ಹೆಸರು ಆಕಾಶ್ ಊರು ಸಾಗರ. ಗುರುಗಳೆ ನನಗೆ ನನ್ನ ಪ್ರೇಯಸಿಯಿಂದ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಯಾಕಾದ್ರೂ ಆಕೆಯನ್ನ ನಾನು ಪ್ರೀತಿಸಿದೆ ಅನ್ನೋ ನೋವು ನನ್ನನ್ನ ಕಾಡುತ್ತಿದೆ. ಸದಾ ಆಕೆಯ ಅನುಮಾನ ನನಗೆ ಸಾಕಾಗಿ ಹೋಗಿದೆ.
ಇತ್ತೀಚೇಗೆ ಕಾಲೇಜಿಗೆ ಹೋಗೋದನ್ನ ಬಿಟ್ಟಿದ್ದೇನೆ. ಅದರಲ್ಲೂ ಬೆಳಗ್ಗೆ ಆಕೆಗೂ ಮುನ್ನ ನಾನು ಕಾಲೇಜಿನಲ್ಲಿ ಇರಬೇಕು, ಆಕೆ ಯಾವ ರೀತಿ ಸಂದೇಶ ನೀಡುತ್ತಾಳೋ ಆಹಾಗೆ ನಡೆದುಕೊಳ್ಳಬೇಕು, ಕಾಲೇಜಿನಲ್ಲಿ ಆಖೆಯ ಸಮೀಪವೇ ಕುಳಿತುಕೊಳ್ಳಬೇಕು, ಆಕೆ ಕರೆದಾಗ ನಮ್ಮ ಕಾಲೇಜಿನ ಎದುರಿರುವ ಬೆಟ್ಟಕ್ಕೆ ಹೋಗಿ ಕುಳಿತುಕೊಂಡು ಹರಟೆ ಹೊಡೆಯಬೇಕು. ಕಾಲೇಜಿನಲ್ಲಿ ಯಾರನ್ನಾದ್ರೂ ಬೇರೆ ಯುವತಿಯರನ್ನ ಮಾತನಾಡಿಸಿದ್ರೆ ಅಂದು ನನ್ನ ಸ್ಥಿತಿ ದೇವಗೇ ಪ್ರೀತಿ. ಕಾಲೇಜಿನಲ್ಲಿ ಯಾವುದೇ ಕ್ಲಾಸ್ ನಡೆಯದಿದ್ದರೆ ಆಕೆಯ ಜೊತೆ ಟೆರಸ್ ನಲ್ಲಿ ಹೋಗಿ ಕುಳಿತುಕೊಳ್ಳಬೇಕು, ಕಾಲೇಜು ಮುಗಿದ ಬಳಿಕ ಆಕೆಯ ಜೊತೆಯಲ್ಲೇ ಮನೆಗೆ ಹೋಗಬೇಕು ಬೇರೆ ಯಾರ ಜೊತೆಯೂ ಹೋಗಬಾರದು, ಸ್ನೇಹಿತರ ಜೊತೆ ಸೇರುವಂತಿಲ್ಲ. ಹೀಗೆಲ್ಲ ಮಾಡುತ್ತಾಳೆ. ಮೊದಲೆ ನಮ್ಮೊಬ್ಬರ ಪ್ರೀತಿ ಬಗ್ಗೆ ಅವರ ಮನೆಯಲ್ಲಿ ಯಾರಿಗೂ ತಿಳಿದಿಲ್ಲ. ಎಲ್ಲಿ ನಮ್ಮಿಬ್ಬರ ಪ್ರೀತಿ ತಿಳಿದು ನನಗೆ ತೊಂದರೆ ಮಾಡುತ್ತಾಳೋ ಅನ್ನೋ ಭಯ ಕಾಡುತ್ತಿದೆ. ಹೇಗೆ ಈಕೆಗೆ ಬುದ್ಧಿವಾದ ಹೇಳೋದು ಅನ್ನೋದು ತಿಳಿಯುತ್ತಿಲ್ಲ ಗುರುಗಳೆ..
