗಂಗನದೊಡ್ಡಿ ಗೋವಿಂದ ಎಂದು ಗುರುತಿಸಲಾಗಿದೆ.
ಮರಿ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿರುವ ಗಂಗನದೊಡ್ಡಿಯ ಗೋವಿಂದ. ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಹಲವು ಅಪರಾಧ ಪ್ರಕರಣ ಹೊಂದಿರುವ ಈತನೇ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ. 2025ರ ಅ.2ರಂದು ಹನೂರು ತಾಲೂಕಿನ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ದೈತ್ಯಕಾರದ ಹುಲಿಯನ್ನು ಕೊಂದು ತುಂಡು ಮಾಡಿ ಅಮಾನವೀಯವಾಗಿ ಸಾಯಿಸಿದ್ದ ಪ್ರಕರಣದಲ್ಲಿ ಗೋವಿಂದ ಪ್ರಮುಖ ಆರೋಪಿಯಾಗಿದ್ದ ಈತ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾನೆ ಎನ್ನಲಾಗಿದೆ. ಶೂಟೌಟ್ ಪ್ರಕರಣ ನಡೆದ ದಿನ ಹನೂರಿನಲ್ಲಿ ನಡೆದ ಧರಣಿನಿರತರಿಗೆ ನುಗ್ಗೋಣ, ಒಳಕ್ಕೇ ಹೋಗೋಣ ಎಂದು ಪ್ರಚೋದಿಸಿರುವ ವಿಡಿಯೋ ವೈರಲ್ ಆಗಿದೆ.
ಇನ್ನು ಶೂಟೌಟ್ ನಡೆದ ಬಳಿಕ ಕಳ್ಳಬೇಟೆ ತಡೆ ಶಿಬಿರ, ವಸತಿ ಗೃಹಗಳ ಮೇಲೆ ದಾಳಿ ನಡೆದಿರುವುದು ಅರಣ್ಯ ಸಿಬ್ಬಂದಿಗಳಲ್ಲಿ ತೀವ್ರ ಭಯದ ವಾತಾವರಣ ಸೃಷ್ಟಿಸಿರುವ ಜೊತೆಗೆ ಪರಿಸರವಾದಿಗಳ ಆಕ್ರೋಶಕ್ಕೂ ಕಾರಣವಾಗಿದೆ. ದಾಳಿಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದ್ದು, ಸರ್ಕಾರಿ ಆಸ್ತಿ ನಷ್ಟ ಮಾಡಿದವರ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಅರಣ್ಯಕ್ಕೆ ಬೆಂಕಿ ಇಟ್ಟ ಇವರು ಅಮಾಯಕರಾ? ಎಂದು ಪರಿಸರವಾದಿಗಳು ಕೂಡ ಪ್ರಶ್ನಿಸಿದ್ದಾರೆ.