Search


‘ನಾನು ತಪ್ಪು ಮಾಡಿಬಿಟ್ಟೆ ಸರ್. ನೀವು ನನಗೆ ತುಂಬಾ ಅವಕಾಶ ಕೊಟ್ಟಿದ್ರಿ; ಮಂಜ ಕಣ್ಣೀರು

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಅತಿಯಾಗಿ ಮಾತನಾಡಿ ಎಡವಟ್ಟು ಮಾಡಿಕೊಂಡ ಮಂಜ, ಅಶ್ಲೀಲ ಪದ ಬಳಕೆ ಮಾಡಿದ ಕಾರಣಕ್ಕೆ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಕಿಚ್ಚ ಸುದೀಪ್ ಎದುರು ನಿಂತು ಮಂಜ ಕಣ್ಣೀರು ಹಾಕಿದ್ದಾರೆ. ‘ನಾನು ತಪ್ಪು ಮಾಡಿಬಿಟ್ಟೆ ಸರ್. ನೀವು ನನಗೆ ತುಂಬಾ ಅವಕಾಶ ಕೊಟ್ಟಿದ್ರಿ. ನಿಮ್ಮ ಕಣ್ಣಲ್ಲೂ ನಾನು ನೀರು ಹಾಕಿಸಿದೆ. ನೀವು ನನ್ನ ಕನಸು, ನನ್ನ ಕನಸಿನ ಕಣ್ಣಲ್ಲಿ ನೀರು ಹಾಕಿಸಿಬಿಟ್ಟೆ ನಾನು’ ಎಂದು ಭಾವುಕರಾಗಿ ತಮ್ಮ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

ಮಂಜ ಅವರ ಮಾತುಗಳನ್ನು ಕೇಳಿದ ಕಿಚ್ಚ ಸುದೀಪ್, ಅವರಿಗೆ ಧೈರ್ಯ ತುಂಬಿದ್ದಾರೆ. ‘ಆಗಿರುವ ತಪ್ಪನ್ನು ತಿದ್ದಿಕೊಳ್ಳಿ. ಪ್ರತಿಭಾವಂತರು ನೀವು’ ಎಂದು ಸಮಾಧಾನಪಡಿಸಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮಂಜ ಅವರ ಭಾವುಕ ಕ್ಷಣಗಳು ವೀಕ್ಷಕರ ಗಮನ ಸೆಳೆದಿವೆ. ಅಕ್ಟೋಬರ್ 11ರ ಸಂಚಿಕೆಯ ಪ್ರೋಮೋ ಇದೀಗ ಕುತೂಹಲ ಮೂಡಿಸಿದ್ದು, ಮಂಜ ಅವರ ಎಲಿಮಿನೇಷನ್ ಮತ್ತು ಸುದೀಪ್ ಅವರ ಪ್ರತಿಕ್ರಿಯೆ ಚರ್ಚೆಗೆ ಗ್ರಾಸವಾಗಿದೆ.

By Ravikumar - 11-10-2026


Ads in Post