ಸೀಕ್ರೆಟ್ ಗುರು
ನೋಡಿ ಆಕಾಶ್ ಇದು ಅತೀ ಪ್ರೀತಿಯಿಂದ ಹೀಗಾಗುತ್ತಿದೆ ಎನಿಸುತ್ತಿದೆ. ಯಾಕಂದ್ರೆ ಇದು ಆಕೆಯ ಸಮಸ್ಯೆ ಅಲ್ಲ. ಆಕೆಗೆ ಮನೆಯಲ್ಲಿ ಯಾರೂ ಪ್ರೀತಿ ಮಾಡದಿದ್ದಾಗ, ಆ ಪ್ರೀತಿಯನ್ನ ನಿಮ್ಮಿಂದ ಪಡೆದುಕೊಂಡಿರುವುದರಿಂದ ಹೀಗೆಲ್ಲ ಮಾಡುತ್ತಿರಬಹುದು. ಯಾಕೆಂದ್ರೆ ಕೆಲ ಪೋಷಕರು ಮಕ್ಕಳಿಗೆ ತಕ್ಕುದಾದ ಪ್ರೀತಿಯನ್ನ ನೀಡೋದೆ ಇಲ್ಲ ಹಾಗಾಗಿ ಯಾರನ್ನ ಪ್ರೀತಿಸುತ್ತಾರೋ ಅವರು ನಿತ್ಯ ನನ್ನ ಜೊತೆಯೇ ಇರಬೇಕು ಅನ್ನೋ ಹಂಬಲ ಕಾಡುತ್ತೆ. ಎಲ್ಲಿ ನನಗೆ ಬಪ್ರೀತಿ ಕೊಡುವವರು ದೂರ ವಾಗುತ್ತಾರೋ ಅನ್ನೋ ಭಯ ಅವರನ್ನ ಕಾಡಿ ಹೀಗೆ ಮಾಡುತ್ತಿರಬಹುದು. ಆಕಾಶದ ಪ್ರೀತಿ ಅನ್ನೋ ಸೆಳೆತನೇ ಹಾಗೇ ಒಮ್ಮೆ ಬ್ಬರು ಪ್ರೀತಿ ಮಾಡಲು ಶುರುಮಾಡಿದ್ರು ಅಂದ್ರೆ ಅವರ ಭಾವನೆಗಳಿಗೆ, ಅವರ ಇಷ್ಟಕಷ್ಟಗಳಿಗೆ ಸಮಯವೇ ಇರಲ್ಲ ಅನ್ನಿಸುತ್ತೆ. ಯಾವಾಗಲು ಜೋಡಿ ಹಕ್ಕಿಯಂತೆ ಅವರದ್ದೆ ಆದ ಪ್ರಪಂಚದಲ್ಲಿ ತೇಲುತ್ತಿರುತ್ತಾರೆ ಪ್ರೇಮಿಗಳು. ಇಲ್ಲಿ ಆಗಿರೋದು ನಿಮಗೆ ಹಾಗೇನೆ. ಆಕೆ ಕರೆದಲ್ಲಿಗೆ ಹೋಗಬೇಕು, ಬೆಟ್ಟದಲ್ಲಿ ಕುಳಿತು ಮಾತನಾಡಬೇಕು, ಕಾಲೇಜಿನಲ್ಲಿ ತರಗತಿಗಳು ಇಲ್ಲ ಅಂದಾಗ ಆಕೆಯ ಜೊತೆ ಹರಟಬೇಕು, ಹೀಗೆ ಹತ್ತು ಹಲವಾರು ಸಂಗತಿಗಳು ಪ್ರೀತಿಯ ವೇಳೆ ಕಾಡುತ್ತವೆ. ಪ್ರೀತಿ ಮಾಡದಿದ್ದಾಗ ಇವೆಲ್ಲ ಇರಲ್ಲ. ಸೋ ಈ ಎಲ್ಲ ಹಿನ್ನಲೆಯಿಂದ ನಿಮಗೆ ಹೀಗೆ ಅನಿಸುತ್ತಿದೆ, ಆದ್ರೆ ನೀವು ಈಗ ನಿಮ್ಮ ಹುಡುಗಿ ಜೊತೆ ಮುಕ್ತವಾಗಿ ಮಾತನಾಡಿ ಓದಲು ಹೆಚ್ಚು ಗಮನ ಕೊಡಬೇಕಾಗಿದೆ ಎಂದೆಲ್ಲ ಹೇಳಿ ನಿಮ್ಮ ಸಮಸ್ಯೆ ಬಗ್ಗೆ ಮನವರಿಕೆ ಮಾಡಿ. ಎಲ್ಲವೂ ಸರಿ ಹೋಗಲಿದೆ..