Search


ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದ ಊರ್ವಶಿ ಚಿತ್ರಮಂದಿರ ಇನ್ನು ನೆನಪು ಮಾತ್ರ

ವರನಟ ಡಾ. ರಾಜ್‌ಕುಮಾರ್ ಉದ್ಘಾಟಿಸಿದ್ದ ಬೆಂಗಳೂರಿನ ಪ್ರಖ್ಯಾತ ಊರ್ವಶಿ ಚಿತ್ರಮಂದಿರ ಇದೀಗ ನೆಲಸಮವಾಗಲಿದೆ. 1970ರಲ್ಲಿ ಕೆ.ಸಿ. ಗೌಡರ್ ಅವರು ನಿರ್ಮಿಸಿದ್ದ ಈ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರ, ಭೋಗ್ಯದ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಹಾಗೂ ಕಾನೂನು ಪ್ರಕ್ರಿಯೆಗಳ ಬಳಿಕ ತೆರವುಗೊಳಿಸಲು ನಿರ್ಧರಿಸಲಾಗಿದೆ. ಚಿತ್ರಮಂದಿರ ನಿರ್ಮಾಣಕ್ಕೂ ಮುನ್ನ ಈ ಜಾಗದಲ್ಲಿ ಕಲ್ಯಾಣಿ ಇದ್ದು, ಬಳಿಕ ಅದನ್ನು ಮುಚ್ಚಿ ಚಿತ್ರಮಂದಿರ ನಿರ್ಮಿಸಲಾಗಿತ್ತು. ಸುಮಾರು 35 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದು ಚಿತ್ರಮಂದಿರ ನಡೆಸಲಾಗುತ್ತಿತ್ತು. ಇದೀಗ ಭೋಗ್ಯದ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಹಳೆಯ ಚಿತ್ರಮಂದಿರವನ್ನು ನೆಲಸಮ ಮಾಡಲು ಸಿದ್ಧತೆ ನಡೆದಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.

By Ravikumar - 25-08-2026


Ads in Post