Search


ನೀವು IAS ಮಾಡಿದ್ರೆ, ಜನ ನನ್ನನ್ನ 6 ಬಾರಿ MLA ಮಾಡವ್ರೆ; ದುರಂಕಾರ ಮನೇಲಿ ಇಟ್ಕೊಳ್ಳಿ ಎಂದ ರೇವಣ್ಣ

ಹಾಸನ ಜಿಲ್ಲಾಧಿಕಾರಿ ಮತ್ತು ಶಾಸಕ ಹೆಚ್‌.ಡಿ ರೇವಣ್ಣ ನಡುವಿನ ಬೀದಿ ಜಗಳ ತಾರಕಕ್ಕೇರಿದೆ, ಈ ಕುರಿತು ಶಾಸಕ ಹೆಚ್‌,ಡಿ ರೇವಣ್ಣ ಮಾತನಾಡಿದ್ದು ʻಅವರು ಐಎಎಸ್‌ ಮಾಡಿದ್ರೆ ನನ್ನನ್ನು ಜನ ಆರು ಬಾರಿ ಗೆಲ್ಲಿಸಿ ಶಾಸಕನನ್ನಾಗಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಲತಾಕುಮಾರಿ (K.S Latha Kumari) ಅವರ ವಿರುದ್ಧ ಕಿಡಿಕಾರಿದ್ದಾರೆ.

ಹಾಸನದಲ್ಲಿ (Hassan) ಮಾಧ್ಯಮಗಳ ಜೊತೆ ಅವರು ಶಾಸಕ ರೇವಣ್ಣ ʻನಾನು ಆರ್‌ಟಿಐನಲ್ಲಿ ಮೀಸಲಾತಿ ಪಟ್ಟಿ ತೆಗೆದುಕೊಂಡಿದ್ದೇನೆ. ಅವರಿಗೆ ವೈಯುಕ್ತಿಕ ಪೋನ್‌ ಕರೆ ಮಾಡಿದ್ದೇನೆ, ಅವರು ರಿಸೀವ್ ಮಾಡಿಲ್ಲ. ಜನಕ್ಕೆ ನೋವಾದಾಗ ನಾನು ಮಾತನಾಡಲೇಬೇಕು, ಒಬ್ಬ ರಾಜಕಾರಣಿ ಹೇಳಿದಂತೆ ಮೀಸಲಾತಿ ಪಟ್ಟಿ ನಿಗಧಿ ಮಾಡಿದ್ದಾರೆ, ಅದು ಯಾರು ಎಂಬುದನ್ನ ಸಮಯ ಬಂದಾಗ ಹೇಳ್ತೀನಿ. ನಾನು ಕೂಡ ನನ್ನ 30 ವರ್ಷದ ರಾಜಕೀಯದಲ್ಲಿ ಅನೇಕ ಹಿರಿಯ ಅಧಿಕಾರಿಗಳನ್ನ ನೋಡಿದ್ದೇನೆ, ಜಿಲ್ಲಾಧಿಕಾರಿಯಷ್ಟು ನಾನು ಓದಿಲ್ಲ, ಆದರೆ ನಾನು ನನ್ನ ಕ್ಷೇತ್ರದ 2 ಲಕ್ಷ ಜನರ ಕೂಲಿ ಮಾಡ್ತಿದ್ದೇನೆ ಎಂದು ರೇವಣ್ಣ ಹೇಳಿದರು.

ಮುಂದುವರಿದು ಮಾತನಾಡಿದ ರೇವಣ್ಣ ʻನಾನು ಸುಮಾರು ಜನ ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಇವರ ವರ್ತನೆಯಿಂದ ಬೇಜಾರಾಗಿದೆ. ಮುಂದಿನ ಸೋಮವಾರ ಎಲೆಕ್ಷನ್ ಕಮಿಷನ್, ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುತ್ತೇವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ನನ್ನ ಎದುರು ಇವರನ್ನು ಕರೆಸಲಿ, ಏನೇನು ನಡೆದಿದೆ ಹೇಳ್ತಿನಿ. ಕಾನೂನು ವಿರುದ್ಧವಾಗಿ ಏನೇನು ಮಾಡುತ್ತಿದ್ದಾರೆ ಸವಿಸ್ತಾರವಾಗಿ ಹೇಳ್ತೇನೆ, ಮೀಸಲಾತಿ ಪಟ್ಟಿಯನ್ನ RTIನಿಂದ ತರಿಸಿಕೊಂಡಿದ್ದೇನೆ. ಆರು ತಿಂಗಳು ಎಂಎಲ್‌ಎ ಗ್ರಾಂಟ್ ಕೊಡಲಿಲ್ಲ. ನಮ್ಮನ್ನು ಹಗುರವಾಗಿ ಕಂಡಾಗ ಯಾವ ರೀತಿ ಕಾಣಬೇಕು ಗೊತ್ತಿದೆ. ಈ ಜಿಲ್ಲಾಧಿಕಾರಿಯಿಂದ ಕಲಿಯಬೇಕಿಲ್ಲ ನಾನು. ಪಾಪ ಅವರಿಗೆ ದೇವರು ಒಳ್ಳೆಯದು ಮಾಡಲಿ.

ಕಳೆದ ಬಾರಿ ಹಾಸನಾಂಬ ಉತ್ಸವಕ್ಕೆ ಸೌಜನ್ಯಕ್ಕಾದರೂ ಕರೆದಿಲ್ಲ. ಈ ಸಾರಿ ನಾನು ಹಾಸನಾಂಬ ದೇವಾಲಯಕ್ಕೆ ಹೋಗುವುದೇ ಇಲ್ಲ, ಯಾಕೆ ಹೋಗಬೇಕು? ದುರಹಂಕಾರ ಇದ್ದರೆ ಅವರ ಮನೆಯಲ್ಲಿ ಇಟ್ಟುಕೊಳ್ಳಲಿ. ನಾನೇನು ಕೆಟ್ಟದಾಗಿ ನಡೆದುಕೊಂಡಿಲ್ಲ, ಹಾಗೇನಾದರೂ ಇದ್ದರೆ ತಿದ್ದಿಕೊಳ್ತಿನಿ. ನಾನು ಯಾವ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಲು ಹೋಗಿಲ್ಲ. ಮಹಿಳೆಯರಿಗೆ 33% ಮೀಸಲಾತಿ ತಂದಿದ್ದು ನಾವು. ಇವರಿಂದ ನಾನು ಏನೂ ಕಲಿಯಬೇಕಿಲ್ಲ ಎಂದಿದ್ದಾರೆ.

By Ravikumar - 24-08-2026


Ads in Post