Search


ಚುನಾವಣ ಆಯೋಗ ಕತ್ತೆ ಕಾಯ್ತಿದೆಯಾ; SIR ಆರೋಪದ ಬಗ್ಗೆ ಪ್ರಿಯಾಂಕ್‌ ಖರ್ಗೆ ಗರಂ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ತೀವ್ರ ವಿಶೇಷ ಮತ ಪರಿಷ್ಕರಣೆ (SIR) ನಡೆಯುತ್ತಿದ್ದು, ಇದಕ್ಕಾಗಿ ನೇಮಕವಾಗಿರುವ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡದೆ ಮಸೀದಿ, ಸಮುದಾಯ ಭವನಗಳಲ್ಲಿ ಈ ಪ್ರಕ್ರಿಯೆ ನಡೆಸುತ್ತಿದ್ದಾರೆ. ವಿಪಕ್ಷಗಳು ಕಾಂಗ್ರೆಸ್‌ ಅಕ್ರಮವಾಗಿ ಈ ರೀತಿ ನಡೆಸುತ್ತಿದೆ ಎಂದು ಆರೋಪಿಸಿದ್ದು. ಇದರ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಚುನಾವಣಾ ಆಯೋಗ (Election Commission) ಕತ್ತೆ ಕಾಯ್ತಾ ಇದೆಯಾ? ಅವರದ್ದೇ ತಾನೆ ಜವಾಬ್ದಾರಿ ಎಂದು ಎಸ್‌ಐಆರ್ ವಿಚಾರವಾಗಿ (Priyank Kharge) ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಎಸ್‌ಐಆರ್ ಲೋಪ ಎಂಬ ವಿಪಕ್ಷಗಳ ಆರೋಪದ ಕುರಿತು ಮಾತನಾಡಿ, ʻಏನೇ ಮಾಡಿದ್ರು ಕಾನೂನು ಮೀರಿ ಯಾರೂ ಏನು ಮಾಡೋಕೆ ಆಗೊಲ್ಲ. ಎಲೆಕ್ಷನ್ ಕಮಿಷನ್ ದು ವೀಕ್ಷಕರು ಇರ್ತಾರೆ. ಅಂತಹ ಲೋಪ ಆಗಿದ್ದರೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬಹುದು. ರಾಜ್ಯ ಸರ್ಕಾರದವರು ಯಾರಿಗೂ ಒತ್ತಾಯ ಮಾಡಿ SIR ಮಾಡಿಸುತ್ತಿಲ್ಲ. ಸಮುದಾಯ ಭವನ, ಕಚೇರಿಯಲ್ಲಿ ಮಾಡಿ ಅಂತ ನಾವು ಒತ್ತಾಯ ಮಾಡಿಲ್ಲ. 

ಎಸ್‌ಐಆರ್‌ ಬಗ್ಗೆ ಜನರಲ್ಲಿ ಆತಂಕ ಇರೋದು ನಿಜ. ಅದಕ್ಕೆ ನಾವು 12 ಪ್ರಶ್ನೆ ಕೇಳಿದ್ದೇವೆ, ಉತ್ತರ ಕೊಟ್ಟಿಲ್ಲ ಚುನಾವಣೆ ಆಯೋಗ. ಇದಕ್ಕೆ ಹೊಣೆ ಯಾರು? ಈ ಪ್ರಕ್ರಿಯೆ ಬಗ್ಗೆ ಜನರಿಗೆ ಆತಂಕ, ಸಂಶಯ ಇದೆ. ಅನುಮಾನ ಇದೆ ಅಂದರೆ ಜವಾಬ್ದಾರಿ ರಾಜ್ಯ ಸರ್ಕಾರ ಅಲ್ಲ ಚುನಾವಣೆ ಅಯೋಗ. ರೂಲ್ಸ್ ಮಾಡೋದು ನಾವಲ್ಲ. ಚುನಾವಣೆ ಆಯೋಗ ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. 

BLOಗಳು ನಮ್ಮ ಅಧೀನದಲ್ಲಿ ಬಂದರೂ, ಅವರಿಗೆ ನಿರ್ದೇಶನ ಕೊಡೋದು ಚುನಾವಣೆ ಆಯೋಗ. SIR ಸರಿಯಾಗಿ ಆಗ್ತಿಲ್ಲ ಅಂದರೆ ಚುನಾವಣೆ ಆಯೋಗ ಕ್ರಮ ತಗೊಬೇಕು. ಆದರೆ ಈಗ ಆತಂಕ ಇರೋದು ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರಿಗೆ. ಬಿಹಾರ, ಬಂಗಾಳದಲ್ಲಿ ರಾಜ್ಯ ಸರ್ಕಾರ ಏನ್ ಹೇಳಿದೆ? SIR ಪಟ್ಟಿ ಇದ್ದರೆ ಮಾತ್ರ ರಾಜ್ಯ, ಕೇಂದ್ರದ ಯೋಜನೆ ಸಿಗುತ್ತದೆ ಅಂತ ಹೇಳಿದ್ದಾರೆ. ಇದನ್ನ ನಿವಾರಣೆ ಮಾಡಬೇಕಿರೋದು ಚುನಾವಣೆ ಆಯೋಗ. ನಾವು ಟೈಂ ಕೇಳಿದ್ರೂ ಆಯೋಗ ಟೈಂ ಕೊಡ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

By Ravikumar - 04-07-2026


Ads in Post